ನನಸಾಯ್ತು ವಿಜಯ್ ದೇವರಕೊಂಡ ಮತ್ತೊಂದು ಕನಸು: ಭಾವುಕರಾದ ನಟ

By ಫಿಲ್ಮಿಬೀಟ್ ಡೆಸ್ಕ್

ನಟ ವಿಜಯ್ ದೇವರಕೊಂಡ ಪ್ರಸ್ತುತ ಸೂಪರ್ ಸ್ಟಾರ್ ನಟ. ಸಣ್ಣ ಪಾತ್ರಗಳಿಂದ ನಟನೆ ಆರಂಭಿಸಿದ ವಿಜಯ್ ದೇವರಕೊಂಡ ಇಂದು ಸ್ಟಾರ್ ನಟನಾಗಿ ಬೆಳೆದಿದ್ದಾರೆ.

ನಟನಾಗುವ ಕನಸು ಕಂಡಿದ್ದ ವಿಜಯ್ ದೇವರಕೊಂಡ ಕನಸನ್ನು ನನಸು ಮಾಡಿಕೊಳ್ಳಲು ಬಹಳ ಕಷ್ಟಪಟ್ಟಿದ್ದರು. ಅಂತೆಯೇ ಇದೀಗ ಎರಡನೇ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.

ತಮ್ಮ ಎರಡನೇ ಕನಸು ನನಸಾದ ಬಗ್ಗೆ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿರುವ ವಿಜಯ್ ದೇವರಕೊಂಡ ಭಾವುಕರಾಗಿದ್ದಾರೆ. ವಿಜಯ್ ದೇವರಕೊಂಡ ಈಗ ಮಲ್ಟಿಫ್ಲೆಕ್ಸ್ ಥಿಯೇಟರ್‌ನ ಮಾಲೀಕರು. ಈ ವಿಷಯವನ್ನು ಬಹು ಹೆಮ್ಮೆಯಿಂದ ಹೇಳಿದ್ದಾರೆ.

ತಮ್ಮ ತಂದೆ-ತಾಯಿಯ ಸ್ವಂತ ಊರು ಮೆಹಬೂಬ್‌ನಗರದಲ್ಲಿ 'ಎವಿಡಿ' (ಏಷಿಯನ್ ವಿಜಯ್ ದೇವರಕೊಂಡ) ಹೆಸರಿನ ಐಶಾರಾಮಿ ಥಿಯೇಟರ್ ಮಲ್ಟಿಫ್ಲೆಕ್ಸ್ ಅನ್ನು ವಿಜಯ್ ದೇವರಕೊಂಡ ಪ್ರಾರಂಭ ಮಾಡಿದ್ದಾರೆ. ಥಿಯೇಟರ್ ಒಂದನ್ನು ಕಟ್ಟುವ ಬಗ್ಗೆ ಕಂಡಿದ್ದ ನನಸಾಗಿದೆ ಎಂದು ವಿಜಯ್ ಹೇಳಿದ್ದಾರೆ.

ಗುಣಮಟ್ಟದ ತಂತ್ರಜ್ಞಾನ ಬಳಸಿದ್ದೇವೆ: ವಿಜಯ್

ಗುಣಮಟ್ಟದ ತಂತ್ರಜ್ಞಾನ ಬಳಸಿದ್ದೇವೆ: ವಿಜಯ್

ಮೆಹಬೂಬನಗರ ಪ್ರಜೆಗಳು ನಿಮ್ಮ ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಹಬ್ಬಗಳಿಗೆ, ರಜೆಗಳಿಗೆ ಹೊರಗೆ ಹೋಗಬೇಕೆಂದುಕೊಂಡಾಗ ದಯವಿಟ್ಟು ಎವಿಡಿಗೆ ಭೇಟಿ ನೀಡಿ. ನಿಮಗೆ, ನಿಮ್ಮ ಕುಟುಂಬಕ್ಕೆ ಒಂದು ಅತ್ಯುತ್ತಮ ಮಲ್ಟಿಫ್ಲೆಕ್ಸ್ ಅನುಭವವನ್ನು ನೀಡುವ ದೃಷ್ಟಿಯಿಂದ ಎವಿಡಿಯನ್ನು ಪ್ರಾರಂಭಿಸಿದ್ದೇವೆ. ಅಂತರಾಷ್ಟ್ರೀಯ ಗುಣಮಟ್ಟದ ತಂತ್ರಜ್ಞಾನದಿಂದ ನಾವು ಎವಿಡಿಯನ್ನು ನಿರ್ಮಿಸಿದ್ದೇವೆ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.

