ಮದುವೆ ಬಗ್ಗೆ ಕೇಳಿದ್ದಕ್ಕೆ 'ಲವ್' ವಿಚಾರ ಬಾಯ್ಬಿಟ್ಟ ವಿಜಯ್ ದೇವರಕೊಂಡ

Recommended Video

ವಿಜಯ್ ದೇವರಕೊಂಡ ಲವರ್ ಯಾರು ಗೊತ್ತಾ..? | Vijay Devarakonda | Lover | Filmibeat Kannada

ಸೌತ್ ಸ್ಟಾರ್ ನಟ ವಿಜಯ್ ದೇವರಕೊಂಡ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಆಗಾಗ ಸುದ್ದಿಯಾಗುತ್ತಿದ್ದಾರೆ. 'ಗೀತಾ ಗೋವಿಂದಂ' ಚಿತ್ರದ ರಶ್ಮಿಕಾ ಮಂದಣ್ಣ ಜೊತೆ ದೇವರಕೊಂಡ ಹೆಸರು ತಳುಕು ಹಾಕಿಕೊಂಡಿತ್ತು.

ಆದರೆ ಅದು ನಿಜ ಆಗಿರಲಿಲ್ಲ. ಈ ಮಧ್ಯೆ ವಿದೇಶಿ ಹುಡುಗಿ ಜೊತೆ ದೇವರಕೊಂಡ ಪ್ರೀತಿಯಲ್ಲಿದ್ದಾರೆ ಎಂಬ ಸುದ್ದಿ ಹೊರಬಿತ್ತು. ಇದಕ್ಕೆ ಪುಷ್ಠಿ ಕೊಡುವಂತೆ ವಿದೇಶಿ ಹುಡುಗಿಯೊಬ್ಬರ ಜೊತೆ ಆತ್ಮೀಯವಾಗಿದ್ದ ಫೋಟೋಗಳು ಬಹಿರಂಗವಾಗಿದ್ದವು.

ಇದುವರೆಗೂ ದೇವರಕೊಂಡ ತಮ್ಮ ಖಾಸಗಿ ಜೀವನದ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ನಾನು ಸಿಂಗಲ್ ಎಂದು ಹೇಳಿಕೊಂಡೇ ಸುತ್ತಾಡುತ್ತಿದ್ದಾರೆ. ಇದೀಗ, ಮತ್ತೆ ವಿಜಯ್ ದೇವರಕೊಂಡ ಅವರ ಮದುವೆ ಕುರಿತು ಸುದ್ದಿಯಾಗುತ್ತಿದೆ.

Vijay Devarakonda Has React About His Marriage

ಪ್ರೇಮಿಗಳ ದಿನದ ಪ್ರಯುಕ್ತ ದೇವರಕೊಂಡ ನಟನೆಯ 'ವರ್ಲ್ಡ್ ಫೇಮಸ್ ಲವರ್' ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕಾರ್ಯಕ್ರಮದಲ್ಲಿ ಮದುವೆ ಕುರಿತು ವಿಜಯ್ ಅವರನ್ನು ಪ್ರಶ್ನಿಸಲಾಯಿತು.

ಇದಕ್ಕೆ ಉತ್ತರಿಸಿದ ವಿಜಯ್ ದೇವರಕೊಂಡ ''ಮದುವೆ ಕುರಿತು ನನಗೆ ಗೌರವವಿದೆ. ಆದರೆ ಅದಕ್ಕೆ ನಾನು ರೆಡಿಯಾಗಿಲ್ಲ. ಸದ್ಯಕ್ಕೆ ನಾನು ನನ್ನ ವೃತ್ತಿ ಜೊತೆ ಲವ್ವಲ್ಲಿ ಇದ್ದೀನಿ. ಇನ್ನು ಅದರಲ್ಲಿ ಸಾಧಿಸಬೇಕಾಗಿದ್ದು ಹೆಚ್ಚಿದೆ'' ಎಂದು ಹೇಳಿದ್ದಾರೆ.

More from Filmibeat

English summary
Telugu actor Vijay devarakonda has react about marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X