For Quick Alerts
  ALLOW NOTIFICATIONS  
  For Daily Alerts

  ಸಹನಟಿಯನ್ನು ಅಸಭ್ಯವಾಗಿ ತಬ್ಬಿಕೊಂಡ ವಿಜಯ್ ದೇವರಕೊಂಡ: ನೆಟ್ಟಿಗರಿಂದ ತರಾಟೆ

  |

  ನಟ ವಿಜಯ್ ದೇವರಕೊಂಡ ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೆ ವಿವಾದಾತ್ಮಕ ನಡೆಗಳಿಂದಲೂ ಖ್ಯಾತರಾದವರು. ಅದರಲ್ಲಿಯೂ ನಟಿಯರೊಂದಿಗೆ ಇವರ ನಡುವಳಿಕೆ ಹಲವು ಭಾರಿ ವಿವಾದ ಹುಟ್ಟು ಹಾಕಿದೆ.

  ದರ್ಶನ್ ಹಾಗು ವಿಜಯ್ ಆಗ್ತಾರೆ ಮುಖಾಮುಖಿ

  ಕೆಲವು ದಿನಗಳ ಹಿಂದೆ ಟಿವಿ ಶೋ ಒಂದರಲ್ಲಿ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಮೇಲೆ ಕಾಲು ಹಾಕಿ ನೆಟ್ಟಿಗರಿಂದ ಉಗಿಸಿಕೊಂಡಿದ್ದ ವಿಜಯ್ ದೇವರಕೊಂಡ, ಸಹ ನಟಿಯನ್ನು ಅಸಭ್ಯವಾಗಿ ತಬ್ಬಿಕೊಂಡು ವಿವಾದಕ್ಕೆ ಕಾರಣರಾಗಿದ್ದಾರೆ.

  ವಿಜಯ್ ದೇವರಕೊಂಡ ಪ್ರಸ್ತುತ ತೆಲುಗು ಚಿತ್ರ ''ಫೈಟರ್'' ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದು, ನಾಯಕಿ ಅನನ್ಯಾ ಪಾಂಡೆ ಅವರನ್ನು ಸೆಟ್‌ನಲ್ಲಿ ತಬ್ಬಿಕೊಂಡಿರುವ ಚಿತ್ರ ವೈರಲ್ ಆಗಿದೆ.

  ನಟಿಯ ನಡು ತಬ್ಬಿದ ವಿಜಯ್ ದೇವರಕೊಂಡ

  ನಟಿಯ ನಡು ತಬ್ಬಿದ ವಿಜಯ್ ದೇವರಕೊಂಡ

  ಕುರ್ಚಿಯ ಮೇಲೆ ಕುಳಿತಿರುವ ವಿಜಯ್ ದೇವರ್‌ಕೊಂಡ, ಶಾರ್ಟ್ ಟಿ-ಶರ್ಟ್ ಧರಿಸಿ ಸೊಂಟದ ಪ್ರದರ್ಶನ ಮಾಡುತ್ತಿರುವ ಅನನ್ಯಾ ರ ನಡುವನ್ನೇ ತಬ್ಬಿಕೊಂಡಿದ್ದಾರೆ. ಈ ಚಿತ್ರ ಭಾರಿ ವೈರಲ್ ಆಗಿದೆ. ವಿಜಯ್ ದೇವರಕೊಂಡ ತಬ್ಬಿಕೊಂಡಿದ್ದಕ್ಕೆ ಅನನ್ಯಾ ಪಾಂಡೆ ಮುಜುಗರ ಅನುಭವಿಸುತ್ತಿರುವ ಭಾವ ಚಿತ್ರದಲ್ಲಿ ಕಾಣುತ್ತಿದೆ.

  ರೊಮ್ಯಾಂಟಿಕ್ ಚಿತ್ರ ವೈರಲ್

  ರೊಮ್ಯಾಂಟಿಕ್ ಚಿತ್ರ ವೈರಲ್

  ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಅವರ ಇನ್ನೂ ಕೆಲವು ಚಿತ್ರಗಳು ಕೆಲ ದಿನಗಳ ಹಿಂದೆ ವೈರಲ್ ಆಗಿದ್ದವು. ಅದರಲ್ಲಿ ವಿಜಯ್ ದೇವರಕೊಂಡ ಬೈಕ್ ಓಡಿಸುತ್ತಿದ್ದರೆ, ಮಾದಕ ಉಡುಗೆ ತೊಟ್ಟಿದ್ದ ಅನನ್ಯಾ ಪಾಂಡೆ ಬೈಕ್‌ನ ಹ್ಯಾಂಡಲ್ ಮೇಲೆ ಕುಳಿತಿದ್ದರು.

  ರಶ್ಮಿಕಾ ಮಂದಣ್ಣ ಮೇಲೆ ಕಾಲು ಹಾಕಿದ್ದ ದೇವರಕೊಂಡ

  ರಶ್ಮಿಕಾ ಮಂದಣ್ಣ ಮೇಲೆ ಕಾಲು ಹಾಕಿದ್ದ ದೇವರಕೊಂಡ

  ವಿಜಯ್ ದೇವರಕೊಂಡ ತಮ್ಮ ಸಹನಟಿಯರ ಜೊತೆ ಅಸಭ್ಯವಾಗಿ ವರ್ತಿಸಿ ಉಗಿಸಿಕೊಂಡಿರುವುದು ಇದು ಮೊದಲೇನಲ್ಲ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ ಮಂದಣ್ಣ ಅವರ ಮೇಲೆ ಅಸಭ್ಯವಾಗಿ ಕಾಲು ಹಾಕಿ ನೆಟ್ಟಿಗರಿಂದ ಉಗಿಸಿಕೊಂಡಿದ್ದರು. ವೇದಿಕೆ ಮೇಲೆ ಅಸಭ್ಯವಾಗಿ ಮಾತನಾಡಿದ್ದು ಸಹ ವಿವಾದಕ್ಕೆ ಕಾರಣವಾಗಿತ್ತು.

  ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಸಿನಿಮಾ

  ಪುರಿ ಜಗನ್ನಾಥ್ ನಿರ್ದೇಶಿಸುತ್ತಿರುವ ಸಿನಿಮಾ

  ವಿಜಯ್ ದೇವರಕೊಂಡ ಅನನ್ಯಾ ಪಾಂಡೆ ನಟಿಸುತ್ತಿರುವ 'ಫೈಟರ್' ಚಿತ್ರವನ್ನು ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶಿಸುತ್ತಿದ್ದಾರೆ. ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪುರಿ ಜಗನ್ನಾಥ್ ಅವರೊಂದಿಗೆ ವಿಜಯ್ ದೇವರಕೊಂಡ ಮಾಡುತ್ತಿರುವ ಮೊದಲ ಸಿನಿಮಾ ಇದು.

  English summary
  Actor Vijay Devarakonda hugged odly actress Ananya Panday photo went viral in social media. Both acting in bollywood movie fighter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X