For Quick Alerts
  ALLOW NOTIFICATIONS  
  For Daily Alerts

  'ಲೈಗರ್' ಮೊದಲ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?

  |

  'ಲೈಗರ್' ಸಿನಿಮಾ ಆಗಸ್ಟ್ 25ಕ್ಕೆ ರಿಲೀಸ್ ಆಗಿದೆ.'ಲೈಗರ್' ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಂಡಿದೆ. ನಟ ವಿಜಯ್ ದೇವರಕೊಂಡ ಸಿನಿಮಾ ಬದುಕಿನಲ್ಲೇ ಬಹುದೊಡ್ಡ ಸಿನಿಮಾ ಇದು. ಈ ಸಿನಿಮಾ ಬಾಕ್ಸಿಂಗ್ ಕಥೆಯನ್ನು ಹೊಂದಿದೆ.

  ಚಿತ್ರದಲ್ಲಿ ಸ್ಪರ್ಧೆಯ ಜೊತೆಗೆ, ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್, ಆ್ಯಕ್ಷನ್, ಫೈಟ್, ಎಲ್ಲಾ ಅಂಶಗಳೂ ಕೂಡ ಇವೆ. ಇದರ ಜೊತೆಗೆ ನಟ ವಿಜಯ್ ದೇವರಕೊಂಡ ನಾಯಕನಾದರೂ ವಿಶೇಷವಾಗಿ ಅವರ ಪಾತ್ರವನ್ನು ಹೆಣೆಯಲಾಗಿದೆ. ಮಾತನಾಡುವಾಗ ವಿಜಯ್ ತೊದಲುತ್ತಾರೆ. ಇದುವೇ ಅವರ ಪಾತ್ರದ ವಿಶೇಷತೆ.

  ಪ್ರೀ ಬುಕಿಂಗ್‌ನಲ್ಲೇ ಕೋಟ್ಯಂತರ ಬಾಚಿದ 'ಲೈಗರ್': ಫುಲ್ ಖುಷಿಯಲ್ಲಿ ವಿಜಯ್ ದೇವರಕೊಂಡಪ್ರೀ ಬುಕಿಂಗ್‌ನಲ್ಲೇ ಕೋಟ್ಯಂತರ ಬಾಚಿದ 'ಲೈಗರ್': ಫುಲ್ ಖುಷಿಯಲ್ಲಿ ವಿಜಯ್ ದೇವರಕೊಂಡ

  ಇನ್ನು ಸಿನಿಮಾ ರಿಲೀಸ್ ದಿನ ಹೆಚ್ಚಿನ ನಿರೀಕ್ಷೆ ಇತ್ತು. 'ಲೈಗರ್' ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ, ಚಿತ್ರ ಬಾಕ್ಸಾಫೀಸ್ ಗಳಿಕೆ ಹೇಗಿಲಿದೆ? ಯಾವ ಮಟ್ಟದ ಓಪನಿಂಗ್ ಪಡೆದುಕೊಂಡಿದೆ ಎನ್ನುವುದನ್ನು ಮುಂದೆ ಓದಿ...

  'ಲೈಗರ್' ದಿನ 1 ಗಳಿಕೆ!

  'ಲೈಗರ್' ದಿನ 1 ಗಳಿಕೆ!

  ಟಾಲಿವುಡ್ ವರದಿಯ ಪ್ರಕಾರ 'ಲೈಗರ್' ಸಿನಿಮಾ ಮೊದಲ ದಿನ ನಿರೀಕ್ಷೆಯ ಮೊತ್ತವನ್ನು ಕಲೆ ಹಾಕಿದೆ. ವಿಶ್ವದಾದ್ಯಂತ ಮೊದಲ ದಿನ 'ಲೈಗರ್' ಒಟ್ಟಾರೆ ಗಳಿಕೆ ರೂ. 24.5 ಕೋಟಿ ರೂ. ಎಂದು ವರದಿಯಾಗಿದೆ. ಈ ಪೈಕಿ ತೆಲುಗು ಬೆಲ್ಟ್‌ನಲ್ಲೇ ಹೆಚ್ಚಿನ ಗಳಿಕೆ ಕಂಡಿದೆ ಈ ಸಿನಿಮಾ. ತೆಲುಗು ಬೆಲ್ಟ್‌ನಲ್ಲಿ 15 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗಿದೆ. ಮೊದಲ ದಿನ 25 ಕೋಟಿ ರೂ. ಕಲೆಕ್ಷನ್ ದಾಟಿರೋದು ಉತ್ತಮ ಆರಂಭ ಎಂದೇ ಹೇಳಬಹುದು.

