ಒಟ್ಟಿಗೆ ಜಿಮ್‌ನಲ್ಲಿ ಬೆವರಿಳಿಸಿದ ವಿಜಯ್ ದೇವರಕೊಂಡ-ರಶ್ಮಿಕಾ

By ಫಿಲ್ಮಿಬೀಟ್ ಡೆಸ್ಕ್

ನಟಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಕುರಿತ ಕತೆಗಳು ಈಗಾಗಲೇ ಸಾಕಷ್ಟು ಹರಿದಾಡುತ್ತಿವೆ. ಇಬ್ಬರ ನಡುವಿನ ಸಂಬಂಧ ಕೇವಲ ಸ್ನೇಹವೊ, ಪ್ರೇಮವೊ ಎಂಬ ಬಗ್ಗೆ ಈ ನಟರು ಈವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಯಾವ ಸುದ್ದಿಗಳನ್ನು ನಿರಾಕರಿಸಿಯೂ ಇಲ್ಲ.

ಆಗಾಗ್ಗೆ ಈ ಜೋಡಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುತ್ತದೆ. ಹೋಟೆಲ್‌ನಲ್ಲಿ, ಜಿಮ್‌ನಲ್ಲಿ ಹೀಗೆ ಹಲವು ಕಡೆಗಳಲ್ಲಿ ಕೈ-ಕೈ ಹಿಡಿದು ಸುತ್ತಾಡಿದ್ದಿದೆ. ರಶ್ಮಿಕಾ ಮಂದಣ್ಣ ಮುಂಬೈಗೆ ಸ್ಥಳಾಂತರವಾದ ಬಳಿಕವೂ ಈ ಜೋಡಿ ಆಗೊಮ್ಮೆ-ಈಗೊಮ್ಮೆ ಕಾಣಿಸಿಕೊಳ್ಳುತ್ತಿದ್ದರು.

ಇದೀಗ ಮತ್ತೆ ವಿಜಯ್ ಹಾಗೂ ರಶ್ಮಿಕಾ ಭೇಟಿಯಾಗಿದ್ದು, ಭೇಟಿಯ ಖುಷಿಯಲ್ಲಿ ಚಿತ್ರವೊಂದನ್ನು ನಟಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿದ್ದಾರೆ. ಈ ಚಿತ್ರ ಮತ್ತೆ ಹಳೆಯ ಸುದ್ದಿಗಳಿಗೆ ಮರುಜೀವ ನೀಡಿದೆ.

ಚಿತ್ರ ಹಂಚಿಕೊಂಡಿದ್ದಾರೆ ರಶ್ಮಿಕಾ

ಚಿತ್ರ ಹಂಚಿಕೊಂಡಿದ್ದಾರೆ ರಶ್ಮಿಕಾ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಒಟ್ಟಿಗೆ ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜಿಮ್‌ನಲ್ಲಿರುವ ಚಿತ್ರವನ್ನು ಸ್ವತಃ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕುಲ್ದೀಪ್ ಸೇಠಿ ಎಂಬವರು ಇದ್ದು, ಇವರು ಈ ಇಬ್ಬರಿಗೂ ಕಾಮನ್ ಫ್ರೆಂಡ್ ಎನ್ನಲಾಗಿದೆ. ಚಿತ್ರವು ಸಖತ್ ವೈರಲ್ ಆಗಿದೆ. ಚಿತ್ರದ ಜೊತೆಗೆ ''ಹುಡುಗರು ಗಂಭೀರವಾಗಿ ಪೋಸ್‌ ನೀಡುತ್ತಿದ್ದಾರೆ ಆದರೆ ನಾನು ಕೇವಲ ತಮಾಷೆಗಷ್ಟೆ ಅಲ್ಲಿದ್ದೇನೆ'' ಎಂದು ಕ್ಯಾಪ್ಷನ್ ಹಾಕಿದ್ದಾರೆ ರಶ್ಮಿಕಾ.

ಒಟ್ಟಿಗೆ ಜಿಮ್ ಮಾಡಿದ್ದು ಇದು ಮೊದಲೇನಲ್ಲ

ಒಟ್ಟಿಗೆ ಜಿಮ್ ಮಾಡಿದ್ದು ಇದು ಮೊದಲೇನಲ್ಲ

ಈ ಜೋಡಿ ಒಟ್ಟಿಗೆ ಜಿಮ್‌ನಲ್ಲಿ ವರ್ಕೌಟ್ ಮಾಡಿದ್ದು ಇದು ಮೊದಲೇನಲ್ಲ. ಈ ಹಿಂದೆ ಹೈದರಾಬಾದ್‌ನಲ್ಲಿ ಒಟ್ಟಿಗೆ ಜಿಮ್ ಮಾಡುತ್ತಿದ್ದ ವಿಜಯ್-ರಶ್ಮಿಕಾ ಜಿಮ್‌ನಿಂದ ಹೊರಗೆ ಬರಬೇಕಾದರೆ ಫೊಟೊಗ್ರಾಫರ್‌ಗಳ ಕಣ್ಣಿಗೆ ಬಿದ್ದಿದ್ದರು. ಇಬ್ಬರೂ ಸಹ ಮುಖ ಮುಚ್ಚಿಕೊಂಡು ಪರಾರಿ ಆಗಿದ್ದರು. ಈ ಯುವ ಜೋಡಿ ಮುಖ ಮುಚ್ಚಿಕೊಂಡು ಪರಾರಿಯಾಗಿದ್ದ ಚಿತ್ರಗಳು ಸಖತ್ ವೈರಲ್ ಆಗಿದ್ದವು.

