twitter
    For Quick Alerts
    ALLOW NOTIFICATIONS  
    For Daily Alerts

    'ಲೈಗರ್' ಟ್ರೈಲರ್ ಬಳಿಕ ಪುರಿ ಜಗನ್ನಾಥ್ ಸಿನಿಮಾದ್ದೇ ಕಾಪಿ: ಕೊನೆಗೂ ಸಿಕ್ತು ಕ್ಲಾರಿಟಿ!

    |

    ವಿಜಯ್ ದೇವರಕೊಂಡ ಟಾಲಿವುಡ್‌ನಲ್ಲಿ ದಿಢೀರನೇ ಸ್ಟಾರ್ ಪಟ್ಟಕ್ಕೇರಿದ ನಟ. ಸಿನಿಮಾ ಬ್ಯಾಕ್‌ಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದ ರೌಡಿ ಬಾಯ್ ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಈ ಮಧ್ಯೆ ಬಾಲಿವುಡ್‌ನಲ್ಲೂ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದರು. ತೆಲುಗಿನಲ್ಲಿ ನಟಿಸಿದ ಕೆಲವು ಸಿನಿಮಾಗಳು ಸೋತು ಸುಣ್ಣವಾಗಿದ್ದವು. ಈ ಮಧ್ಯೆ ಪುರಿ ಜಗನ್ನಾಥ್ ನಿರ್ದೇಶಿಸಿದ 'ಲೈಗರ್' ಸಿನಿಮಾ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.

    ರಶ್ಮಿಕಾ ಮಂದಣ್ಣ ಬೇಡಿಕೆ ಕುಸಿಯಲಿದೆ, ಆ ನಟನಿಂದ ಸಮಸ್ಯೆ: ಭವಿಷ್ಯರಶ್ಮಿಕಾ ಮಂದಣ್ಣ ಬೇಡಿಕೆ ಕುಸಿಯಲಿದೆ, ಆ ನಟನಿಂದ ಸಮಸ್ಯೆ: ಭವಿಷ್ಯ

    ಇತ್ತೀಚೆಗೆ ವಿಜಯ್ ದೇವರಕೊಂಡ ಮೊದಲ ಬಾಲಿವುಡ್ ಸಿನಿಮಾ 'ಲೈಗರ್' ಸಿನಿಮಾ ಟ್ರೈಲರ್ ರಿಲೀಸ್ ಆಗಿತ್ತು. ಆ ಟ್ರೈಲರ್ ರಿಲೀಸ್ ಆದ ಬಳಿಕ ಇದು ಪುರಿಜಗನ್ನಾಥ್ ಅವರೇ ನಿರ್ದೇಶಿಸಿದ ಸಿನಿಮಾ ರಿಮೇಕ್ ಎಂದು ಹೇಳಲಾಗುತ್ತಿತ್ತು. ಅದಕ್ಕೊಂದು ಕ್ಲಾರಿಟಿ ಸಿಕ್ಕಿದೆ.

    ತೆಲುಗಿನ ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ವಿಜಯ್ ದೇವರಕೊಂಡತೆಲುಗಿನ ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ವಿಜಯ್ ದೇವರಕೊಂಡ

    'ಲೈಗರ್' ಲುಕ್ ಕೊಟ್ಟ ವಿಜಯ್

    'ಲೈಗರ್' ಲುಕ್ ಕೊಟ್ಟ ವಿಜಯ್

    ವಿಜಯ್ ದೇವರಕೊಂಡ ಸದ್ಯ ಟಾಲಿವುಡ್‌ ಡೈನಾಮಿಕ್ ಸ್ಟಾರ್. ಈಗ ಡೈನಾಮಿಕ್ ಡೈರೆಕ್ಟರ್ ಪೂರಿ ಜಗನ್ನಾಥ್ ಜೊತೆ ಕೈ ಜೋಡಿಸಿರುವ ನಟ 'ಲೈಗರ್' ಲುಕ್ ಕೊಟ್ಟಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾವನ್ನು ಚಾರ್ಮಿ, ಪುರಿ ಜಗನ್ನಾಥ್ ಹಾಗೂ ಕರಣ್ ಜೋಹರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ವಿಜಯ್ ದೇವರಕೊಂಡ ಜೊತೆ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 25 ರಂದು ಗ್ರ್ಯಾಂಡ್ ರಿಲೀಸ್‌ಗೆ ರೆಡಿಯಾಗಿದೆ.

