'ಲೈಗರ್' ಸೋಲು, ಸಂಭಾವನೆಯ ಹಿಂದಿರುಗಿಸಿದ ವಿಜಯ್ ದೇವರಕೊಂಡ!

ವಿಜಯ್ ದೇವರಕೊಂಡ ಅವರ ಪ್ಯಾನ್ ಇಂಡಿಯಾ ಸಿನಿಮಾ ಪ್ರೇಕ್ಷಕರ ಮನ ಗೆಲ್ಲಲು ಸೋತಿದೆ. ಭಾರೀ ನಿರೀಕ್ಷೆಗಳ ನಡುವೆ ಬಂದಿದ್ದ ಲೈಗರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ. ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಲಿಲ್ಲ. ವಿತರಕರು ಕೂಡ ಈ ಚಿತ್ರದ ಲಾಸ್ ಬಗ್ಗೆ ಮಾತನಾಡಿದ್ದರು.

ಬಿಡುಗಡೆಗೂ ಮೊದಲು ಭಾರೀ ನಿರೀಕ್ಷೆ ಹುಟ್ಟು ಹಾಕಿತ್ತು ಈ ಚಿತ್ರ. ವಿಜಯ್ ದೇವರಕೊಂಡ ಸಿನಿಮಾ ಎನ್ನುವ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ ರಿಲೀಸ್ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ಕಂಡಿದೆ.

ಚಿತ್ರದ ಕಲೆಕ್ಷನ್ ಕಳಪೆಯಾದ ಕಾರಣ ಈ ಚಿತ್ರದ ನಿರ್ಮಾಣದಲ್ಲಿ ಭಾಗಿಯಾದವರೆಲ್ಲಾ ನಷ್ಟ ಅನುಭವಿಸಿದ್ದಾರೆ ಎನ್ನಲಾಗಿದೆ.

Vijay Devarkonda Return His Payment To Charmy, Puri Jagannath, Because Og Liger Loss

ಈ ಹಿನ್ನಲೆ ನಿರ್ಮಾಪಕರ ನಷ್ಟವನ್ನು ಭರಿಸಲು ವಿಜಯ್ ದೇವರಕೊಂಡ ಮುಂದಾಗಿದ್ದಾರೆ. 'ಲೈಗರ್' ಚಿತ್ರಕ್ಕಾಗಿ ತೆಗೆದುಕೊಂಡ ಅರ್ಧದಷ್ಟು ಸಂಭಾವನೆಯನ್ನು ಹಿಂತಿರುಗಿಸಲು ಸಿದ್ಧರಾಗಿದ್ದಾರೆ. ಲೈಗರ್ ಚಿತ್ರಕ್ಕಾಗಿ ವಿಜಯ್ ದೇವರಕೊಂಡ 15 ಕೋಟಿ ತೆಗೆದುಕೊಂಡಿದ್ದಾರೆ. ಅದೇ ರೀತಿ ನಾನ್ ಥಿಯೇಟರ್ ರೈಟ್ಸ್‌ನಲ್ಲೂ ಅವರ ಪಾಲು ಇದೆ. ಆದರೆ ಚಿತ್ರ ಸೋತು ನಿರ್ಮಾಪಕರಿಗೆ ನಷ್ಟವಾದ ಕಾರಣ ವಿಜಯ್ ದೇವರಕೊಂಡ 6 ಕೋಟಿ ರೂಪಾಯಿಗಳನ್ನು ಹಿಂತಿರುಗಿಸುತ್ತಿದ್ದಾರೆ ಎನ್ನಲಾಗಿದೆ.

ಈ ವಿಷಯವನ್ನು ಪುರಿ ಹಾಗೂ ಚಾರ್ಮಿಗೂ ತಿಳಿಸಲಾಗಿದೆ ಎಂದು ವರದಿಯಾಗಿದೆ. ಅವರ ಮುಂದಿನ ಚಿತ್ರ ಜನ ಗಣ ಮನ ಕೂಡ ಪುರಿ ಮತ್ತು ಚಾರ್ಮಿ ಜೊತೆ ಮಾಡಬೇಕಾಗಿರುವುದರಿಂದ ಆ ಚಿತ್ರ ಯಶಸ್ವಿಯಾದರೆ ಲಾಭದ ಪಾಲು ತೆಗೆದುಕೊಳ್ಳಲು ವಿಜಯ್ ದೇವರಕೊಂಡ ಯೋಜಿಸಿದ್ದಾರೆ. ಅದೇನೇ ಆದ್ರೂ ಇಂತಹ ಪರಿಸ್ಥಿತಿಯಲ್ಲಿ ವಿಜಯ್ 6 ಕೋಟಿ ರೂಪಾಯಿಯವರೆಗೂ ವಾಪಸ್ ನೀಡಿರುವುದು ಗ್ರೇಟ್ ಎಂದೇ ಹೇಳಲಾಗ್ತಿದೆ.

Vijay Devarkonda Return His Payment To Charmy, Puri Jagannath, Because Og Liger Loss

ಚಾರ್ಮಿ ಮತ್ತು ಕರಣ್ ಜೋಹರ್ ಜೊತೆಗೆ, ನಿರ್ದೇಶಕ ಪುರಿ ಜಗನ್ನಾಥ್ ಕೂಡ ಈ ಚಿತ್ರಕ್ಕೆ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ. ಈ ಚಿತ್ರದ ಪ್ರೀ ರಿಲೀಸ್ ಬ್ಯುಸಿನೆಸ್ 90 ಕೋಟಿ ಆಗಿದ್ದರೆ, ಈವರೆಗೆ 20 ಕೋಟಿ ರೂ. ಮಾತ್ರ ಕಲೆಕ್ಷನ್ ಆಗಿದೆ ಎನ್ನಲಾಗಿದೆ.

More from Filmibeat

English summary
Vijay Devarkonda Return His Payment To Charmy, Puri Jagannath, Because Og Liger Loss, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X