Kushi Censor: ವಿಜಯ್‌ನ ಬಿಗಿದಪ್ಪಿದ ಸಮಂತಾ: ಸಖತ್ ವೈರಲ್ ಆಗ್ತಿದೆ 'ಖುಷಿ' ಪೋಸ್ಟರ್

ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ ರೊಮ್ಯಾಂಟಿಕ್ ಸಿನಿಮಾ 'ಖುಷಿ' ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಈಗಾಗಲೇ ಸಿನಿಮಾ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದೆ. ವಿಜಯ್ ಹಾಗೂ ಸ್ಯಾಮ್ ಇಬ್ಬರು ಸೋಲಿನ ಸುಳಿಗೆ ಸಿಲುಕಿದ್ದಾರೆ. ಈ ಸಿನಿಮಾ ಇಬ್ಬರ ಕರಿಯರ್‌ಗೆ 'ಖುಷಿ' ತುಂಬುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ.

ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಸಮತಾ ಮಯೋಸೈಟಿಸ್ ಸಮಸ್ಯೆಯಿಂದ ಬಳಲಿದ ಕಾರಣ ಸಿನಿಮಾ ಚಿತ್ರೀಕರಣ ತಡವಾಗಿತ್ತು. ಅಂತೂ ಇಂತೂ ಸಿನಿಮಾ ಕಂಪ್ಲೀಟ್ ಆಗಿದ್ದು ಪ್ರಮೋಷನ್ ಭರ್ಜರಿಯಾಗಿ ನಡೀತಿದೆ. ಸೆಪ್ಟೆಂಬರ್ ಫಸ್ಟ್ ವೀಕ್‌ನಲ್ಲಿ 'ಖುಷಿ' ಸಿನಿಮಾ ತೆರೆಗಪ್ಪಳಿಸುತ್ತಿದೆ.

Vijay Devarakonda, Samanthas Kushi film completes censor

ತೆಲುಗು ಹಾಗೂ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಅನ್ಯ ಧರ್ಮೀಯ ಹುಡುಗ - ಹುಡುಗಿ ಪ್ರೀತಿಸುತ್ತಾರೆ. ಆದರೆ ಪೋಷಕರು ಈ ಮದುವೆಗೆ ಒಪ್ಪಲ್ಲ. ಅವರ ವಿರೋಧ ಕಟ್ಟಿಕೊಂಡು ಬದುಕಿ ತೋರಿಸುತ್ತೇವೆ ಎಂದು ಸವಾಲು ಹಾಕಿ ಮದುವೆ ಆಗುವ ನವ ಜೋಡಿಯ ಕಥೆ 'ಖುಷಿ' ಸಿನಿಮಾದಲ್ಲಿದೆ. ಈ ಹಾದಿಯಲ್ಲೇ ಏನೆಲ್ಲಾ ಆಗುತ್ತದೆ ಅನ್ನೋದನ್ನು ಚಿತ್ರದಲ್ಲಿ ಎಳೆ ಎಳೆಯಾಗಿ ಕಟ್ಟಿಕೊಡಲಾಗಿದೆ.

'ಖುಷಿ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಸಿಗುತ್ತದೆ ಎಂದು ಚಿತ್ರತಂಡ ಅಂದುಕೊಂಡಿತ್ತು. ಆದರೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇನ್ನು ಸಿನಿಮಾ ಕಾಲಾವಧಿ 2 ಗಂಟೆ 45 ನಿಮಿಷ ಅನ್ನೋದು ಗೊತ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲ ಸಿನಿಮಾಗಳ ಕಾಲಾವಧಿ ಹೆಚ್ಚಾಗುತ್ತಿದೆ. ಆದರೆ ರೊಮ್ಯಾಂಟಿಕ್ ಚಿತ್ರಕ್ಕೆ ಈ ಕಾಲಾವಧಿ ಹೆಚ್ಚಾಯಿತು ಎನ್ನಲಾಗ್ತಿದೆ.

