ಆಂಟಿ ಕಳುಹಿಸಿದ ಆ ರೀಲ್ಸ್ ನೋಡಿ ವಿಜಯ್ ದೇವರಕೊಂಡ ರಿಪ್ಲೈ ಏನು?

ತೆಲುಗು ನಟ ವಿಜಯ್ ದೇವರಕೊಂಡ ಕ್ರೇಜ್ ದಿಢೀರ್ ಕಮ್ಮಿ ಆಗಿಬಿಟ್ಟಿದೆ. 'ಲೈಗರ್' ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದುಕೊಂಡಿದ್ದ ಆತನ ಕನಸು ನುಚ್ಚು ನೂರಾಗಿತ್ತು. 'ಕಿಂಗ್‌ಡಮ್' ಸಿನಿಮಾ ಮೂಲಕ ಕಂಬ್ಯಾಕ್ ಮಾಡಲು ದೇವರಕೊಂಡ ಸಿದ್ಧವಾಗಿದ್ದಾರೆ.

ಇತ್ತೀಚೆಗೆ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟುಹಬ್ಬವನ್ನು ವಿಜಯ್ ದೇವರಕೊಂಡ ಜೊತೆ ವಿದೇಶದಲ್ಲಿ ಆಚರಿಸಿಕೊಂಡಿದ್ದರು ಎಂದು ಸುದ್ದಿ ಆಗಿತ್ತು. ಇನ್ನು 'ಕಿಂಗ್‌ಡಮ್' ಬಳಿಕ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇವರಕೊಂಡಗೆ ದೊಡ್ಡ ಅಭಿಮಾನಿ ಬಳಗವಿದೆ. ತಮ್ಮ ಅಭಿಮಾನಿಗಳ ಜೊತೆ ಅವರು ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಸರ್‌ಪ್ರೈಸ್‌ ಗಿಫ್ಟ್‌ಗಳ ಮೂಲಕ ಮನಗೆಲ್ಲುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಅಭಿಮಾನಿಗಳ ಜೊತೆ ಟಚ್‌ನಲ್ಲಿ ಇರುತ್ತಾರೆ.

Vijay Devarakonda gives a reply to a fan who sent funny reels tor him

ಇತ್ತೀಚೆಗೆ ಹಿರಿಯ ಮಹಿಳೆಯೊಬ್ಬರು ವಿಜಯ್ ದೇವರಕೊಂಡಗೆ ಒಂದು ರೀಲ್ಸ್ ಅನ್ನು ಇನ್‌ಸ್ಟಾಗ್ರಾಂ ಮೆಸೇಜ್‌ನಲ್ಲಿ ಕಳುಹಿಸಿದ್ದಾರೆ. ಆ ರೀಲ್ಸ್‌ ಅನ್ನು ವಿಜಯ್ ದೇವರಕೊಂಡಗೆ ಯಾಕೆ ಕಳುಹಿಸಿದೆ ಎಂದು ಮಹಿಳೆಯನ್ನು ಮಗಳು ಕೇಳಿದ್ದಾಳೆ. "ವಿಜಯ್ ದೇವರಕೊಂಡ ಕ್ಲಾತಿಂಗ್ ಬ್ರ್ಯಾಂಡ್ ಹೊಂದಿದ್ದಾರಲ್ಲ, ಹಾಗಾಗಿ ಆತನಿಗೆ ಸಹಾಯವಾಗಬಹುದು ಎಂದು ಕಳುಹಿಸಿದೆ" ಎಂದು ಆ ವಯಸ್ಸಾದ ಮಹಿಳೆ ಹೇಳಿರುವುದನ್ನು ವೀಡಿಯೋ ಮಾಡಿ ಶೇರ್ ಮಾಡಿದ್ದಾರೆ.

"ಬಟ್ಟೆಗಳನ್ನು ಉಚಿತವಾಗಿ ಹೊಲಿಯುವ ಮತ್ತು ಉಚಿತವಾಗಿ ಆಲ್ಟ್ರೇಷನ್ ಮಾಡುವ ಜಾಗ ಇದು " ಎಂದು ಪ್ರಮೋಟ್ ಮಾಡಿರುವ ವೀಡಿಯೋ ಅದು. ಈ ಫನ್ನಿ ರೀಲ್ಸ್‌ಗೆ ವಿಜಯ್ ಕೂಡ ರಿಪ್ಲೇ ಮಾಡಿದ್ದಾರೆ. "ಥ್ಯಾಂಕ್ಯೂ ಆಂಟಿ. ನಿಮಗೂ ಇಂತಹ ಇಂಟ್ರೆಸ್ಟಿಂಗ್ ರೀಲ್ಸ್ ಅನ್ನು ಕಳುಹಿಸುತ್ತೇನೆ" ಎಂದು ವಿಜಯ್ ದೇವರಕೊಂಡ ಕಾಮೆಂಟ್ ಮಾಡಿದ್ದಾರೆ. ಸದ್ಯ ಅದು ವೈರಲ್ ಆಗ್ತಿದೆ.

