'ವರ್ಲ್ಡ್ ಫೇಮಸ್ ಲವರ್' ಸಿನಿಮಾ ವಿಜಯ್ ದೇವರಕೊಂಡ ಬದಲು ಈ ಸ್ಟಾರ್ ನಟ ಮಾಡಬೇಕಿತ್ತು
'ವರ್ಲ್ಡ್ ಫೇಮಸ್ ಲವರ್' ವಿಜಯ್ ದೇವರಕೊಂಡ ಅಭಿನಯದ ಸಿನಿಮಾದ. ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ ಕೊನೆಯದಾಗಿ ವರ್ಲ್ಡ್ ಫೇಮಸ್ ಲವರ್ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಿನಿಮಾ ನಿರೀಕ್ಷೆಯ ಮಟ್ಟಕ್ಕೆ ಯಶಸ್ಸು ಕಾಣಲಿಲ್ಲವಾದರೂ ವಿಜಯ್ ಅಭಿಮಾನಿಗಳಿಗೆ ಮಸ್ತ್ ಮನರಂಜನೆ ಸಿಕ್ಕಿತ್ತು.
ದೊಡ್ಡ ಮಟ್ಟದಲ್ಲಿ ತೆರೆಗೆ ಬಂದ ಸಿನಿಮಾದಲ್ಲಿ ವಿಜಯ್ ಜೊತೆ ನಾಲ್ಕು ನಾಯಕಿಯರು ರೊಮ್ಯಾನ್ಸ್ ಮಾಡಿದ್ದರು. ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಸಿನಿಮಾವಾದರು ಬಾಕ್ಸ್ ಆಫೀಸ್ ನಲ್ಲಿ ಸೋಲುಕಂಡಿತ್ತು. ಈ ಸಿನಿಮಾದ ಬಗ್ಗೆ ಈಗ ಮಾಹಿತಿಯೊಂದು ಹರಿದಾಡುತ್ತಿದೆ. ವರ್ಲ್ಡ್ ಫೇಮಸ್ ಲವರ್ ಸಿನಿಮಾಗೆ ಮೊದಲು ಆಯ್ಕೆ ವಿಜಯ್ ದೇವರಕೊಂಡ ಅಲ್ಲವಂತೆ.
ಈ ಬಗ್ಗೆ ನಿರ್ದೇಶಕ ಕ್ರಾಂತಿ ಮಾಧವ್ ಬಹಿರಂಗ ಪಡಿಸಿದ್ದಾರೆ. ಸಿನಿಮಾದ ಕಥೆ ಮಾಡಿ ನಿರ್ದೇಶಕ ಕ್ರಾಂತಿ ಮಾದವ್ ಮೊದಲು ತೆಲುಗಿನ ಖ್ಯಾತ ನಟ ಸಾಯಿ ಧರ್ಮ್ ತೇಜ್ ಬಳಿ ಹೋಗಿದ್ದರಂತೆ. ಆದರೆ ಕಥೆ ಕೇಳಿ ಇಂಪ್ರೆಸ್ ಆಗದ ಸಾಯಿ ಧರ್ಮ್ ಸಿನಿಮಾ ರಿಜೆಕ್ಟ್ ಮಾಡುತ್ತಾರೆ. ನಂತರ ನಿರ್ದೇಶಕ ಕ್ರಾಂತಿ ಮಾದವ್ ಮತ್ತೋರ್ವ ನಟನ ಬಳಿ ಹೋಗುತ್ತಾರೆ.

ತೆಲುಗು ನಟ ಶರ್ವಾನಂದ್ ಅವರಿಗೆ ಕಥೆ ಹೇಳುತ್ತಿರಾರೆ. ಶರ್ವಾನಂದ್ ಮತ್ತು ಕ್ರಾಂತಿ ಮಾದವ್ ಆಗಲೆ ಒಂದು ಸಿನಿಮಾ ಮಾಡಿದ್ದಾರೆ. ಮಲ್ಲಿ ಮಲ್ಲಿ ರಾಣಿ ರೋಜು ಸಿನಿಮಾದಲ್ಲಿ ನಿರ್ದೇಶಕ ಕ್ರಾಂತಿ ಮತ್ತು ಶರ್ವಾನಂದ್ ಕೆಲಸ ಮಾಡಿದ್ದಾರೆ. ಆದರೆ ಜಾನು ಸಿನಿಮಾದಲ್ಲಿ ಬ್ಯುಸಿ ಇದ್ದ ಕಾರಣ ಶರ್ವಾನಂದ್ ಸಿನಿಮಾ ಮಾಡಲು ಹಿಂದೇಟು ಹಾಕಿದ್ದಾರೆ.
ನಂತರ ವಿಜಯ್ ಬಳಿ ಹೋದ ನಿರ್ದೇಶಕರಿಗೆ ವಿಜಯ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಗುತ್ತೆ. ನಂತರ ಇಬ್ಬರು ಸಿನಿಮಾ ಮಾಡುತ್ತಾರೆ. ಆದರೆ ಸಿನಿಮಾಗೆ ನಿರೀಕ್ಷೆಯ ಮಟ್ಟದ ಗೆಲವು ಸಿಗುವುದಿಲ್ಲ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಜಯ್ ಸದ್ಯ ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