Vijay Devarakonda, Samanthas Kushi film completes censor

ಈ ಹಿಂದೆ ತೆಲುಗು ಹಾಗೂ ತಮಿಳಿನಲ್ಲಿ 'ಖುಷಿ' ಟೈಟಲ್‌ನಲ್ಲಿ ಸಿನಿಮಾ ಬಂದು ಸೂಪರ್ ಹಿಟ್ ಆಗಿತ್ತು. ತೆಲುಗಿನಲ್ಲಿ ಪವನ್ ಕಲ್ಯಾಣ್- ಭೂಮಿಕಾ ಚಾವ್ಲಾ ಹಾಗೂ ತಮಿಳಿನಲ್ಲಿ ವಿಜಯ್ ಹಾಗೂ ಜ್ಯೋತಿಕಾ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಹಾಗಾಗಿ ಸೂಪರ್ ಹಿಟ್ ಟೈಟಲ್‌ ಸಕ್ಸಸ್ ತಂದು ಕೊಡುತ್ತದೆ ಎನ್ನುವ ನಿರೀಕ್ಷೆಯಿದೆ. ಸದ್ಯ ಸಮಂತಾ ವಿದೇಶದಲ್ಲಿದ್ದು ಸಿನಿಮಾ ರಿಲೀಸ್ ವೇಳೆಗೆ ಭಾರತಕ್ಕೆ ವಾಪಸ್ ಆಗುತ್ತಾರೆ ಎನ್ನಲಾಗ್ತಿದೆ.

'ಖುಷಿ' ಚಿತ್ರಕ್ಕೆ ಯು/ಎ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕ ಖುಷಿಯನ್ನು ಸ್ಪೆಷಲ್ ಪೋಸ್ಟರ್ ಸಮೇತ ವಿಜಯ್ ದೇವರಕೊಂಡ ಹಂಚಿಕೊಂಡಿದ್ದಾರೆ. ವಿಜಯ್‌ನ ಸ್ಯಾಮ್ ಬಿಗಿದಪ್ಪಿ ಹಿಡಿದಿರುವ ಪೋಸ್ಟರ್‌ ವೈರಲ್ ಆಗುತ್ತಿದೆ. ಜಯರಾಂ, ಸಚಿನ್ ಖಡೇಕರ್, ಮುರಳಿ ಶರ್ಮಾ, ಜ್ಯೂಲಿ ಲಕ್ಷ್ಮಿ, ಅಲಿ, ರೋಹಿಣಿ, ವೆನ್ನಲ ಕಿಶೋರ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ.

ಟ್ರೈಲರ್‌ನಲ್ಲೇ 'ಖುಷಿ' ಸಿನಿಮಾ ಕಥೆಯೇನು ಎನ್ನುದು ಅರ್ಥವಾಗಿದೆ. ಇದು ಹಳೇ ಸ್ಟೋರಿಲೈನ್ ಅನ್ನೋದು ಗೊತ್ತಾಗುತ್ತಿದೆ. ಆದರೂ ವಿಜಯ್- ಸ್ಯಾಮ್ ಪ್ರೇಕ್ಷಕರನ್ನು ಹೇಗೆ ರಂಜಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇವರಿಬ್ಬರ ಕಾಂಬಿನೇಷನ್‌ ಬಹಳ ಕುತೂಹಲ ಮೂಡಿಸಿದೆ.

'ಮಜಿಲಿ', 'ಟೆಕ್‌ ಜಗದೀಶ್' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಶಿವ ನಿರ್ವಾನ್ 'ಖುಷಿ' ಚಿತ್ರವನ್ನು ಹೇಗೆ ತಿದ್ದಿ ತೀಡಿದ್ದಾರೆ ಎನ್ನುವ ನಿರೀಕ್ಷೆ ಕೂಡ ಇದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಸೆಪ್ಟೆಂಬರ್ 2ನೇ ವಾರ 'ಜವಾನ್' ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ 'ಖುಷಿ' ಸಿನಿಮಾ ಹೇಗೆ ಸದ್ದು ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Vijay Devarakonda, Samantha's Kushi gets U/A certificate from Censor Board.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X