ಮದುವೆ ಆಗಲ್ವಂತೆ ವಿಜಯ್ ದೇವರಕೊಂಡ!
ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಸಾಕಷ್ಟು ಹೆಸರುವಾಸಿ ಆಗಿರುವ ನಟ ವಿಜಯ್ ದೇವರಕೊಂಡ. ಅರ್ಜುನ್ ರೆಡ್ಡಿ ಸಿನಿಮಾದ ಬಳಿಕ ಸಾಲು ಸಾಲು ಸಿನಿಮಾಗಳು, ಜಾಹಿರಾತುಗಳಲ್ಲಿ ನಟಿಸಿ ಯಶಸ್ಸಿನ ದಾರಿಯಲ್ಲಿ ಸಾಗುತ್ತಿದ್ದಾರೆ. ಸಹಜ ಎಂಬಂತೆ ವಿಜಯ್ ದೇವರಕೊಂಡ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕ್ಯೂರಿಯಾಸಿಟಿಗಳಿವೆ. ಅದರಲ್ಲಿ ಪ್ರಮುಖವಾಗಿರೊದು ಅವರ ಮದುವೆ ಬಗ್ಗೆ. ಪ್ರತೀ ಬಾರಿಯೂ ಎಲ್ಲೆ ಸಿಕ್ಕಿದ್ರು, ಮದುವೆ ಯಾವಾಗ ಅನ್ನೋ ಪ್ರಶ್ನೆ ಇದ್ದೆ ಇರುತ್ತೆ. ಇದಕ್ಕೆ ಅಷ್ಟಾಗಿ ಪ್ರತಿಕ್ರೀಯೆ ನೀಡದ ದೇವರಕೊಂಡ ತನ್ನ ಮದುವೆ ಬಗ್ಗೆ ಈಗ ಮಾತನಾಡಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡಿಯರ್ ಕಾಮ್ರೆಡ್ ಸಿನಿಮಾ ಮಾಡಿದ ನಂತರದಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿರಬಹುದು ಎಂಬ ಸಾಕಷ್ಟು ಗಾಸಿಪ್‌ಗಳು ಓಡಾಡುತ್ತಲೇ ಇರುತ್ತವೆ. ಅಲ್ಲದೇ ಇವರಿಬ್ಬರು ಜಿಮ್, ವರ್ಕ್‌ಔಟ್ ಸೇರಿದಂತೆ ಕೆಲವು ಬಾರಿ ಮುಂಬೈ ನಗರದಲ್ಲೂ ಒಟ್ಟಾಗಿ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ. ಹೀಗಾಗಿ ಇವರಿಬ್ಬರೂ ಮದುವೆ ಆದ್ರೆ ಚೆನ್ನಾಗಿರುತ್ತೆ ಅಂತ ಅಭಿಮಾನಿಗಳ ಆಸೆ. ಆದ್ರೆ ಇಷ್ಟು ದಿನ ತನ್ನ ಮದುವೆ ಬಗ್ಗೆ ಎಲ್ಲೂ ಮಾತನಾಡಿರದ ವಿಜಯ್ ದೇವರಕೊಂಡ ಈಗ ತಾನು ಮದುವೆ ಆಗಲ್ಲ ಎಂದು ಹೇಳುವ ಮೂಲಕ ಫ್ಯಾನ್ಸ್‌ಗೆ ಶಾಕ್ ನೀಡಿದ್ದಾರೆ.