ಇಬ್ಬರು ಗೆಳೆಯರಷ್ಟೆ ಎಂದಿದ್ದ ಜೋಡಿ

ಇಬ್ಬರು ಗೆಳೆಯರಷ್ಟೆ ಎಂದಿದ್ದ ಜೋಡಿ

ಇದೇ ವರ್ಷದ ಮಾರ್ಚ್‌ನಲ್ಲಿ ಸಹ ಇಬ್ಬರು ಮುಂಬೈನಲ್ಲಿ ಪರಸ್ಪರ ಭೇಟಿಯಾಗಿದ್ದರು. ಮುಂಬೈನ ಹೋಟೆಲ್‌ಗೆ ಭೇಟಿ ನೀಡಿದ್ದ ಈ ಜೋಡಿ ಹೋಟೆಲ್‌ನಲ್ಲಿ ಬಹುಕಾಲ ಕಳೆದಿದ್ದರು. ಆಗ ರಶ್ಮಿಕಾ ತೊಟ್ಟಿದ್ದ ಉಡುಗೆ ಬಗ್ಗೆ ನೆಟ್ಟಿಗರು ಅಸಮಾಧಾನಗೊಂಡಿದ್ದರು. ಆಗಲೂ ಈ ಇಬ್ಬರ ಸಂಬಂಧದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿದ್ದವು, 'ಇಲ್ಲ ನಾವಿಬ್ಬರು ಒಳ್ಳೆಯ ಗೆಳೆಯರಷ್ಟೆ'' ಎಂದಿತ್ತು ಈ ಜೋಡಿ.

ವಿಜಯ್ ದೇವರಕೊಂಡ ಮಾಜಿ ಪ್ರೇಯಸಿ

ವಿಜಯ್ ದೇವರಕೊಂಡ ಮಾಜಿ ಪ್ರೇಯಸಿ

ವಿಜಯ್ ದೇವರಕೊಂಡಗೆ ಈ ಹಿಂದೆ ಇಜಾಬೆಲ್ಲ ಲಿಟೆ ಹೆಸರಿನ ಗರ್ಲ್‌ಫ್ರೆಂಡ್ ಇದ್ದರು. ಬ್ರೆಜಿಲಿಯನ್ ಆಗಿರುವ ಈ ನಟಿ ಹಿಂದಿಯ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದರು. ಈ ನಟಿಯ ಹೆಸರು ಈ ಹಿಂದೆ ವಿರಾಟ್ ಕೊಹ್ಲಿ ಜೊತೆಗೆ ಸಹ ಕೇಳಿಬಂದಿತ್ತು. ರಶ್ಮಿಕಾ ವಿಷಯವಂತೂ ಬಹುತೇಕರಿಗೆ ಗೊತ್ತಿರುವುದೇ, ನಟ ರಕ್ಷಿತ್ ಶೆಟ್ಟಿ ಜೊತೆ ಎಂಗೇಜ್‌ಮೆಂಟ್ ಸಹ ಆಗಿತ್ತು. ಆದರೆ ನಂತರ ಎಂಗೇಜ್‌ಮೆಂಟ್ ಮುರಿದು ಬಿತ್ತು. ನಂತರ ಇಬ್ಬರೂ ಪರಸ್ಪರ ಬೇರೆ-ಬೇರೆ ದಾರಿಗಳಲ್ಲಿ ನಡೆಯುತ್ತಿದ್ದಾರೆ. ರಶ್ಮಿಕಾ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರೂ ತಮ್ಮ ವೃತ್ತಿ ಬದುಕಿನ ಬಗ್ಗೆ ಹೆಚ್ಚಿನ ಗಮನ ವಹಿಸಿದ್ದಾರೆ.

ಬಾಲಿವುಡ್‌ಗೆ ಹಾರಿದ ರಶ್ಮಿಕಾ, ವಿಜಯ್ ದೇವರಕೊಂಡ ಸಹ

ಬಾಲಿವುಡ್‌ಗೆ ಹಾರಿದ ರಶ್ಮಿಕಾ, ವಿಜಯ್ ದೇವರಕೊಂಡ ಸಹ

ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್‌ಗೆ ಹಾರಿದ್ದು ಬಾಲಿವುಡ್‌ನಲ್ಲಿ ಎರಡು ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್‌ ಬೈ' ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ, ಸಿದ್ಧಾರ್ಥ್ ಮಲ್ಹೋತ್ರಾ ಜೊತೆಗೆ ;ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮುಂಬೈಗೆ ವಾಸ್ತವ್ಯ ಬದಲಿಸಿರುವ ಈ ನಟಿ ಅಲ್ಲಿಯೇ ಸೆಟಲ್ ಆಗುವ ಯೋಚನೆಯಲ್ಲಿದ್ದಾರೆ. ಇನ್ನು ನಟ ವಿಜಯ್ ದೇವರಕೊಂಡ ಸಹ ಬಾಲಿವುಡ್‌ ಸಿನಿಮಾದಲ್ಲಿ ನಟಿಸಲಿದ್ದಾರೆ. ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಬಂಡವಾಳ ಹೂಡಲಿರುವ ಮುಂದಿನ ಹಿಂದಿ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಾಯಕ.

More from Filmibeat

English summary
Actor Vijay Devarkonda and Rashmika Mandanna workout at gym in Hyderabad. Rashmika posted photo on the social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X