Vijay Devarakonda: ವಿಜಯ್ ದೇವರಕೊಂಡ ಹಿಡಿದುಕೊಂಡಿರೋ ಹುಡುಗಿ ಕೈ ಯಾರದ್ದು..? ಏನ್ ಸಮಾಚಾರ ?
ವಿಜಯ್ ದೇವರಕೊಂಡ ಟಾಲಿವುಡ್‌ನ ಸೆನ್ಸೆಷನಲ್ ಹೀರೊ. ಪ್ರತಿ ಸಿನಿಮಾ ರಿಲೀಸ್ ಆಗುವಾಗಲೂ ಬೇರೆ ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಸಮಂತಾ ಜೊತೆ ನಟಿಸಿದ 'ಖುಷಿ' ಸಿನಿಮಾ ಬಿಡುಗಡೆ ವೇಳೆನೇ ವಿಜಯ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
ವಿಜಯ್ ಹಾಗೂ ಸಮಂತಾ ಕಾಂಬಿನೇಷನ್‌ನ ರೊಮ್ಯಾಂಟಿಕ್ ಸಿನಿಮಾ 'ಖುಷಿ' ಮುಂದಿನ ವಾರ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಇನ್ನೇನು ಅಡ್ವಾನ್ಸ್ ಬುಕಿಂಗ್ ಆಗುತ್ತೆ ಅನ್ನುವಾಗಲೇ ವಿಜಯ್ ದೇವರಕೊಂಡ ಮತ್ತೊಂದು 'ಖುಷಿ' ವಿಚಾರ ಹಂಚಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

ವಿಜಯ್ ದೇವರಕೊಂಡ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರೋ ಫೋಟೊವೊಂದು ವೈರಲ್ ಆಗಿದೆ. ಈ ಫೋಟೊ ಮೂಲಕ ತೆಲುಗು ಹೀರೊ ಏನು ಸುದ್ದಿ ಕೊಡುವುದಕ್ಕೆ ಹೊರಟಿದ್ದಾರೆ? ಅನ್ನೋದನ್ನು ಕುತೂಹಲದಿಂದಲೇ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಅಷ್ಟಕ್ಕೂ ಈ ಫೋಟೊದಲ್ಲಿ ಅಂತಹದ್ದೇನಿದೆ? ಫೋಟೊ ಶೇರ್ ಮಾಡಿದ ಹಿನ್ನೆಲೆ ಏನು? ತಿಳಿಯಲು ಮುಂದೆ ಓದಿ.
ಹುಡುಗಿ ಕೈ ಯಾರದ್ದು?
ವಿಜಯ್ ದೇವರಕೊಂಡ ಟಾಲಿವುಡ್‌ನ ಬೋಲ್ಡ್ ಹೀರೊ. ತನಗನಿಸಿದ್ದನ್ನು ನೇರವಾಗಿ ಹೇಳುವ ನಟ. ವಿಜಯ್ ಒಪ್ಪಿಕೊಳ್ಳುವ ಸಿನಿಮಾಗಳು ಕೂಡ ಅಷ್ಟೇ ಬೋಲ್ಡ್ ಆಗಿರುತ್ತೆ. ಇಂದು (ಆಗಸ್ಟ್ 29) ವಿಜಯ್ ದೇವರಕೊಂಡ ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹುಡುಗಿಯ ಕೈ ಮೇಲೆ ತನ್ನ ಕೈ ಇಟ್ಟಿದ್ದ ಫೋಟೊವನ್ನು ಶೇರ್ ಮಾಡಿದ್ದರು. ಈ ಫೋಟೊ ಪೋಸ್ಟ್ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರೊಂದಿಗೆ ವಿಜಯ್ ದೇವರಕೊಂಡ ಬರೆದುಕೊಂಡ ಸಾಲುಗಳು ಅಷ್ಟೇ ಸದ್ದು ಮಾಡುತ್ತಿವೆ.