ಮೊದಲ ಸಿನಿಮಾ 'ಲವ್‌ ಸ್ಟೋರಿ'

ಮೊದಲ ಸಿನಿಮಾ 'ಲವ್‌ ಸ್ಟೋರಿ'

ಸೆಪ್ಟೆಂಬರ್ 24ರಂದು ಮಲ್ಟಿಫ್ಲೆಕ್ಸ್ ಉದ್ಘಾಟನೆಯಾಗುತ್ತಿದೆ. ಆ ದಿನ ನಾಗ ಚೈತನ್ಯ, ಸಾಯಿ ಪಲ್ಲವಿ ನಟಿಸಿರುವ 'ಲವ್‌ ಸ್ಟೋರಿ' ಸಿನಿಮಾವು ಎವಿಡಿಯಲ್ಲಿ ಬಿಡುಗಡೆ ಆಗಲಿದೆ. ''ಶೇಖರ್ ಕಮ್ಮುಲ ಸಿನಿಮಾ ಮೂಲಕವೇ ಒಂದು ರೀತಿ ನನ್ನ ನಟನಾ ಕೆರಿಯರ್ ಪ್ರಾರಂಭವಾಯ್ತು. ಈಗ ಅವರ ನಿರ್ದೇಶನದ ಸಿನಿಮಾ ನನ್ನ ಮಲ್ಟಿಫ್ಲೆಕ್ಸ್‌ನಲ್ಲಿ ಮೊದಲ ಸಿನಿಮಾ ಆಗಿ ಪ್ರದರ್ಶನ ಕಾಣುತ್ತಿರುವುದು ನನಗೆ ಬಹಳ ಹೆಮ್ಮೆ ತಂದಿದೆ'' ಎಂದಿದ್ದಾರೆ ವಿಜಯ್.

'ಲೈಗರ್' ಚಿತ್ರೀಕರಣಕ್ಕಾಗಿ ಗೋವಾದಲ್ಲಿದ್ದೇನೆ: ವಿಜಯ್

'ಲೈಗರ್' ಚಿತ್ರೀಕರಣಕ್ಕಾಗಿ ಗೋವಾದಲ್ಲಿದ್ದೇನೆ: ವಿಜಯ್

''ನಾನು ಆ ದಿನ ಮೆಹಬೂಬ್‌ ನಗರದಲ್ಲಿ ಇದ್ದು ಎಲ್ಲವನ್ನೂ ಖುಷಿಯಿಂದ ಆನಂದಿಸಬೇಕು ಎಂದುಕೊಂಡಿದ್ದೆ. ಆದರೆ 'ಲೈಗರ್' ಸಿನಿಮಾದ ಚಿತ್ರೀಕರಣಕ್ಕಾಗಿ ಗೋವಾದಲ್ಲಿ ಇರುವ ಕಾರಣ ನಾನು ಅಂದು ಬರಲಾಗುತ್ತಿಲ್ಲ. ಸಿನಿಮಾಗಳಿಂದಲೇ ನನಗೆ ಎಲ್ಲವೂ ಸಿಕ್ಕಿದೆ. ಹಾಗಾಗಿ ಈಗಲೂ ಸಿನಿಮಾವೇ ನನ್ನ ಮೊದಲ ಆದ್ಯತೆ ಆಗಿರಬೇಕೆಂಬ ಕಾರಣದಿಂದ 'ಲೈಗರ್' ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವುದೇ ನನ್ನ ಪ್ರಥಮ ಆದ್ಯತೆ ಮಾಡಿಕೊಂಡಿದ್ದೇನೆ. ಆದರೆ ನೀವೆಲ್ಲರೂ ಎವಿಡಿಗೆ ಭೇಟಿ ನೀಡಿ ಸಿನಿಮಾದ ಆನಂದವನ್ನು ಅನುಭವಿಸಿ'' ಎಂದಿದ್ದಾರೆ ವಿಜಯ್ ದೇವರಕೊಂಡ.