  ಹಿಂದಿಯಲ್ಲಿ 5 ಕೋಟಿ ರೂ. ಗಳಿಕೆ!

  ಹಿಂದಿಯಲ್ಲಿ 5 ಕೋಟಿ ರೂ. ಗಳಿಕೆ!

  ಸೌತ್ ಸಿನಿಮಾರಂಗದ ಯಾವುದೇ ಪ್ಯಾನ್ ಇಂಡಿಯಾ ಸಿನಿಮಾ ಬಂದರೂ, ಮೊದಲು ಹಿಂದಿಯಲ್ಲಿ ಗಳಿಕೆ ಎಷ್ಟಾಗಿದೆ ಎನ್ನುವ ಕುತೂಹಲ ಇರುತ್ತದೆ. 'ಲೈಗರ್' ಸಿನಿಮಾ ಕೂಡ ಹಿಂದಿ ಅವತರಣಿಕೆಯಲ್ಲಿ ಎಷ್ಟು ಗಳಿಸಿಕೊಂಡಿದೆ ಎನ್ನುವ ಲೆಕ್ಕಾಚಾರ ಹೊರ ಬಂದಿದೆ. ಮೊದಲ ದಿನ 'ಲೈಗರ್' ಹಿಂದಿಯಲ್ಲಿ 5 ಕೋಟಿ ರೂ. ಹಣವನ್ನು ಗಳಿಸಿಕೊಂಡಿದೆ ಎನ್ನಲಾಗಿದೆ. ಈ ಚಿತ್ರ ಕೂಡ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಕಮಾಲ್ ಮಾಡಲಿದೆ.

  ವೀಕೆಂಡ್‌ನಲ್ಲಿ 100 ಕೋಟಿ ರೂ.!

  ವೀಕೆಂಡ್‌ನಲ್ಲಿ 100 ಕೋಟಿ ರೂ.!

  'ಲೈಗರ್' ಸಿನಿಮಾ ಮೊದಲ ದಿನ 25 ಕೋಟಿ ರೂ. ಗಳಿಸಿದೆ. ಇನ್ನು ಈ ಗಳಿಕೆ ವೀಕೆಂಡ್‌ನಲ್ಲಿ ದುಪ್ಪಟ್ಟಾದರೆ, ಮೊದಲ ವೀಕೆಂಡ್‌ನಲ್ಲಿ ಈ ಸಿನಿಮಾ 100 ಕೋಟಿಯ ಗಡಿದಾಟುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲ ವಾರಾಂತ್ಯದಲ್ಲಿ ಹೆಚ್ಚು ಗಳಿಸಿಕೊಂಡರೆ, ಅದು ಮುಂದಿನ ವಾರಕ್ಕೂ ಮುಂದುವರೆಯಲಿದೆ. ಮೊದಲ ದಿನದ ಗಳಿಕೆಯಿಂದಾಗಿ 'ಲೈಗರ್' ಭರವಸೆ ಮೂಡಿಸಿದೆ.

  200 ಕೋಟಿ ರೂ. ನಿರೀಕ್ಷೆ!

  200 ಕೋಟಿ ರೂ. ನಿರೀಕ್ಷೆ!

  'ಲೈಗರ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಚಿತ್ರದ ಗಳಿಕೆಯ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲೂ ಚಿತ್ರತಂಡ ಈ ಚಿತ್ರ, ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಗಳಿಕೆ ಕಾಣಲಿದೆ ಎನ್ನುವ ನಿರೀಕ್ಷೆಯಲ್ಲಿ ಇದೆ. ಈ ವಿಚಾರವನ್ನು ಈ ಹಿಂದೆ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ಈ ಸಿನಿಮಾ ಎಷ್ಟು ಗಳಿಕೆ ಕಾಣಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ 'ಲೈಗರ್' ಸಿನಿಮಾ 200 ಕೋಟಿರೂ.ಗೂ ಹೆಚ್ಚು ಗಳಿಕೆ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ.

  English summary
  Vijay Devarkonda, Ananya Panday Starrer Liger Day 1 Box Office Collection Report Worldwide, Know More,
  Friday, August 26, 2022, 13:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X