Kushi Boxoffice: ಮೂರೇ ದಿನಕ್ಕೆ ಥಿಯೇಟರ್‌ಗಳಿಂದ 'ಖುಷಿ' ಮಾಯ: ವಿಜಯ್- ಸ್ಯಾಮ್‌ಗೆ ಮತ್ತೆ ಸೋಲು
ವಿಜಯ್ ದೇವರಕೊಂಡ ಹಾಗೂ ಸಮಂತಾ ರುತ್‌ಪ್ರಬ್ ನಟನೆಯ 'ಖುಷಿ' ಸಿನಿಮಾ ಕಳೆದ ವಾರ ರಿಲೀಸ್ ಆಗಿತ್ತು. ಫಸ್ಟ್ ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಸೋಮವಾರದಿಂದಲೇ ಕಲೆಕ್ಷನ್ ಡ್ರಾಪ್ ಆಗಿತ್ತು. ಶಿವ ನಿರ್ವಾಣ ನಿರ್ದೇಶನದ ರೊಮ್ಯಾಂಟಿಕ್ ಎಂಟರ್‌ಟೈನರ್ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಅದರ ಪರಿಣಾಮ ಈಗ ಗೊತ್ತಾಗುತ್ತಿದೆ.
ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್‌ನಲ್ಲಿ 'ಖುಷಿ' ಸಿನಿಮಾ ನಿರ್ಮಾಣವಾಗಿತ್ತು. ಬಹಳ ಹಿಂದೆ ಶುರುವಾಗಿದ್ದ ಸಿನಿಮಾ ಸಮಂತಾ ಅನಾರೋಗ್ಯದ ಹಿನ್ನೆಲೆ ತಡವಾಗಿತ್ತು. ಅಂತೂ ಇಂತೂ ಚಿತ್ರೀಕರಣ ಮುಗಿಸಿ ಕಳೆದ ವಾರ ಚಿತ್ರವನ್ನು ತೆರೆಗೆ ತರಲಾಗಿತ್ತು/ ರೊಟೀನ್ ಲವ್ ಸ್ಟೋರಿ ಎನ್ನಿಸಿದರೂ ಕಾನ್ಸೆಪ್ಟ್, ನಿರೂಪಣೆ ಕೊಂಚ ಚೆನ್ನಾಗಿತ್ತು. ಆದರೆ ಸಿನಿಮಾ ಸಿಕ್ಕಾಪಟ್ಟೆ ಸ್ಲೋ ಇದ್ದ ಕಾರಣ ಪ್ರೇಕ್ಷಕರಿಗೆ ಅಷ್ಟಾಗಿ ಕನೆಕ್ಟ್ ಆಗಿರಲಿಲ್ಲ.