    'ಲೈಗರ್' ಪಕ್ಕಾ ಬಾಕ್ಸರ್ ಸಿನಿಮಾ

    'ಲೈಗರ್' ಪಕ್ಕಾ ಬಾಕ್ಸರ್ ಸಿನಿಮಾ

    ವಿಜಯ್ ದೇವರಕೊಂಡ ಈ ಸಿನಿಮಾದಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಕ್ರೇಜಿ ಕಾಂಬಿನೇಷನ್‌ನಲ್ಲಿ 'ಲೈಗರ್' ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದೆ. ಈ ಸಿನಿಮಾ ಆಗಸ್ಟ್ 25 ರಂದು ರಿಲೀಸ್ ಆಗಲಿರುವ ಈ ಸಿನಿಮಾ ಪ್ರಚಾರವನ್ನುಆರಂಭಿಸಿದೆ. ಈ ಟ್ರೈಲರ್ ರಿಲೀಸ್ ಆದ ಬಳಿಕ ಇದು ಪುರಿ ಜಗನ್ನಾಥ್ ಅವರೇ ನಿರ್ದೇಶಿಸಿದ ಸಿನಿಮಾದ ಸನ್ನಿವೇಶಗಳನ್ನು ಕಾಫಿ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

    'ಲೈಗರ್' ಟ್ರೈಲರ್ ಬಳಿಕ ಅನುಮಾನ

    'ಲೈಗರ್' ಟ್ರೈಲರ್ ಬಳಿಕ ಅನುಮಾನ

    ವಿಜಯ್ ದೇವರಕೊಂಡ ಹಾಗೂ ಪೂರಿ ಜಗನ್ನಾಥ್ ಕಾಂಬಿನೇಷನ್‌ ಸಿನಿಮಾದ 'ಲೈಗರ್' ಟ್ರೈಲರ್ ಬಾರಿ ಚರ್ಚೆಯಲ್ಲಿದೆ. ಇದು ಪುರಿ ಜಗನ್ನಾಥ್ ಅವರೇ ನಿರ್ದೇಶಿಸಿದ ರವಿತೇಜಾ ನಟಿಸಿದ ಹಳೆಯ ಸಿನಿಮಾ 'ಅಮ್ಮ ನನ್ನ ಓ ತಮಿಳ ಅಮ್ಮಾಯಿ'ಯ ಕೆಲವು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ ಎನ್ನಲಾಗಿತ್ತು. ಟ್ರೈಲರ್‌ನಲ್ಲಿ ಅದು ನಿಜವಿರಬಹುದು ಎಂದು ಹಲವರು ಕಮೆಂಟ್ ಮಾಡಿದ್ದರು.

    'ಲೈಗರ್' ಕಾಪಿ ಮಾಡಿದ ಸಿನಿಮಾ ಅಲ್ಲ

    'ಲೈಗರ್' ಕಾಪಿ ಮಾಡಿದ ಸಿನಿಮಾ ಅಲ್ಲ

    'ಲೈಗರ್' ಒಂದು ಕಾಪಿ ಸಿನಿಮಾ. ಪುರಿಜನ್ನಾಥ್ ಅವರದ್ದೇ ಸಿನಿಮಾದ ಕೆಲವು ಸನ್ನಿವೇಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಎನ್ನಲಾಗಿತ್ತು. ಅದಕ್ಕೀಗ ಚಿತ್ರತಂಡ ಪ್ರತಿಕ್ರಿಯೆ ನೀಡಿದೆ. 'ಅಮ್ಮ ನನ್ನ ಓ ತಮಿಳ ಅಮ್ಮಾಯಿ' ಕಾಪಿ ಮಾಡಿಲ್ಲ. ಆ ಸಿನಿಮಾಗಳಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎರಡೂ ಸಿನಿಮಾದ ಕಥೆಗಳಿಗೂ ಸಾಕಷ್ಟು ವ್ಯತ್ಯಾಸವಿದ್ದು, ಮತ್ತಷ್ಟು ಪವರ್‌ಫುಲ್ ಆಗಿದೆ ಎಂದು ತೆಲುಗು ಮಾಧ್ಯಮಗಳಿಗೆ ಚಿತ್ರತಂಡ ತಿಳಿಸಿದೆ.

    English summary
    Vijay Devarakonda Starrer Liger Movie Is Not A Copy Of Amma Nanna O Tamila Ammayi, Know More.
    Sunday, July 24, 2022, 17:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X