ಹಲವು ಬ್ರ್ಯಾಂಡ್‌ಗಳಲ್ಲಿ ಬಂಡವಾಳ ತೊಡಗಿಸಿದ್ದಾರೆ

ಹಲವು ಬ್ರ್ಯಾಂಡ್‌ಗಳಲ್ಲಿ ಬಂಡವಾಳ ತೊಡಗಿಸಿದ್ದಾರೆ

ವಿಜಯ್ ದೇವರಕೊಂಡ ಮಲ್ಟಿಫ್ಲೆಕ್ಸ್ ಮಾತ್ರವೇ ಅಲ್ಲದೆ ಫ್ಯಾಷನ್ ಬ್ರ್ಯಾಂಡ್ ಒಂದನ್ನು ಸಹ ಹೊಂದಿದ್ದಾರೆ. 'ರೌಡಿ ವೇರ್' ಹೆಸರಿನ ಫ್ಯಾಷನ್‌ ಬ್ರ್ಯಾಂಡ್‌ನ ಮಾಲೀಕರು ವಿಜಯ್ ದೇವರಕೊಂಡ, ಜೊತೆಗೆ ಇನ್ನೂ ಕೆಲವು ಸ್ಟಾರ್ಟ್‌ಅಪ್‌ಗಳನ್ನು ದೇವರಕೊಂಡ ಬಂಡವಾಳ ತೊಡಗಿಸಿದ್ದಾರೆ. ಹೈದರಾಬಾದ್ ಮೂಲದ ಸೋಲಾರ್ ಬೈಕ್‌ ಸರ್ವೀಸ್‌ ಸ್ಟಾರ್ಟ್‌ಅಪ್‌ ಒಂದಕ್ಕೆ ವಿಜಯ್ ದೇವರಕೊಂಡ ಬಂಡವಾಳ ತೊಡಗಿಸಿದ್ದಾರೆ.

'ಲೈಗರ್' ಸಿನಿಮಾದಲ್ಲಿ ತೊಡಗಿಸಿಕೊಂಡ ವಿಜಯ್

'ಲೈಗರ್' ಸಿನಿಮಾದಲ್ಲಿ ತೊಡಗಿಸಿಕೊಂಡ ವಿಜಯ್

ವಿಜಯ್ ಪ್ರಸ್ತುತ 'ಲೈಗರ್' ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದು, ಈ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಅನನ್ಯಾ ಪಾಂಡೆ ಈ ಸಿನಿಮಾದ ನಾಯಕಿ, ಚಾರ್ಮಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಸುಕುಮಾರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ದೇವರಕೊಂಡ ನಾಯಕರಾಗಿ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಅಲ್ಲು ಅರ್ಜುನ್ ಬಂಡವಾಳ ಹೂಡಲಿದ್ದಾರೆ. ಅದರ ಹೊರತಾಗಿ ಆನಂದ್ ಅನ್ನಮಲೈ ನಿರ್ದೇಶನದ 'ಹೀರೊ' ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆ. ಶಿವನಾರಾಯಣ್ ನಿರ್ದೇಶನದ ಸಿನಿಮಾದಲ್ಲಿಯೂ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ.

More from Filmibeat

English summary
Actor Vijay Devarkonda started his own theater multiplex in Mahbubnagar named AVD. 'Love Story' movie releasing as first movie on September 24 on AVD movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X