ವಿಜಯ್- ಸಮಂತಾ ಕೆಮೆಸ್ಟ್ರಿ ಸೊಗಸಾಗಿತ್ತು. ಇಬ್ಬರೂ ಪೈಪೋಟಿಗೆ ಬಿದ್ದು ನಟಿಸಿದ್ದರು. ಆದರೆ ರಿಸಲ್ಟ್ ಮಾತ್ರ ಬೇಸರ ತಂದಿದೆ. ವಿಜಯ್, ಸ್ಯಾಮ್ ಇಬ್ಬರೂ ಸೋಲಿನ ಸುಳಿಗೆ ಸಿಲುಕಿದ್ದರು. 'ಲೈಗರ್' ಸಿನಿಮಾ ರೌಡಿ ಬಾಯ್ ದೊಡ್ಡ ಹೊಡೆತ ಕೊಟ್ಟಿತ್ತು. ಅತ್ತ ಸ್ಯಾಮ್ ನಟನೆಯ 'ಯಶೋದ' ಹಾಗೂ 'ಶಾಕುಂತಲಂ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಅಷ್ಟೇ ಅಲ್ಲ 'ಲೈಗರ್', 'ಶಾಕುತಲಂ- 2' ಸಿನಿಮಾಗಳು ಭಾರೀ ಟೀಕೆಗೆ ಗುರಿಯಾಗಿದ್ದವು. ಹಾಗಾಗಿ ಇಬ್ಬರೂ 'ಖುಷಿ' ಸಿನಿಮಾ ನಂಬಿಕೊಂಡಿದ್ದರು.
52 ಕೋಟಿ ರೂ. 'ಖುಷಿ' ಸಿನಿಮಾ ಬ್ಯುಸಿನೆಸ್ ನಡೆದಿತ್ತು. ಸದ್ಯ ಸಿನಿಮಾ 75 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು 38. 7 ಕೋಟಿ ರೂ. ಶೇರ್ ಸಿಕ್ಕಿದೆ. ಅಂದರೆ ಸಿನಿಮಾ ಬ್ರೇಕ್ ಈವನ್ ಆಗಲೂ ಇನ್ನು 14 ಕೋಟಿ. ರೂ ಕಲೆಕ್ಷನ್ ಮಾಡಬೇಕಾಗಿದೆ. ಆದರೆ ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ದಯನೀಯವಾಗಿ ಕುಸಿತ ಕಾಣುತ್ತಿದೆ. ಇತ್ತೀಚೆಗಷ್ಟೆ ಫಸ್ಟ್ ವೀಕೆಂಡ್ ಕಲೆಕ್ಷನ್ ನೋಡಿ ಖುಷಿಯಾಗಿದ್ದ ತಂಡ ಸಕ್ಸಸ್ ಮೀಟ್ ಮಾಡಿತ್ತು. ಆದರೆ ಈಗ ಸಿನಿಮಾ ಸೋಲಿನ ಸುಳಿಗೆ ಸಿಲುಕಿದೆ ಎನ್ನುವ ಚರ್ಚೆ ನಡೀತಿದೆ.
ಪ್ರೀತಿ ಹಾಗೂ ನೋವನ್ನು ಸೇರಿಸಿ ಶಿವ ನಿರ್ವಾಣ ಈ ಫೀಲ್ ಗುಡ್ ಚಿತ್ರವನ್ನು ತೆರೆಗೆ ತಂದಿದ್ದಾರೆ. ಆಧುನಿಕ ಯುಗದಲ್ಲಿ ಹುಡುಗಿ ಹುಡುಗಿ ಮದುವೆಯಾಗಿ ಯಾವುದೇ ಸಮಸ್ಯೆ ಇಲ್ಲದೇ ಬದುಕುವುದು ಕಷ್ಟ. ಎಲ್ಲಿ ತಪ್ಪಾಗುತ್ತಿದೆ. ಅದನ್ನು ಸರಿಪಡಿಸಿಕೊಳ್ಳಲು ಏನು ಮಾಡಬೇಕು ಎನ್ನುವ ಸಂಗತಿಗಳನ್ನು ಚಿತ್ರದಲ್ಲಿ ಚರ್ಚಿಸಲಾಗಿದೆ. ಚಿತ್ರಕ್ಕೆ ಸಂಗೀತ ಕೈ ಕೊಟ್ಟಿತ್ತು.
ಬಹಳ ಆಸ್ತಿಕರ ಮನೆ ಹುಡುಗಿಯನ್ನು ಮಹಾನ್ ನಾಸ್ತಿಕನ ಮಗ ಪ್ರೀತಿ ಮುದುವೆ ಆಗಲು ಹೋದರೆ ಏನೆಲ್ಲಾ ಸಮಸ್ಯೆಗಳಿರುತ್ತವೆ. ಅದನ್ನೆಲ್ಲಾ ಮೀರಿ ಮದುವೆ ಆದರೆ ಬಳಿಕ ದಾಂಪತ್ಯ ಜೀವನ ಹೇಗೆ ಸಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ವಿಪ್ಲವ್ ಆಗಿ ವಿಜಯ್, ಆರಾಧ್ಯ ಆಗಿ ಸ್ಯಾಮ್ ಇಬ್ಬರೂ ಮೋಡಿ ಮಾಡಿದ್ದಾರೆ.ಸ
ಶಾಸ್ತ್ರ, ಸಿದ್ದಾಂತಗಳಿಗಿಂತ ಜೀವನ ದೊಡ್ಡದು ಎನ್ನುವ ಸಂದೇಶವನ್ನು ಹೊತ್ತು ಬಂದ 'ಖುಷಿ' ಸಿನಿಮಾ ಎಲ್ಲರ ಮನಗೆಲ್ಲುವಲ್ಲಿ ವಿಫಲವಾಗಿದೆ. ಆಂಧ್ರ, ತೆಲಂಗಾಣ, ಕರ್ನಾಟಕ, ಕೇರಳದಲ್ಲಿ 'ಖುಷಿ' ಎತ್ತಂಗಡಿಯಾಗುತ್ತಿದೆ. ಆದರೆ ಓವರ್‌ಸೀಸ್ ಹಾಗೂ ತಮಿಳುನಾಡಿನಲ್ಲಿ ಕಲೆಕ್ಷನ್ ಚೆನ್ನಾಗಿದೆ. ಇದೆಲ್ಲದರ ನಡುವೆ ನಿರ್ಮಾಪಕರ 10 ಕೋಟಿ ನಷ್ಟ ಭೀತಿಯಲ್ಲಿದ್ದಾರೆ.

ಕರ್ನಾಟಕದಲ್ಲಿ ಬಹಳ ದೊಡ್ಡದಾಗಿಯೇ 'ಖುಷಿ' ಸಿನಿಮಾ ರಿಲೀಸ್ ಆಗಿತ್ತು. ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಚಿತ್ರಕ್ಕೆ ಪೈಪೋಟಿ ಕೊಡುತ್ತದೆ ಎನ್ನಲಾಗಿತ್ತು. ಆದರೆ ಫಸ್ಟ್ ವೀಕೆಂಡ್ ಮುಗಿದು ಸೋಮವಾರ ಶುರುವಾಗುತ್ತಿದ್ದಂತೆ ವಿಜಯ್- ಸ್ಯಾಮ್ ರೊಮ್-ಕಾಮ್ ಪ್ರೇಕ್ಷಕರ ಬರ ಎದುರಿಸಲು ಆರಂಭಿಸಿತು.


Click it and Unblock the Notifications











