For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿಯನ್ನು ಹಾಡಿ ಹೊಗಳಿದ ವಿಜಯ್ ದೇವರಕೊಂಡ

  |

  ಬಾಲಿವುಡ್ ನಟಿ ಅನನ್ಯ ಪಾಂಡೆ ಸೌತ್ ಇಂಡಸ್ಟ್ರಿಗೆ ಕಾಲಿಟ್ಟಿದ್ದು, ವಿಜಯ್ ದೇವರಕೊಂಡ ನಟನೆಯ ಫೈಟರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪೂರಿ ಜಗನ್ನಾಥ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

  ಬಾಲಿವುಡ್‌ನಲ್ಲಿ ಸ್ಟಾರ್ ನಟ ಮತ್ತು ನಿರ್ದೇಶಕರ ಜೊತೆ ಕೆಲಸ ಮಾಡಿರುವ ಅನನ್ಯ ಪಾಂಡೆ ಮೊದಲ ಸಲ ವಿಜಯ್ ದೇವರಕೊಂಡ ಹಾಗೂ ಪೂರಿ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹಾಗಾಗಿ, ಈ ಜೋಡಿಯ ಮೇಲೆ ನಿರೀಕ್ಷೆ ಸಹ ಹೆಚ್ಚಿದೆ. ಇತ್ತೀಚಿಗಷ್ಟೆ ಖ್ಯಾತ ವೆಬ್‌ಸೈಟ್‌ವೊಂದಕ್ಕೆ ಸಂದರ್ಶನ ನೀಡಿರುವ ವಿಜಯ್ ದೇವರಕೊಂಡ, ಅನನ್ಯ ಪಾಂಡೆ ಅವರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

  ವಿಜಯ್ ದೇವರಕೊಂಡ ಸಹೋದರ ಚಿತ್ರ ನೋಡಿ ಗುಣಗಾನ ಮಾಡಿದ ರಶ್ಮಿಕಾ

  ಈ ಚಿತ್ರ ಒಳ್ಳೆಯ ಹೆಸರು ಕೊಡುತ್ತೆ

  ಈ ಚಿತ್ರ ಒಳ್ಳೆಯ ಹೆಸರು ಕೊಡುತ್ತೆ

  ''ಅನನ್ಯ ಪಾಂಡೆ ಓರ್ವ ಸಹೃದಯಿ. ಒಳ್ಳೆಯ ಹುಡುಗಿ. ತೆಲುಗು ಜನರು ಮತ್ತು ಸೌತ್ ಇಂಡಸ್ಟ್ರಿಯವರು ಅನನ್ಯ ಅವರನ್ನು ನೋಡುವುದಕ್ಕೆ ಖುಷಿ ಪಡ್ತಾರೆ. ಚಿತ್ರವನ್ನು ಶೇಕಡಾ 50ರಷ್ಟು ಮುಗಿಸಿದ್ದೇವೆ, ನಿಜಕ್ಕೂ ಆಕೆ ಗ್ರೇಟ್. ನಂಬಲಾಗದಷ್ಟು ಉತ್ತಮ ಕೆಲಸ ಮಾಡಿದ್ದಾರೆ. ಈ ಚಿತ್ರ ಆಕೆಗೆ ಬಹಳ ದೊಡ್ಡ ಮಟ್ಟದ ಪ್ರತಿಫಲ ನೀಡುತ್ತದೆ ಎಂಬ ನಂಬಿಕೆ ನನಗಿದೆ'' ಎಂದು ಹೇಳಿದ್ದಾರೆ.

  ಎರಡು ವರ್ಷದಲ್ಲಿ ನಾಲ್ಕು ಸಿನಿಮಾ

  ಎರಡು ವರ್ಷದಲ್ಲಿ ನಾಲ್ಕು ಸಿನಿಮಾ

  2019ರಲ್ಲಿ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ಬಿಟೌನ್ ಪ್ರವೇಶ ಮಾಡಿದ ಅನನ್ಯ ಪಾಂಡೆ ಇದುವರೆಗೂ ಕೇವಲ ನಾಲ್ಕು ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಒಂದಕ್ಕಿಂತ ಒಂದು ಚಿತ್ರದಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಇದು ಅವರ ವೃತ್ತಿ ಜೀವನದ ಯಶಸ್ಸು ಸಾಧಿಸಲು ಕಾರಣವಾಗಿದೆ.

  ಸಮಂತಾ ಟಾಕ್ ಶೋನಲ್ಲಿ ಮದುವೆ ಬಗ್ಗೆ ನಿಜ ಬಿಚ್ಚಿಟ್ಟ ವಿಜಯ್ ದೇವರಕೊಂಡ

  ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟನೆ

  ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟನೆ

  ಅನನ್ಯ ಕೊನೆಯ ಚಿತ್ರ 'ಖಾಲಿ ಪೀಲೆ'. ಇಶಾನ್ ಕತ್ತಾರ್ ಜೊತೆ ನಟಿಸಿದ್ದ ಅನನ್ಯಗೆ ಈ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿದೆ. ಸದ್ಯ, ವಿಜಯ್ ದೇವರಕೊಂಡ ಜೊತೆ ಫೈಟರ್ ಹಾಗೂ ಶಕುನ್ ಭತ್ರಾ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅನನ್ಯ ಪಾಂಡೆ ನಟಿಸುತ್ತಿದ್ದಾರೆ.

  ಫೈಟರ್ ಚಿತ್ರದ ಕುರಿತು

  ಫೈಟರ್ ಚಿತ್ರದ ಕುರಿತು

  ಫೈಟರ್ ಸಿನಿಮಾ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಪೂರಿ ಜಗನ್ನಾಥ್ ಕಥೆ-ಚಿತ್ರಕಥೆ-ಸಂಭಾಷಣೆ, ನಿರ್ದೇಶನ ಹಾಗೂ ನಟಿ ಚಾರ್ಮಿ ಜೊತೆ ಸೇರಿ ನಿರ್ಮಾಣ ಸಹ ಮಾಡುತ್ತಿದ್ದಾರೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿದಿದೆ.

  English summary
  Tollywood stars Vijay Devarakonda praised Bollywood actress Ananya pandey. she is acting in fighter movie with devarakonda.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X