ರಶ್ಮಿಕಾ ಜೊತೆ ಮದುವೆ ಸುದ್ದಿ: ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ

ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಆಗಲಿದ್ದಾರೆ ಎಂಬ ಗಾಳಿ ಸುದ್ದಿ ಜೋರಾಗಿ ಹರಿದಾಡುತ್ತಿದೆ.

Recommended Video

ಟ್ವೀಟ್ ಮಾಡಿ ಫ್ಯಾನ್ಸ್‌ಗೆ ಈ ಸುದ್ದಿ ತಿಳಿಸಿದ್ದು ಯಾಕೆ ವಿಜಯ್ ದೇವರಕೊಂಡ

ಈ ಜೋಡಿ ಇದೇ ವರ್ಷ ವಿವಾಹವಾಗಿದ್ದಾರೆಂದು, ಈಗಾಗಲೇ ಇಬ್ಬರೂ ಲಿವಿನ್‌ ರಿಲೇಶನ್‌ನಲ್ಲಿದ್ದಾರೆಂದು ಹೀಗೆ ಹಲವು ಸುದ್ದಿಗಳು ಹರಿದಾಡುತ್ತಿವೆ. ಹೀಗೆ ಗಾಳಿ ಸುದ್ದಿಗಳು ಹರಡಲು ಕೆಲವು ಕಾರಣಗಳೂ ಇವೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಪರಸ್ಪರ ಬಹಳ ಆತ್ಮೀಯರು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಹಲವು ಕಡೆ ಒಟ್ಟೊಟ್ಟಿಗೆ ಸುತ್ತಾಡುತ್ತಿರುತ್ತಾರೆ. ಕಳೆದ ಸಂಕ್ರಾಂತಿ ಹಬ್ಬವನ್ನು ರಶ್ಮಿಕಾ ಆಚರಿಸಿದ್ದು ವಿಜಯ್ ದೇವರಕೊಂಡ ನಿವಾಸದಲ್ಲಿಯೇ. ಇಬ್ಬರ ಕುಟುಂಬದವರೂ ಒಟ್ಟಿಗೆ ಪ್ರವಾಸಗಳಿಗೆ ಸಹ ಹೋಗಿದ್ದಾರೆ. ಇದೆಲ್ಲ ಕಾರಣದಿಂದಾಗಿ ರಶ್ಮಿಕಾ ಹಾಗೂ ವಿಜಯ್ ನಡುವೆ ಪ್ರೇಮದ ಸುದ್ದಿಗಳು ಜೋರಾಗಿ ಹರಿದಾಡುತ್ತಿವೆ.

Vijay Devarkonda Rubbishes News About Marriage With Rashmika

ತಮ್ಮ ಹಾಗೂ ರಶ್ಮಿಕಾರ ಬಗೆಗಿನ ಸುದ್ದಿಗಳ ಬಗ್ಗೆ ವಿಜಯ್ ದೇವರಕೊಂಡ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

''ಮಾಮೂಲಿನಂತೆ ಇದು ಸಹ ಅಸಂಬದ್ಧ'' ಎಂದು ಟ್ವೀಟ್ ಮಾಡಿದ್ದಾರೆ ವಿಜಯ್ ದೇವರಕೊಂಡ, ಇದರ ಜೊತೆಗೆ ''ಡೋಂಟ್ ವಿ 'ಲವ್ ದ' ನ್ಯೂಸ್'' (ನಮಗೆ ಸುದ್ದಿ ಇಷ್ಟವಾಗುತ್ತದೆ ಅಲ್ಲವೇ) ಎಂದು ಸಹ ಬರೆದುಕೊಂಡಿದ್ದಾರೆ. ಆದರೆ ಇದರ ಅಕ್ಷರಗಳನ್ನು ಹೊಂದಿಸಿರುವ ರೀತಿ, ಗಾಳಿ ಸುದ್ದಿ ಹಬ್ಬಿಸಿರುವ ಸುದ್ದಿ ಸಂಸ್ಥೆಗಳಿಗೆ ಕೆಟ್ಟ ಭಾಷೆಯಲ್ಲಿ ಪರೋಕ್ಷವಾಗಿ ಬೈದಂತಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ರಿಲೇಶನ್‌ಶಿಪ್‌ ಬಗ್ಗೆ ಕೆಲ ವರ್ಷಗಳಿಂದಲೂ ಸುದ್ದಿಗಳು ಹರಿದಾಡುತ್ತಲೇ ಇವೆ. ಇಬ್ಬರೂ ಮೊದಲ ಬಾರಿಗೆ ಒಟ್ಟಿಗೆ 'ಗೀತ ಗೋವಿಂದಮ್' ಸಿನಿಮಾ ಮಾಡಿದಾಗಿನಿಂದಲೂ ಈ ಸುದ್ದಿಗಳು ಹರಿದಾಡುತ್ತಿವೆ. ತಾವಿಬ್ಬರು ಕೇವಲ ಗೆಳೆಯರಷ್ಟೆ ಎಂದು ರಶ್ಮಿಕಾ-ವಿಜಯ್ ಇಬ್ಬರೂ ಆಗಾಗ್ಗೆ ಹೇಳುತ್ತಲೇ ಬಂದಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಇಬ್ಬರೂ ಸಹ ತಮ್ಮ ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇಬ್ಬರೂ ಸಹ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ದಕ್ಷಿಣ ಭಾರತ ಚಿತ್ರರಂಗದಿಂದ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.

ರಶ್ಮಿಕಾ ಮಂದಣ್ಣ 'ಪುಷ್ಪ' ಸಿನಿಮಾದ ಯಶಸ್ಸಿನ ಅಲೆಯಲ್ಲಿದ್ದರೆ. ವಿಜಯ್ ದೇವರಕೊಂಡ 'ಲೈಗರ್' ಸಿನಿಮಾದ ಬಿಡುಗಡೆಗೆ ಕಾತರರಾಗಿದ್ದಾರೆ. ಇದರ ಜೊತೆಗೆ ರಶ್ಮಿಕಾ ನಟನೆಯ 'ಆಡುವಾಳ್ಳು ಮೀಕು ಜೋಹಾರ್ಲು', ಹಿಂದಿಯ 'ಗುಡ್ ಬೈ' ಹಾಗೂ 'ಮಿಷನ್ ಮಜ್ನು' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ.

ವಿಜಯ್‌ರ 'ಲೈಗರ್' ಬಿಡುಗಡೆಗೆ ತಯಾರಾಗಿದೆ ಇದರ ಜೊತೆಗೆ ಸುಕುಮಾರ್‌ರ ಮುಂದಿನ ಸಿನಿಮಾದಲ್ಲಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. ಆ ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡಲಿದ್ದಾರೆ. ಇದರ ಜೊತೆಗೆ ಕರಣ್ ಜೋಹರ್ ನಿರ್ಮಾಣದ ಹಿಂದಿ ಸಿನಿಮಾದಲ್ಲಿಯೂ ವಿಜಯ್ ನಟಿಸಲಿದ್ದಾರೆ.

More from Filmibeat

English summary
Actor Vijay Devarkonda rubbishes news about Rashmika Mandanna and him getting marriage soon. He said as usual nonsense.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X