twitter
    For Quick Alerts
    ALLOW NOTIFICATIONS  
    For Daily Alerts

    ಸುಳ್ಳು ಸುದ್ದಿ ವಿರುದ್ಧ ನಟ ವಿಜಯ್ ದೇವರಕೊಂಡ ಗರಂ

    |

    ತೆಲುಗಿನ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಬಗ್ಗೆ ವಂದತಿಗಳು ಹರಿದಾಡುತ್ತಿರುವುದು ಹೊಸದೇನಲ್ಲ. ಡೇಟಿಂಗ್, ಸಿನಿಮಾ ವಿಚಾರವಾಗಿ ವಿಜಯ್ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇದೀಗ ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷೆಯ ಹೊಸ ಸಿನಿಮಾ ಲೈಗರ್ ಬಗ್ಗೆ ವದಂತಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅರ್ಜುನ್ ರೆಡ್ಡಿ ನಟ ಗರಂ ಆಗಿದ್ದಾರೆ.

    ನಿರ್ದೇಶಕ ಪುರಿ ಜಗನ್ನಾಥ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಲೈಗರ್ ಸಿನಿಮಾ ಈಗಾಗಲೇ ಭಾರಿ ಕುತೂಹಲ ಹುಟ್ಟುಹಾಕಿದೆ. ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ತಯಾರಾಗುತ್ತಿರುವ ಲೈಗರ್ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಹೂಡಿಸಿದ್ದಾರೆ.

    ಖ್ಯಾತ ಛಾಯಾಗ್ರಾಹಕ ಡಬು ರತ್ನಾನಿ ಕ್ಯಾಲೆಂಡರ್ ನಲ್ಲಿ ಮಿಂಚಿದ ಮೊದಲ ಸೌತ್ ಸ್ಟಾರ್ ಖ್ಯಾತ ಛಾಯಾಗ್ರಾಹಕ ಡಬು ರತ್ನಾನಿ ಕ್ಯಾಲೆಂಡರ್ ನಲ್ಲಿ ಮಿಂಚಿದ ಮೊದಲ ಸೌತ್ ಸ್ಟಾರ್

    ಪೋಸ್ಟರ್ ಮೂಲಕ ಕುತೂಹಲ ಮೂಡಿಸಿರುವ ಲೈಗರ್ ಯಾವಾಗ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವೆ ಲೈಗರ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಲೈಗರ್ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. 200 ಕೋಟಿ ರೂಪಾಯಿಗೆ ಡೀಲ್ ಆಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ.

    Vijay Devarakonda rubbishes rumours of Liger offered Rs 200 crore OTT deal

    ಇದನ್ನು ನೋಡಿ ಸಿಟ್ಟಾದ ವಿಜಯ್ ದೇವರಕೊಂಡ ಸ್ಕ್ರೀನ್ ಶಾಟ್ ಶೇರ್ ಮಾಡಿ ಸುದ್ದಿಯನ್ನು ತಳ್ಳಿಹಾಕಿದ್ದಾರೆ. "ಇದು ತೀರಾ ಕಡಿಮೆಯಾಯಿತು. ನಾನು ಚಿತ್ರಮಂದಿರಗಳಲ್ಲಿ ಇನ್ನು ಹೆಚ್ಚು ಗಳಿಕೆ ಮಾಡುತ್ತೇನೆ," ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    Recommended Video

    ವರನಟ ಡಾ.ರಾಜ್ ಕುಮಾರ್ ಹೆಸರಲ್ಲಿ ದೊಡ್ಡ ಎಡವಟ್ಟು ಮಾಡಿದ ಗೂಗಲ್!! | Filmibeat Kannada

    ಈಗಾಗಲೇ ಲೈಗರ್ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಮೊದಲ ಬಾರಿಗೆ ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡುತ್ತಿದ್ದು, ಚಿತ್ರದ ಬಗ್ಗೆ ವಿಜಯ್ ಕೂಜ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ವಿಜಯ್‌ಗೆ ನಾಯಕಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ಅನನ್ಯಾ ಪಾಂಡೆ, ವಿಜಯ್‌ಗೆ ನಾಯಕಿಯಾಗುವ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    English summary
    Telugu Actor Vijay Devarakonda rubbishes rumours of Liger offered Rs 200 crore OTT deal.
    Tuesday, June 22, 2021, 11:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X