ಖುಷಿ ಬಿಡುಗಡೆಗೆ ಎರಡೇ ದಿನ: ಪ್ರಚಾರದಲ್ಲಿ ವಿಜಯ್ ದೇವರಕೊಂಡ, ಫಾರಿನ್ ಟ್ರಿಪ್‌ನಲ್ಲಿ ಸಮಂತಾ!
ನಟ ವಿಜಯ್ ದೇವರಕೊಂಡ ಮತ್ತು ನಟಿ ಸಮಂತಾ ರುತ್ ಪ್ರಭು ಅಭಿನಯದ ಬಹುನಿರೀಕ್ಷಿತ ಸಿನಿಮಾ ಖುಷಿ ಬಿಡುಗಡೆಗೆ ಇನ್ನು ಎರಡೇ ದಿನ ಬಾಕಿಯಿದೆ. ಈ ಸಮಯದಲ್ಲಿ ಸಿನಿಮಾಗಾಗಿ ಸಾಕಷ್ಟು ಪ್ರಚಾರ ಮತ್ತು ಅಡ್ವಾನ್ಸ್ ಬುಕ್ಕಿಂಗ್‌ಗಳನ್ನು ತೆರೆಯಬೇಕಾಗುತ್ತದೆ. ಆದರೆ, ಖುಷಿ ಸಿನಿಮಾ ಇದರಲ್ಲೇ ಸೋತಿದೆ!.
ಸಿನಿಮಾ ಬಿಡುಗಡೆಗೂ ಮುನ್ನ ಅಡ್ವಾನ್ಸ್ ಬುಕ್ಕಿಂಗ್‌ಗಳನ್ನು ತೆರದರೇ ಮೊದಲ ದಿನವೇ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರೇಕ್ಷಕರನ್ನು ನೋಡಬಹುದು. ಆದರೆ, ಈಗ ಸಿನಿಮಾ ಬುಕ್ಕಿಂಗ್ ತೆರೆದಿರುವ ಕಾರಣ ಜನ ಥಿಯೇಟರ್‌ಗಳಿಗೆ ಒಮ್ಮೆಲೆ ಬರುಬವುದು ಕಡಿಮೆಯಾಗಬಹುದು. ಚಿತ್ರ ಬಿಡುಗಡೆಗೂ ಮುನ್ನ ಸೃಷ್ಟಿಯಾಗುವ ಕ್ರೇಜ್ ಸಿನಿಮಾ ಯಶಸ್ಸು, ಗಲ್ಲಾಪೆಟ್ಟಿಗೆ ಗಳಿಕೆ ಮೇಲೆ ಪ್ರಭಾವ ಬೀರಲಿದೆ.

'ಖುಷಿ' ಪ್ರಚಾರಕ್ಕಿಲ್ಲ ಸಮಂತಾ!
ಖುಷಿ ಸಿನಿಮಾದ ನಾಯಕಿ ಸಮಂತಾ ರುತ್ ಪ್ರಭು ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ. ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಬಳಿಕ ಪ್ರಚಾರದಿಂದ ದೂರವಾಗಿದ್ದಾರೆ. ಈಗಲೇ ಜನ ಥಿಯೇಟರ್‌ಗಳಿಗೆ ಬರುವುದು ಕಡಿಮೆ, ಸಿನಿಮಾ ನಟರು ತಮ್ಮ ಸಿನಿಮಾಗಳ ಬಗ್ಗೆ ಪ್ರಚಾರ ಕೊಟ್ಟರೇ ತಾನೇ ಜನರು ಸಿನಿಮಾಗಳಿಗೆ ಬರುವುದು. ಇದು ಖುಷಿ ಚಿತ್ರಕ್ಕೆ ಮೈನಸ್ ಪಾಯಿಂಟ್ ಆಗಿದೆ.
ನಟಿ ಸಮಂತಾ ನ್ಯೂಯಾರ್ಕ್, ಅಮೆರಿಕಾ ಎಂದು ಸುತ್ತುತ್ತಿದ್ದು, ತಮ್ಮ ಆರೋಗ್ಯ ಸಮಸ್ಯೆಗಳಿಗೆ ಅಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆಯಿದೆ. ಆದರೆ, ಇದನ್ನು ಅವರು ಬಹಿರಂಗವಾಗಿ ಹೇಳಿಕೊಂಡಿಲ್ಲ. ಅಮೆರಿಕಾದಲ್ಲಿ ಒಂದು ತಿಂಗಳು ಚಿಕಿತ್ಸೆ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು, ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ನಟ ವಿಜಯ್ ದೇವರಕೊಂಡ ಅವರಿಗೆ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಆದರೆ, ಒಬ್ಬರೇ ಇಡೀ ಚಿತ್ರದ ಭಾರವನ್ನು ಹೆಗಲಿಗೆ ಹಾಕಿಕೊಂಡು ಓಡಾಡಲು ಸಾಧ್ಯವಿಲ್ಲ. ತಮಗೆ ಸಾದ್ಯವಾಗುವಷ್ಟು ಅವರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ನಿಧಾನವಾದ ಅಡ್ವಾನ್ಸ್ ಬುಕ್ಕಿಂಗ್!
ವಿಜಯ್ ದೇವರಕೊಂಡ ಅಭಿನಯದ ಖುಷಿ ಚಿತ್ರದ ಚಲನಚಿತ್ರದ ಆನ್‌ಲೈನ್ ಬುಕಿಂಗ್ ಆಗಸ್ಟ್ 30 ರಂದು ಬೆಳಗ್ಗೆ 10 ಗಂಟೆಯಿಂದ ಪ್ರಾರಂಭವಾಗಿವೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಮೊದಲ ಪ್ರದರ್ಶನಕ್ಕೆ ಕೇವಲ ನಲವತ್ತೈದು ಗಂಟೆಗಳ ಮೊದಲು ಬುಕ್ಕಿಂಗ್ ಆರಂಭಿಸಲಾಗಿದೆ. ಇಂತಹ ವಿಳಂಬವಾದ ಬುಕಿಂಗ್ ಪ್ರಸ್ತುತ ಸನ್ನಿವೇಶದಲ್ಲಿ ಅಪಾಯಕಾರಿ.
'ಖುಷಿ' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿದ್ದು, ಸ್ವಯಂ ವಿತರಣೆ ಮಾಡಲಿದೆ. ಸಿನಿಮಾ ಮಂದಿಯ ಮಾತಿನ ಪ್ರಕಾರ ಪ್ರದರ್ಶಕರೊಂದಿಗೆ ಒಪ್ಪಂದಗಳನ್ನು ಫೈನಲ್ ಮಾಡುವಲ್ಲಿನ ವಿಳಂಬವು ಈ ನಿಧಾನಗತಿಯ ಬುಕಿಂಗ್ ಪ್ರಕ್ರಿಯೆಗೆ ಕಾರಣವಾಗಿದೆ.


Click it and Unblock the Notifications










