ವಿಜಯ್ ದೇವರಕೊಂಡಗೆ ಈ ಇಬ್ಬರು ಖ್ಯಾತ ನಟಿಯರ ಜೊತೆ ನಟಿಸುವ ಆಸೆಯಂತೆ

ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಫೈಟರ್ ತೆಲುಗು ಮಾತ್ರವಲ್ಲದೆ ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ದೊಡ್ಡ ಮಟ್ಟಕ್ಕೆ ತಯಾರಾಗುತ್ತಿರುವ ಫೈಟರ್ ಸಿನಿಮಾಗೆ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಚಿತ್ರದಲ್ಲಿ ಮೊದಲ ಬಾರಿಗೆ ವಿಜಯ್ ಗೆ ನಾಯಕಿಯಾಗಿ ಬಾಲಿವುಡ್ ನ ಕ್ಯೂಟ್ ನಟಿ ಅನನ್ಯ ಪಾಂಡೆ ಅಭಿನಯಿಸುತ್ತಿದ್ದಾರೆ. ವಿಜಯ್ ಮುಂದಿನ ಸಿನಿಮಾದಲ್ಲಿ ಬಾಲಿವುಡ್ ನ ಈ ಇಬ್ಬರು ಖ್ಯಾತ ನಟಿಯರ ಜೊತೆ ಅಭಿನಯಿಸಬೇಕು ಎನ್ನುವ ದೊಡ್ಡ ಆಸೆಯಿದೆಯಂತೆ. ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯ್ ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಹಾಗಾದರೆ ಯಾರು ಆ ನಟಿಯರು? ವಿಜಯ್ ಹೇಳಿದ್ದೇನು? ಮುಂದೆ ಓದಿ..

ಜಾಹ್ನವಿ ಕಪೂರ್ ಜೊತೆ ನಟಿಸುವ ಆಸೆಯಂತೆ

ಜಾಹ್ನವಿ ಕಪೂರ್ ಜೊತೆ ನಟಿಸುವ ಆಸೆಯಂತೆ

ನಟ ವಿಜಯ್ ದೇವರಕೊಂಡ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಜೊತೆ ನಟಿಸಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಈ ಹಿಂದೆ ಜಾಹ್ನವಿ ಕಪೂರ್ ಕೂಡ ವಿಜಯ್ ಜೊತೆ ನಟಿಸಬೇಕು ಎನ್ನುವ ಬಯಕೆಯನ್ನು ಹೊರಹಾಕಿದ್ದರು. ಅಲ್ಲದೆ ಫೈಟರ್ ಚಿತ್ರಕ್ಕೆ ಜಾಹ್ನವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ ಅನನ್ಯ ಪಾಂಡೆ ಆಯ್ಕೆಯಾಗಿದ್ದಾರೆ.

ಕಿಯಾರ ಜೊತೆಯೂ ಅಭಿನಯಿಸಬೇಕಂತೆ ವಿಜಯ್

ಕಿಯಾರ ಜೊತೆಯೂ ಅಭಿನಯಿಸಬೇಕಂತೆ ವಿಜಯ್

ಬಾಲಿವುಡ್ ಮತ್ತೋರ್ವ ಖ್ಯಾತ ನಟಿ ಕಿಯಾರ ಅಡ್ವಾನಿ ಕೂಡ ವಿಜಯ್ ಫೇವರಿಟ್ ನಟಿಯಂತೆ. ಕಿಯಾರ ಅಡ್ವಾನಿ ಜೊತೆಯೂ ಅಭಿನಯಿಸಬೇಕು ಎನ್ನುವ ಆಸೆ ಇದೆ ಎಂದು ವಿಜಯ್ ಹೇಳಿದ್ದಾರೆ. ಅಂದ್ಹಾಗೆ ಕಿಯಾರ ಅರ್ಜುನ್ ರೆಡ್ಡಿ ಹಿಂದಿ ರಿಮೇಕ್ ಕಬೀರ್ ಸಿಂಗ್ ಚಿತ್ರದಲ್ಲಿ ಅಭಿನಯಿಸಿದ್ದರು. ಕಿಯಾರ ಅಭಿನಯ ನೋಡಿ ವಿಜಯ್ ದೇವರಕೊಂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಉತ್ತಮ ನಟಿಯಾದರೆ ಯಾರ ಜೊತೆಯಾದರು ನಟಿಸುತ್ತೇನೆ

ಉತ್ತಮ ನಟಿಯಾದರೆ ಯಾರ ಜೊತೆಯಾದರು ನಟಿಸುತ್ತೇನೆ

ಮುಂದಿನ ಸಿನಿಮಾದಲ್ಲಿ ಬಾಲಿವುಡ್ ನ ಯಾವ ನಟಿಯ ಜೊತೆ ನಟಿಸಲು ಬಯಸುತ್ತೀರಿ ಎಂದು ಕೇಳಿದ ಪ್ರಶ್ನೆಗೆ ವಿಜಯ್ "ಕಿಯಾರ ಅಡ್ವಾನಿ ಮತ್ತು ಜಾಹ್ನವಿ ಕಪೂರ್ ಜೊತೆ ನಟಿಸಲು ಉತ್ಸುಕನಾಗಿದ್ದೀನಿ. ಆದರೆ ಒಳ್ಳೆಯ ನಟಿಯಾದರೆ ಯಾರ ಜೊತೆಯಾದರು ಅಭಿನಯಿಸುತ್ತೇನೆ. ಯಾವುದೆ ಭಾಷೆಯ ನಟಿಯನ್ನಾದರು ನೀಡಿ ಅಭಿನಯಿಸುತ್ತೇನೆ"ಎಂದು ಹೇಳಿದ್ದಾರೆ.

ಫೈಟರ್ ಗೆಲುವಿನ ನಿರೀಕ್ಷೆಯಲ್ಲಿ ವಿಜಯ್

ಫೈಟರ್ ಗೆಲುವಿನ ನಿರೀಕ್ಷೆಯಲ್ಲಿ ವಿಜಯ್

ವಿಜಯ್ ಅಭಿನಯದ ವರ್ಲ್ಡ್ ಫೇಮಸ್ ಲವರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲುಕಂಡಿದೆ. ಅಲ್ಲದೆ ಡಿಯರ್ ಕಾಮ್ರೇಡ್ ಸಿನಿಮಾ ಸಹ ಹೇಳುವಷ್ಟು ಯಶಸ್ಸು ತಂದುಕೊಟ್ಟಿಲ್ಲ. ಹಾಗಾಗಿ ಬ್ಯಾಕ್ ಟು ಬ್ಯಾಕ್ ಸೋಲಿನಿಂದ ಕಂಗೆಟ್ಟಿರುವ ವಿಜಯ್ ಗೆ ಫೈಟರ್ ಸಿನಿಮಾದ ಗೆಲುವು ತೀರ ಅನಿವಾರ್ಯವಾಗಿದೆ. ಫೈಟರ್ ಮೂಲಕ ಮತ್ತೆ ಗೆದ್ದು ಬರುತ್ತಾರಾ ಎನ್ನವುದನ್ನು ಕಾದುನೋಡಬೇಕು.

More from Filmibeat

English summary
Telugu Actor Vijay devarakonda wants to work with bollywood actress Kiara Advani and Janhavi Kapoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X