ವಿಜಯ್ ದೇವರಕೊಂಡ ಸಹೋದರನ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ

ನಟ ವಿಜಯ್ ದೇವರಕೊಂಡ ತೆಲುಗು ಸಿನಿಮಾರಂಗದಲ್ಲಿ ಈಗಾಗಲೇ ಸ್ಟಾರ್ ನಟರ ಪಟ್ಟಕ್ಕೆ ಏರಿಯಾಗಿದೆ. ಬಾಲಿವುಡ್‌ಗೆ ಪ್ರವೇಶ ಪಡೆಯಲು ಸಹ ಅಣಿಯಾಗಿದ್ದಾರೆ ವಿಜಯ್ ದೇವರಕೊಂಡ.

ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಾಯಕನಾಗಿ ಈಗಾಗಲೇ ಒಂದು ಸಿನಿಮಾ ಮಾಡಿದ್ದು, ಅದು ಬಿಡುಗಡೆಯಾಗಿ ಸಾಧಾರಣ ಯಶಸ್ಸನ್ನೂ ಕಂಡಿದೆ, ಈಗ ಮತ್ತೊಂದು ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಆನಂದ್ ದೇವರಕೊಂಡ ನಟನೆಯ ಎರಡನೇ ಸಿನಿಮಾ 'ಮಿಡ್ಲ್‌ಕ್ಲಾಸ್ ಮೆಲೋಡೀಸ್' ಹಾಡೊಂದು ಬಿಡುಗಡೆ ಆಗಿದ್ದು, ಸಿನಿಮಾವು ಮಧ್ಯಮವರ್ಗದ ಕುಟುಂಬದಲ್ಲಿ ನಡೆವ ಹಾಸ್ಯ, ಭಾವನಾತ್ಮಕ ಅಂಶಗಳನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ.

'ಇಸಂ'ಗಳಿಲ್ಲದ ಸಾಮಾನ್ಯ ನಾಯಕ ನಟ

'ಇಸಂ'ಗಳಿಲ್ಲದ ಸಾಮಾನ್ಯ ನಾಯಕ ನಟ

ವಿಜಯ್ ದೇವರಕೊಂಡ ಲವರ್‌ ಬಾಯ್ ಹಾಗೂ ಆಕ್ಷನ್ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ಸಹೋದರ ಆನಂದ್ ದೇವರಕೊಂಡ ಯಾವುದೇ ಇಸಂ ಗಳಿಲ್ಲದ ಸಾಧಾರಣ ಹೀರೋ ಆಗಿ ತೆಲುಗು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.

ಆನಂದ್ ದೇವರಕೊಂಡ ಎರಡನೇ ಸಿನಿಮಾ

ಆನಂದ್ ದೇವರಕೊಂಡ ಎರಡನೇ ಸಿನಿಮಾ

ಆನಂದ್ ದೇವರಕೊಂಡ ಅವರ ಎರಡನೇ ಸಿನಿಮಾ 'ಮಿಡ್ಲ್‌ಕ್ಲಾಸ್ ಮೆಲೋಡೀಸ್' ಸಿನಿಮಾವನ್ನು ವಿನೋದ್ ಅನಂತೋಜು ನಿರ್ದೇಶಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ವರ್ಷಾ ಬೊಲ್ಲಮ್ಮ ನಟಿಸಿದ್ದಾರೆ. ಸಿನಿಮಾವನ್ನು ಭವ್ಯಾ ಕ್ರಿಯೇಶನ್ಸ್ ನಿರ್ಮಿಸಿದೆ.

ಗುಂಟೂರು ಬಗ್ಗೆ ಸುಂದರ ಹಾಡು

ಗುಂಟೂರು ಬಗ್ಗೆ ಸುಂದರ ಹಾಡು

ಸಿನಿಮಾದ ಕತೆಯು ಗುಂಟೂರು ಪಟ್ಟಣದಲ್ಲಿ ನಡೆಯಲಿದ್ದು, ಇಂದು ಬಿಡುಗಡೆ ಆಗಿರುವ ಹಾಡಿನಲ್ಲಿ ಸಿನಿಮಾದಲ್ಲಿ ಕೆಲಸ ಮಾಡಿರುವವರ ಮಾಹಿತಿ ಜೊತೆಗೆ ಗುಂಟೂರಿನ ವಿಶೇಷಣಗಳನ್ನು ಚಿತ್ರಿಸಲಾಗಿದೆ. ಗುಂಟೂರು ಹಾಡನ್ನು ಕೆಲವೇ ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

Recommended Video

ನನ್ನ ವಯಕ್ತಿಕ ಜೀವನದಲ್ಲಿ ನಡೆದ ಕಥೆ ಇದು | NodidavaruEnantare? | Filmibeat Kannada
ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ

ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ

ಮಿಡ್ಲ್‌ ಕ್ಲಾಸ್ ಮೆಲೋಡಿಸ್ ಸಿನಿಮಾವು ಅಮೆಜಾನ್ ಪ್ರೈಂ ನಲ್ಲಿ ನವೆಂಬರ್ 20 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾಕ್ಕೆ ಮುನ್ನಾ ಆನಂದ್ ದೇವರಕೊಂಡ ನಟಿಸಿದ್ದ 'ದೊರಸಾನಿ' ಸಿನಿಮಾವು ಕಳೆದ ವರ್ಷ ಬಿಡುಗಡೆ ಆಗಿ ಸಾಧಾರಣ ಯಶಸ್ಸು ಕಂಡಿತ್ತು.

More from Filmibeat

English summary
Vijay Devarkonda's brother Anand Devarkonda's second movie 'Middle class melodies' will release on Amazon prime.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X