Vijay Deverakonda: ಆ ನಟಿ ತನ್ನ ಕ್ರಶ್ ಎಂದ ವಿಜಯ್ ದೇವರಕೊಂಡ; ರಶ್ಮಿಕಾ ಅಲ್ಲ ಬಿಡಿ!

ನಟ ವಿಜಯ್ ದೇವರಕೊಂಡ.. ಯಾವುದೇ ಬೆಂಬಲವಿಲ್ಲದೇ, ಸಿನಿಮಾ ಬ್ಯಾಕ್‌ಗ್ರೌಂಡ್ ಇಲ್ಲದ ಕುಟುಂಬದಿಂದ ಮೇಲೆ ಬೆಳೆದು ಬಂದ ಪ್ರತಿಭಾವಂತ ನಟ. ವಿಜಯ್ ದೇವರಕೊಂಡ ಇತರೆ ನಟರ ಹಾಗೆ ತಾನು ಬೆಳೆದು ಬಂದ ಕಷ್ಟದ ದಿನಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡವರಲ್ಲ, ಬದಲಾಗಿ ತನ್ನ ಮನಸ್ಸಿನಲ್ಲಿ ಏನಿದೆಯೋ ಹಾಗೂ ತನಗೆ ಏನು ಹೇಳಬೇಕು ಎಂದು ತೋಚುತ್ತದೋ ಅದನ್ನು ಯಾವುದೇ ಮುಚ್ಚುಮರೆ ಇಲ್ಲದೇ ನೇರವಾಗಿ ಹೇಳಿಬಿಡುವ ಸ್ವಭಾವ ವಿಜಯ್ ಅವರದ್ದು.

ಇನ್ನು ಸಣ್ಣ ನಟನಿಂದ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ವಿಜಯ್ ದೇವರಕೊಂಡ ಆರಂಭದಿಂದಲೂ ಸಹ ತನಗನ್ನಿಸಿದ್ದನ್ನು ನೇರವಾಗಿ ಹೇಳುತ್ತಾ ಬಂದಿದ್ದು, ಈ ತಮ್ಮ ನೇರ ನುಡಿಗೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಹಾಗೂ ವಿರೋಧಿಗಳನ್ನು ಸಹ ಕಟ್ಟಿಕೊಂಡಿದ್ದಾರೆ. ಹೀಗಾಗಿ ವಿಜಯ್ ದೇವರಕೊಂಡ ಏನಾದರೂ ಹೇಳಿಕೆ ನೀಡಿದ್ರೆ ಈ ಹಿಂದಿನಿಂದಲೂ ಭಿನ್ನ, ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇರುತ್ತವೆ.

Vijay Deverakonda: Actor revealed that his crush is Samantha Ruth Prabhu

ಸದ್ಯ ಸಾಲು ಸಾಲು ಚಿತ್ರಗಳ ಹೀನಾಯ ಸೋಲಿನಿಂದ ಹಿನ್ನಡೆ ಅನುಭವಿಸಿರುವ ವಿಜಯ್ ದೇವರಕೊಂಡ ಖುಷಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಿನ್ನು ಕೋರಿ, ಮಜಿಲಿ ಹಾಗೂ ಟಕ್ ಜಗದೀಶ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಶಿವ ನಿರ್ವಾಣ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಸಮಂತಾ ರುತ್ ಪ್ರಭು ನಟಿಸಿದ್ದು, ಈಗಾಗಲೇ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಚಿತ್ರದ ಬಿಡುಗಡೆ ದಿನಾಂಕ ಸಹ ಸಮೀಪಿಸುತ್ತಿದ್ದು, ಚಿತ್ರತಂಡ ಪ್ರಚಾರದ ಕಾರ್ಯಗಳನ್ನೂ ಸಹ ಆರಂಭಿಸಿಕೊಂಡಿದೆ. ಇನ್ನು ಚಿತ್ರದ ನಟಿ ಸಮಂತಾ ಆರೋಗ್ಯ ಸಂಬಂಧಿಸಿದ ಕಾರಣಗಳಿಂದ ವಿದೇಶಕ್ಕೆ ಚಿಕಿತ್ಸೆಗೆಂದು ತೆರಳಿದ್ದು, ವಿಜಯ್ ದೇವರಕೊಂಡ ಮಾತ್ರ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಹೀಗೆ ಭಾಗವಹಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿಜಯ್ ದೇವರಕೊಂಡಗೆ ನಿಮ್ಮ ಕ್ರಶ್ ಯಾರು ಎಂಬ ಪ್ರಶ್ನೆ ಎದುರಾಗಿದೆ.

ಈ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ ನಟಿ ಸಮಂತಾ ರುತ್ ಪ್ರಭು ತನ್ನ ಕ್ರಶ್ ಎಂದು ಹೇಳಿಕೆ ನೀಡಿದ್ದಾರೆ. ಇಷ್ಟು ದಿನಗಳ ಕಾಲ ನಟಿ ರಶ್ಮಿಕಾ ಜತೆ ಡಿನ್ನರ್, ಟೂರ್ ಎಂದು ಸುತ್ತಾಡುತ್ತಿದ್ದ ವಿಜಯ್ ದೇವರಕೊಂಡ ರಶ್ಮಿಕಾ ಜತೆ ಪ್ರೀತಿಯಲ್ಲಿ ಬಿದ್ದಿರಬೇಕು ಎಂದು ಮಾತನಾಡಿಕೊಳ್ಳುತ್ತಿದ್ದರು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಎಷ್ಟೇ ಬಾರಿ ತಾವಿಬ್ಬರೂ ಕೇವಲ ಸ್ನೇಹಿತರಷ್ಟೇ ಎಂದು ಹೇಳಿದರೂ ಸಹ ಇಬ್ಬರ ನಡುವೆ ಸಮ್‌ಥಿಂಗ್ ಇದೆ ಎಂದು ಸಿನಿ ಪ್ರೇಮಿಗಳು ಅನುಮಾನ ವ್ಯಕ್ತಪಡಿಸಿದ್ದರು.

ಹೀಗಾಗಿ ಇದೀಗ ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಹೆಸರನ್ನು ಬಿಟ್ಟು ಬೇರೊಬ್ಬ ನಟಿ ಹೆಸರನ್ನು ತೆಗೆದುಕೊಂಡಿರುವುದು ವಿಜಯ್ ಹಾಗೂ ರಶ್ಮಿಕಾ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ ಹಾಗೂ ಟಾಲಿವುಡ್‌ನಲ್ಲಿ ಹೊಸ ಲವ್ ಸ್ಟೋರಿಯನ್ನು ಹುಟ್ಟುಹಾಕಿದಂತಿದೆ.

More from Filmibeat

English summary
Vijay Deverakonda: Actor revealed that his crush is Samantha Ruth Prabhu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X