ನಟನೆಯ ಜೊತೆಗೆ ವಿಜಯ್ ದೇವರಕೊಂಡ ಉದ್ಯಮ ಕ್ಷೇತ್ರದಲ್ಲಿ ಗುರ್ತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. 'ರೌಡಿ' ಎಂಬ ಕ್ಲಾತಿಂಗ್ ಬ್ರ್ಯಾಂಡ್ ಹೊಂದಿದ್ದಾರೆ. ಟೀಶರ್ಟ್, ಜೀನ್ಸ್ ಸೇರಿದಂತೆ ಮಹಿಳೆಯರು, ಪುರುಷರು ಧರಿಸುವ ಕಾಸ್ಟ್ಯೂಮ್‌ಗಳು ಈ ಬ್ರ್ಯಾಂಡ್‌ನಲ್ಲಿ ಸಿಗುತ್ತದೆ. ಈ ಹಿಂದೆ ರಶ್ಮಿಕಾ ಸೇರಿದಂತೆ ಕೆಲ ತಾರೆಯರು ಈ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಿದ್ದರು.

'ಪುಷ್ಪ' ಚಿತ್ರತಂಡಕ್ಕೆ ಇತ್ತೀಚೆಗೆ ವಿಜಯ್ ದೇವರಕೊಂಡ 'ರೌಡಿ' ಬ್ರ್ಯಾಂಡ್ ಟೀಶರ್ಟ್ ಕಳುಹಿಸಿಕೊಟ್ಟಿದ್ದರು. 'ಪುಷ್ಪ-2' ಎಂದು ಪ್ರಿಂಟ್ ಮಾಡಿದ್ದ ಆ ಟೀಶರ್ಟ್‌ ಅನ್ನು ಅಲ್ಲು ಅರ್ಜುನ್ ಧರಿಸಿ ವಿಜಯ್ ದೇವರಕೊಂಡಗೆ ಧನ್ಯವಾದ ತಿಳಿಸಿದ್ದರು. 'ಎವಡೇ ಸುಬ್ರಮಣ್ಯಂ' ಹಾಗೂ 'ಪೆಳ್ಳಿ ಚೂಪುಲು' ರೀತಿಯ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದರು. ರಶ್ಮಿಕಾ ಮಂದಣ್ಣ ಜೊತೆ ನಟಿಸಿದ 'ಗೀತಾ ಗೋವಿಂದಂ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.

'ಗೀತಾ ಗೋವಿಂದಂ' ಬಳಿಕ ವಿಜಯ್ ನಟಿಸಿದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಆದರೂ ತಮ್ಮ ಸ್ಟೈಲ್, ಮ್ಯಾನರಿಸಂ ಹಾಗೂ ಮಾತಿನ ಶೈಲಿಯಿಂದ ದೇವರಕೊಂಡ ಒಳ್ಳೆ ಫ್ಯಾನ್ ಫಾಲೋಯಿಂಗ್ ಸೃಷ್ಟಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 2 ಕೋಟಿಗೂ ಅಧಿಕ ಮಂದಿ ಫಾಲೋ ಮಾಡುತ್ತಿದ್ದಾರೆ. 'ಲೈಗರ್' ಸಿನಿಮಾ ಸೋಲು ದಿಢೀರನೆ ವಿಜಯ್ ದೇವರಕೊಂಡ ಕ್ರೇಜ್ ಕಮ್ಮಿ ಆಗುವಂತೆ ಮಾಡಿತ್ತು. ಮತ್ತೆ ಭರ್ಜರಿ ಕಂಬ್ಯಾಕ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಪದೇ ಪದೆ ಸುದ್ದಿ ಆಗುತ್ತದೆ. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಇಬ್ಬರೂ ಹೇಳುತ್ತಾ ಬರ್ತಿದ್ದಾರೆ. ದೇವರಕೊಂಡ ಮನೆಯಲ್ಲೇ ಹಬ್ಬ ಹರಿದಿನಗಳ ಸಂದರ್ಭದಲ್ಲಿ ರಶ್ಮಿಕಾ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ಇಬ್ಬರೂ ರೆಸ್ಟೋರೆಂಟ್‌ವೊಂದಕ್ಕೆ ಊಟ ಮಾಡಲು ಹೋಗಿದ್ದ ವೀಡಿಯೋಗಳು ವೈರಲ್ ಆಗಿತ್ತು.

More from Filmibeat

English summary
Vijay Devarakonda replied senior lady fan for her message
Read more about: vijay devarakonda tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X