For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ: ವಿಜಯ್ ದೇವರಕೊಂಡ ಮೇಲೆ ಸಿಟ್ಟಾದ ಅಭಿಮಾನಿಗಳು

  |

  ನಟ ವಿಜಯ್ ದೇವರಕೊಂಡ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ 'ಲೈಗರ್‌'ನ ಬಿಡುಗಡೆ ದಿನಾಂಕವನ್ನು ಇಂದಷ್ಟೆ ಪ್ರಕಟಿಸಲಾಗಿದೆ. ಆದರೆ ಇದು ವಿಜಯ್ ಅಭಿಮಾನಿಗಳಿಗೆ ಸಿಟ್ಟು ತರಿಸಿದೆ.

  'ಲೈಗರ್' ಸಿನಿಮಾವು ಮುಂದಿನ ವರ್ಷ ಆಗಸ್ಟ್ 24ಕ್ಕೆ ಬಿಡುಗಡೆ ಆಗಲಿದೆ ಎಂದು ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದರೂ ಸಹ ಸಿನಿಮಾ ಬಿಡುಗಡೆಗೆ ಇಷ್ಟು ತಡ ಯಾಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

  ಕೊರೊನಾಕ್ಕೆ ಮುಂಚಿನಿಂದಲೂ 'ಲೈಗರ್' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಕೊರೊನಾ ಬಳಿಕ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭಿಸಿ, ವೇಗವಾಗಿ ಚಿತ್ರೀಕರಣ ಮಾಡಲಾಗಿದೆ. ಗೋವಾದಲ್ಲಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ನಟಿಸುತ್ತಿರುವ ವಿಶೇಷ ನಟ ಮೈಕ್ ಟೈಸನ್‌ಗಾಗಿ ಅಮೆರಿಕಕ್ಕೆ ತೆರಳಿ ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಹಾಗಿದ್ದರೂ ಸಹ ಸಿನಿಮಾದ ಬಿಡುಗಡೆಯನ್ನು ಒಂಬತ್ತು ತಿಂಗಳ ನಂತರದ ದಿನಾಂಕಕ್ಕೆ ಘೋಷಿಸುವುದು ಸಹಜವಾಗಿಯೇ ವಿಜಯ್ ದೇವರಕೊಂಡ ಅಭಿಮಾನಿಗಳನ್ನು ಕೆರಳಿಸಿದೆ.

  ಅದೂ ಅಲ್ಲದೆ, 'ಲೈಗರ್' ಸಿನಿಮಾ ಬಿಡುಗಡೆ ಆಗುವ ಎರಡು ದಿನ ಮುಂಚೆ ಅಂದರೆ ಆಗಸ್ಟ್ 22 ರಂದು ಪ್ರಭಾಸ್ ನಟನೆಯ ಭಾರತದ ಅತಿ ದೊಡ್ಡ ಬಜೆಟ್‌ನ ಸಿನಿಮಾ 'ಆದಿಪುರುಷ್' ಬಿಡುಗಡೆ ಆಗಲಿದೆ. ಹೀಗಿದ್ದಾಗ ವಿಜಯ್ ದೇವರಕೊಂಡ ಆಗಸ್ಟ್ 24 ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಬಾರದಿತ್ತು. ತೆಲುಗು ನಟನ ದೊಡ್ಡ ಬಜೆಟ್‌ನ ಸಿನಿಮಾಕ್ಕೆ ಪ್ರತಿಸ್ಪರ್ಧಿಯಾಗಿ ನಿಲ್ಲಬಾರದಿತ್ತು ಎಂಬ ಅಭಿಪ್ರಾಯವೂ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.

  'ಲೈಗರ್' ಸಿನಿಮಾವನ್ನು ದಕ್ಷಿಣ ಭಾರತದ ಹಿಟ್ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ನಟಿ ಚಾರ್ಮಿ, ಬಾಲಿವುಡ್‌ನ ಕರಣ್ ಜೋಹರ್ ಕೂಡ ಈ ಸಿನಿಮಾದ ಮೇಲೆ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್‌ ಯುವ ನಟಿ ಅನನ್ಯಾ ಪಾಂಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಜಗತ್‌ ಪ್ರಸಿದ್ಧ ಬಾಕ್ಸರ್ ಮೈಕ್ ಟೈಸನ್ ವಿಲನ್ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಮೈಕ್ ಟೈಸನ್‌ಗೆ ನಟ ನಂದಮೂರಿ ಬಾಲಕೃಷ್ಣ ಧ್ವನಿ ನೀಡುತ್ತಿದ್ದಾರೆ ಎನ್ನಲಾಗಿದೆ. ಸಿನಿಮಾವು ಕಿಕ್ ಬಾಕ್ಸರ್‌ ಯುವಕನ ಕತೆಯನ್ನು ಹೊಂದಿರಲಿದೆ.

  'ಲೈಗರ್' ಸಿನಿಮಾದ ಬಳಿಕ ವಿಜಯ್ ದೇವರಕೊಂಡ ತಮ್ಮ ವೃತ್ತಿ ಜೀವನದ ಮೊದಲ ಬಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾವನ್ನು ಕರಣ್ ಜೋಹರ್ ನಿರ್ದೇಶನ ಮಾಡಲಿದ್ದಾರೆ. ಬಳಿಕ ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ. ಈ ಸಿನಿಮಾವು ಸುಕುಮಾರ್ ನಿರ್ದೇಶನದ ಜನಪ್ರಿಯ 'ಆರ್ಯ' ಸಿನಿಮಾ ಸರಣಿಯ ಮೂರನೇ ಸಿನಿಮಾ ಆಗಿರಲಿದೆ. ಈ ಸಿನಿಮಾಕ್ಕೆ ಈ ಮುಂಚಿನ ಎರಡು 'ಆರ್ಯ' ಸಿನಿಮಾಗಳಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ಅಲ್ಲು ಅರ್ಜುನ್ ಅವರೇ ಬಂಡವಾಳ ಹೂಡಲಿದ್ದಾರೆ.

  English summary
  Vijay Devarakonda starrer Liger movie release date announced. Movie will release on August 24, 2022. Movie directed by Puri Jagannath.
  Friday, December 17, 2021, 9:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X