ಹಿಟ್ ನಿರ್ದೇಶಕ ಜೊತೆ ಕೈಜೋಡಿಸಿದ ಅರ್ಜುನ್ ರೆಡ್ಡಿ: ಪ್ಯಾನ್ ಇಂಡಿಯಾ ಸಿನಿಮಾ
ತೆಲುಗು ಸಿನಿರಂಗದ ಸೂಪರ್ ಹಿಟ್ ನಿರ್ದೇಶಕ ಸುಕುಮಾರ್ ಅವರ ಮುಂದಿನ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸುವುದು ಖಾತ್ರಿಯಾಗಿದೆ.
ಆರ್ಯಾ, ನಾನ್ನಕು ಪ್ರೇಮತೊ, ನೇನೊಕ್ಕಡಿನೆ, ರಂಗಸ್ಥಳಂ, 100% ಲವ್ ನಂಥಹಾ ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸುಕುಮಾರ್ ನಿರ್ದೇಶದ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ.
ಸುಕುಮಾರ್ ಸಿನಿಮಾದಲ್ಲಿ ತಾವು ನಟಿಸುತ್ತಿರುವ ವಿಷಯವನ್ನು ಸ್ವತಃ ದೇವರಕೊಂಡ, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಅವಕಾಶದಿಂದ ಪುಳಕಿತನಾಗಿದ್ದೇನೆ ಎಂದೂ ಸಹ ಹೇಳಿದ್ದಾರೆ ವಿಜಯ್ ದೇವರಕೊಂಡ.

ಪುಷ್ಪಾ ಸಿನಿಮಾದಲ್ಲಿ ಸುಕುಮಾರ್ ಬ್ಯುಸಿ
ನಿರ್ದೇಶಕ ಸುಕುಮಾರ್ ಪ್ರಸ್ತುತ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಮೊದಲ ಹಂತದ ಚಿತ್ರೀಕರಣ ಈಗಷ್ಟೆ ಪ್ರಾರಂಭವಾಗಿದೆ.

2022 ಕ್ಕೆ ಸಿನಿಮಾ ಬಿಡುಗಡೆ
ವಿಜಯ್ ದೇವರಕೊಂಡ-ಸುಕುಮಾರ್ ಕಾಂಬಿನೇಶನ್‌ನ ಸಿನಿಮಾ 2021 ರ ಅಂತ್ಯದ ವೇಳೆಗೆ ಸೆಟ್ಟೇರಲಿದ್ದು, 2022 ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೇದಾರ ಸೆಲಗಮನಶೆಟ್ಟಿ ನಿರ್ಮಿಸುತ್ತಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ
ಫ್ಯಾಲ್ಕಂ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಣಗೊಳ್ಳುತ್ತಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆಯಂತೆ. ಸಿನಿಮಾವನ್ನು ತೆಲುಗು ಜೊತೆಗೆ, ಹಿಂದಿ, ತಮಿಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡುವ ಇರಾದೆ ಚಿತ್ರತಂಡಕ್ಕಿದೆ.
Recommended Video

ಮೂರು ಸಿನಿಮಾಗಳು ದೇವರಕೊಂಡ ಕೈಯಲ್ಲಿವೆ
ವಿಜಯ್ ದೇವರಕೊಂಡ ಪ್ರಸ್ತುತ ಪುರಿ ಜಗನ್ನಾಥ್ ನಿರ್ದೇಶನದ ಫೈಟರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ನಿರ್ದೇಶಕ ಶಿವ ನಾರಾಯಣ ನಿರ್ದೇಶನದ ಸಿನಿಮಾದಲ್ಲಿ ಸಹ ನಟಿಸುತ್ತಿದ್ದಾರೆ. ಆನಂದ್ ಅನ್ನಮಲೈ ನಿರ್ದೇಶನದ ಹೀರೊ ಸಿನಿಮಾಕ್ಕೂ ಡೇಟ್ಸ್ ನೀಡಿದ್ದಾರೆ. ಇದೆಲ್ಲವುಗಳ ನಂತರವೇ ಸುಕುಮಾರ್ ಜೊತೆ ಚಿತ್ರೀಕರಣಕ್ಕೆ ತೆರಳಲಿದ್ದಾರೆ ವಿಜಯ್ ದೇವರಕೊಂಡ.


Click it and Unblock the Notifications