"ಏನೇನೋ ನಡೆಯುತ್ತಿದೆ ಇದು ಮಾತ್ರ ಸ್ಪೆಷಲ್"
ವಿಜಯ್ ದೇವರಕೊಂಡು ಫೋಟೊ ಶೇರ್ ಮಾಡಿಕೊಂಡಿದ್ದೇನೋ ಸರಿ. ಆದರೆ, ಇದರೊಂದಿಗೆ " ಏನೇನೋ ನಡೆಯುತ್ತಿದೆ.. ಆದರೆ, ಇದು ಮಾತ್ರ ನಿಜಕ್ಕೂ ವಿಶೇಷ. ಶೀಘ್ರದಲ್ಲಿ ಅನೌನ್ಸ್ ಆಗುತ್ತೆ" ಎಂದು ಬರೆದು ಫೋಟೊ ಶೇರ್ ಮಾಡಿದ್ದರು. ಈ ಫೋಟೊ ಕೆಲ ಕಾಲ ವಿಜಯ್ ದೇವರಕೊಂಡ ಅಭಿಮಾನಿಗಳು ಮದುವೆ ಬಗ್ಗೆ ಅನೌನ್ಸ್ ಮಾಡಬಹುದಾ? ಎಂದು ಲೆಕ್ಕಚಾರ ಹಾಕಿದ್ದರು.
ವಿಜಯ್ ದೇವರಕೊಂಡ ಮದುವೆಗೆ ಒತ್ತಾಯ
ಟಾಲಿವುಡ್‌ನ ಸೆನ್ಸೆಷನಲ್ ಹೀರೊ ವಿಜಯ್ ದೇವರಕೊಂಡಗೆ ಮನೆಯಲ್ಲಿ ಮದುವೆ ಒತ್ತಡ ಹಾಕುತ್ತಿದ್ದಾರಂತೆ. ಈ ಮಾತನ್ನು ಸ್ವತ: ವಿಜಯ್ 'ಖುಷಿ' ಸಿನಿಮಾ ಸಂದರ್ಶನದ ಸಂದರ್ಭದಲ್ಲಿ ಹೇಳಿಕೊಂಡಿದ್ದರು. ಆದರೆ, ಈ ಫೋಟೊ ಮದುವೆ ಅನೌನ್ಸ್‌ಮೆಂಟ್ ಅಲ್ಲ. ಬದಲಾಗಿ 'ಗೀತಾ ಗೋವಿಂದಂ' ನಿರ್ದೇಶಕ ಪರಶುರಾಮ್ ಜೊತೆಗಿನ ಹೊಸ ಸಿನಿಮಾ ಅನೌನ್ಸ್‌ಮೆಂಟ್ ಅಂತ ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ನಾಯಕಿಯರೊಂದಿಗೆ ವಿಜಯ್
ವಿಜಯ್ ದೇವರಕೊಂಡ ಹೆಸರು ರಶ್ಮಿಕಾ ಮಂದಣ್ಣ ಜೊತೆ ತಳುಕು ಹಾಕಿಕೊಂಡಿತ್ತು. ಆದ್ರೀಗ 'ಖುಷಿ' ಸಿನಿಮಾ ಬಳಿಕ ವಿಜಯ್ ಹಾಗೂ ಸಮಂತಾ ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದಾರೆ ಎಂದು ಟಾಲಿವುಡ್‌ನಲ್ಲಿ ಗುಸುಗುಸು ಇದೆ. ಇದು ಕೇವಲ 'ಖುಷಿ' ಸಿನಿಮಾ ಪ್ರಚಾರಕ್ಕಾಗಿನಾ? ಅಥವಾ ನಿಜಕ್ಕೂ ಇಬ್ಬರ ನಡುವೆ ಏನಾದರೂ ಇದೆಯಾ? ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.


Click it and Unblock the Notifications