ವಿಜಯ್ ದೇವರಕೊಂಡ ಕಿರಿಯ ಸಹೋದರ ಆನಂದ್ ದೇವರಕೊಂಡ ತೆಲುಗು ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ. ದೊರಸಾನಿ, ಮಿಡಲ್ ಕ್ಲಾಸ್ ಮೆಲೋಡಿಸ್ ನಂತರ ಈಗ ಪುಷ್ಪಕ ವಿಮಾನಂ ನ ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ಸಿನಿಮಾವನ್ನು ಸ್ವತಃ ಸಹೋದರ ವಿಜಯ್ ದೇವರಕೊಂಡ ಅರ್ಪಿಸುತ್ತಿದ್ದಾರೆ. ಸಿನಿಮಾ ಕೂಡ ನವೆಂಬರ್ 12ಕ್ಕೆ ರಿಲೀಸ್ ಆಗುತ್ತಿದ್ದು, ಅಣ್ಣ ತಮ್ಮ ಇಬ್ಬರು ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಈ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ನಿಮ್ಮ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದಾಗ ವಿಜಯ್ ನಾನು ಮದುವೆ ಆಗಲ್ಲ. ನನ್ನ ತಮ್ಮ ಮೊದಲು ಆಗುತ್ತಾನೆ ಎಂದು ಹೇಳಿ ನಗೆ ಬೀರಿದ್ದಾರೆ. ಈ ಹೇಳಿಕೆ ಮೂಲಕ ಸದ್ಯಕ್ಕಂತೂ ವಿಜಯ್ ಮದುವೆ ಆಗೋದಿಲ್ಲ ಅನ್ನೋದನ್ನು ತಿಳಿಸಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಬಾರಿ ನಿರಾಸೆಗೊಂಡಿದ್ದು, ನೀವೆ ಮೊದಲು ಮದುವೆ ಆಗಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಈ ಸಂದರ್ಶನದ ಪ್ರೋಮೊ ರಿಲೀಸ್ ಆಗಿದ್ದು, ಈ ಸಂದರ್ಶನದ ಫುಲ್ ವೀಡಿಯೋ ಅ.25ಕ್ಕೆ ರಿಲೀಸ್ ಆಗಲಿದೆ. ವಿಜಯ್ ದೇವರಕೊಂಡರ ಈ ಹೇಳಿಕೆ ಕೇಳಿದ ಫ್ಯಾನ್ಸ್ ಈ ಸಂದರ್ಶನವನ್ನು ನೋಡಲು ಕಾತುರರಾಗಿದ್ದಾರೆ. ಇನ್ನು ವಿಜಯ್ ಅವರ ಈ ಮಾತಿಗೆ ಆನಂದ್ ದೇವರಕೊಂಡ ಅಯ್ಯೋ ನಾನು ಮೊದಲು ಮದುವೆ ಆಗೊದಿಲ್ಲ ಎಂದು ಅಣ್ಣನ ಮಾತನ್ನು ಅಲ್ಲಗಳೆದಿದ್ದಾರೆ. ಈ ವೀಡಿಯೋ ಪುಷ್ಪಕ ವಿಮಾನಂ ಸಿನಿಮಾ ಸಂಬಂಧಿತ ಸಂದರ್ಶನವಾಗಿದ್ದು, ಸಾಕಷ್ಟು ವೈಯುಕ್ತಿಕ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗಿದೆ. ಸದ್ಯ ಪ್ರೋಮೊವನ್ನಷ್ಟೆ ಯೂಟ್ಯೂಬ್‌ನಲ್ಲಿ ರಿಲೀಸ್ ಮಾಡಲಾಗಿದ್ದು, ಅ.25ಕ್ಕೆ ಸಂಪೂರ್ಣ ಸಂದರ್ಶನದ ವೀಡಿಯೋ ರಿಲೀಸ್ ಆಗಲಿದೆ.

ವಿಜಯ್ ದೇವರಕೊಂಡ ಸದ್ಯ ಬಾಲಿವುಡ್ ಪ್ರವೇಶ ಮಾಡಿದ್ದು, ಸೈಗರ್ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಈ ಚಿತ್ರವನ್ನು ಪೂರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದು ವಿಜಯ್‌ಗೆ ಜೋಡಿಯಾಗಿ ಡ್ರಗ್‌ಕೇಸ್‌ನಲ್ಲಿ ತಳುಕು ಹಾಕಿಕೊಂಡಿರೋ ಅನನ್ಯ ಪಾಂಡೆ ನಾಯಕಿಯಾಗಿದ್ದಾರೆ.


Click it and Unblock the Notifications











