ವಿಜಯ್ ದೇವರಕೊಂಡ ಹೆಸರಿನಲ್ಲಿ ಯುವ ನಟಿಯರಿಗೆ ಮೋಸ: ಎಚ್ಚರಿಕೆ ನೀಡಿದ ನಟ

ಟಾಲಿವುಡ್ ನ ಸೆನ್ಸೇಶನ್ ಸ್ಟಾರ್ ವಿಜಯ್ ದೇವರಕೊಂಡ ಹೆಸರನ್ನು ಬಳಸಿಕೊಂಡು ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸ್ಟಾರ್ ನಟನಾಗಿ ಗುರುತಿಸಿಕೊಂಡಿರುವ ವಿಜಯ್ ದೇವರಕೊಂಡ ಹೆಸರಿನಲ್ಲಿ ಕೆಲವು ನಕಲಿ ನಿರ್ಮಾಣ ಸಂಸ್ಥೆಗಳು ಆಡಿಷನ್ ನಡೆಸಿ, ನಟಿಯರನ್ನು ಆಯ್ಕೆ ಮಾಡುತ್ತಿದ್ದಾರೆ. ಇಂತಹ ನಕಲಿ ನಿರ್ಮಾಣ ಸಂಸ್ಥೆಗಳಿಗೀಗ ನಟ ವಿಜಯ್ ದೇವರಕೊಂಡ ವಾರ್ನಿಂಗ್ ಮಾಡಿದ್ದಾರೆ.

ವಿಜಯ್ ದೇವರಕೊಂಡ ಸಿನಿಮಾಗಳು ಅಧಿಕೃತವಾಗಿ ಅನೌನ್ಸ್ ಆಗುತ್ತೆ. ಬೇರೆಯಾವುದನ್ನು ನಂಬಬೇಡಿ ಎಂದು ವಿಜಯ್ ತಂಡ ಹೇಳಿದೆ. ಯಾವುದೇ ಆಡಿಷನ್ ತೆಗೆದುಕೊಳ್ಳುವ ಮೊದಲು ಜಾಗರೂಕರಾಗಿರಬೇಕು ಎಂದಿದ್ದಾರೆ. ಅಲ್ಲದೆ ವಂಚನೆ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳವುದಾಗಿ ಭರವಸೆ ನೀಡಿದ್ದಾರೆ.

'ವಿಜಯ್ ದೇವರಕೊಂಡ ನಾಯಕನಾಗಿ ನಟಿಸುವ ಸಿನಿಮಾಗೆ ನಟಿಯರು ಬೇಕಾಗಿದ್ದಾರೆ, ವಿಜಯ್ ಜೊತೆ ನಟಿಸಲು ಆಸಕ್ತಿ ಇರುವವರು ಆಡಿಷನ್ ಗೆ ಬರಬಹುದು' ಎಂದು ಜಾಹಿರಾತು ನೀಡಿ ಆಡಿಷನ್ ಮಾಡುತ್ತಿದ್ದಾರೆ. ಇದು ವಿಜಯ್ ಗಮನಕ್ಕೆ ಬಂದಿದೆ. ಇಂತಹ ನಿರ್ಮಾಣ ಸಂಸ್ಥಗಳ ವಿರುದ್ಧ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijay Devarakonda Warns Fake Production Companies Using His Name For Addition

ಈ ಬಗ್ಗೆ ವಿಜಯ್ ದೇವರಕೊಂಡ ತಂಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದೆ. 'ನಾವು ಕೆಲವು ನಿರ್ಮಾಣ ಸಂಸ್ಥೆಗಳಿಗೆ ನೋಟಿಸ್ ನೀಡಿದ್ದೇವೆ. ವಿಜಯ್ ದೇವರಕೊಂಡ ಹೆಸರಿನಲ್ಲಿ ಆಡಿಷನ್ ಮಾಡಿ ನಟಿಯರನ್ನು ಆಯ್ಕೆ ಮಾಡಲಾಗಿದೆ. ವಿಜಯ್ ದೇವರಕೊಂಡ ಅವರ ಸಿನಿಮಾದ ಯಾವುದೇ ವಿಚಾರವನ್ನು ಅಧಿಕೃತವಾಗಿ ನಿರ್ಮಾಪಕರು ಘೋಷಣೆ ಮಾಡುತ್ತಾರೆ. ಇಂತಹ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ." ಎಂದು ಹೇಳಿದ್ದಾರೆ.

ವಿಜಯ್ ದೇವರಕೊಂಡ ಸದ್ಯ ಪೂರಿ ಜಗನ್ನಾಥ್ ನಿರ್ದೇಶನದ ಫೈಟರ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಲಾಕ್ ಡೌನ್ ಕಾರಣ ಚಿತ್ರೀಕರಣಕ್ಕೆ ಬ್ರೇಕ್ ಹಾಕಲಾಗಿದೆ. ಚಿತ್ರದಲ್ಲಿ ವಿಜಯ್ ಗೆ ನಾಯಕಿಯಾಗಿ ಅನನ್ಯಾ ಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಅನನ್ಯಾ ಪಾಂಡೆ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಬ್ರೇಕ್ ನಲ್ಲಿರುವ ಸಿನಿಮಾತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲು ಸಿದ್ಧವಾಗಿದೆ.

Recommended Video

DIRECTORS DAIRY : ನಾನು ಇಡ್ಲಿ ನೋಡಿದ್ದೇ ಬೆಂಗಳೂರಿಗೆ ಬಂದ್ಮೇಲೆ | R Chandru | Filmibeat Kannada

More from Filmibeat

English summary
Actor Vijay Devarakonda warns fake production companies for using his name for Addition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X