For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ರಶ್ಮಿಕಾ ಎದುರು ಮಂಡಿಯೂರಿ ಪ್ರಪೋಸ್ ಮಾಡಿದ ದೇವರಕೊಂಡ?

  |

  ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ಕನ್ನಡ ನಟಿ ರಶ್ಮಿಕಾ ಮಂದಣ್ಣ ಸೌತ್ ಇಂಡಸ್ಟ್ರಿಯ ಹಿಟ್ ಜೋಡಿ. 'ಗೀತಾ ಗೋವಿಂದಂ ಹಾಗೂ 'ಡಿಯರ್ ಕಾಮ್ರೇಡ್' ಚಿತ್ರಗಳ ನಂತರ ಈ ಕಾಂಬಿನೇಷನ್ ಮತ್ತೆ ಒಂದಾಗಲಿಲ್ಲ.

  ವೈರಲ್ ಆಗ್ತಿದೆ ವಿಜಯ್ ದೇವರಕೊಂಡ ರಶ್ಮಿಕಾಗೆ ಪ್ರಪೋಸ್ ಮಾಡ್ತಿರೋ ವಿಡಿಯೋ | Filmibeat Kannada

  ಯಾವ ಚಿತ್ರದಲ್ಲಿ ಮತ್ತೆ ಒಟ್ಟಿಗೆ ನಟಿಸುತ್ತಾರೆ ಎಂದು ಕುತೂಹಲದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಈಗೊಂದು ಸರ್ಪ್ರೈಸ್ ವಿಡಿಯೋ ಸಿಕ್ಕಿದೆ. ದೇವರಕೊಂಡ ಅವರು ರಶ್ಮಿಕಾ ಮಂದಣ್ಣ ಎದುರು ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ರಶ್ಮಿಕಾ-ವಿಜಯ್ ದೇವರಕೊಂಡ; ಮುಖ ಮುಚ್ಚಿಕೊಂಡು ಹೊರನಡೆದಿದ್ದೇಕೆ?ಜಿಮ್‌ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ರಶ್ಮಿಕಾ-ವಿಜಯ್ ದೇವರಕೊಂಡ; ಮುಖ ಮುಚ್ಚಿಕೊಂಡು ಹೊರನಡೆದಿದ್ದೇಕೆ?

  ರಶ್ಮಿಕಾ ಮಂದಣ್ಣ ಎದುರು ಮಂಡಿಯೂರಿ ಕುಳಿತಿರುವ ವಿಜಯ್ ದೇವರಕೊಂಡ ಕೈಯಲ್ಲಿ ಉಡುಗೊರೆ ಹಿಡಿದುಕೊಂಡಿದ್ದಾರೆ. ಈ ವಿಡಿಯೋ ನೋಡಿದ ಫ್ಯಾನ್ಸ್ ''ಪ್ರಪೋಸ್ ಮಾಡ್ತಿದ್ದಾರೆ'' ಎಂದು ಕಾಮೆಂಟ್ ಮಾಡಿದ್ದಾರೆ.

  ಅಂದ್ಹಾಗೆ, ಇದು ಜಾಹೀರಾತು ಚಿತ್ರೀಕರಣ. ನಟಿ ರಶ್ಮಿಕಾ ಮಂದಣ್ಣ ಅವರು ಸಂತೂರ್ ಕಂಪನಿಗೆ ರಾಯಭಾರಿಯಾಗಿ ನೇಮಕವಾಗಿದ್ದು, ನೂತನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಜೊತೆ ದೇವರಕೊಂಡ ಸಹ ಈ ಜಾಹೀರಾತಿನಲ್ಲಿ ನಟಿಸಿದ್ದಾರೆ.

  ಇದಕ್ಕೂ ಮುಂಚೆ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ದೇವರಕೊಂಡ ಕೈಯಲ್ಲಿ ಉಡುಗೊರೆ ಇದ್ದ ಹಿಂಬದಿಯ ಫೋಟೋ ಶೇರ್ ಮಾಡಿ, 'ಇದು ಯಾರು ಗೆಸ್ ಮಾಡಿ' ಎಂದು ಕೇಳಿದ್ದರು.

  ಪ್ರಸ್ತುತ, ಬಾಲಿವುಡ್‌ನಲ್ಲಿ ಎರಡು ಸಿನಿಮಾ ಮಾಡ್ತಿರುವ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಜೊತೆ 'ಪುಷ್ಪ' ಸಿನಿಮಾದಲ್ಲಿ ನಟಿಸಿದ್ದಾರೆ. ಮತ್ತೊಂದೆಡೆ ವಿಜಯ್ ದೇವರಕೊಂಡ 'ಲೈಗರ್' ಎಂಬ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೂರಿ ಜಗನ್ನಾಥ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ.

  English summary
  Telugu actor Vijay Devarakonda Has Give Gift to Rashmika Mandanna In Ad Shoot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X