For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ 'ಲೈಗರ್' ತಂಡ: ಅಪ್ಪು ಆಶೀರ್ವಾದ ಪಡೆದ ವಿಜಯ್ ದೇವರಕೊಂಡ!

  |

  ಪ್ಯಾನ್ ಸಿನಿಮಾಗಳ ಸಾಲಿನಲ್ಲಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿರುವ ಮತ್ತೊಂದು ಸಿನಿಮಾ ಎಂದರೆ ಅದು 'ಲೈಗರ್'. ವಿಜಯ್ ದೇವರಕೊಂಡ ಅಭಿನಯದ 'ಲೈಗರ್' ಸಿನಿಮಾ ತೆರೆಗೆ ಬರಲಿರುವ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ.

  ಸಿನಿಮಾ ರಿಲೀಸ್ ದಿನಾಂಕ ಹತ್ತಿರ ಆಗುತ್ತಿದ್ದ ಹಾಗೆ, ಸಿನಿಮಾದ ಪ್ರಚಾರವನ್ನು ಸಿನಿಮಾ ತಂಡ ದೊಡ್ಡ ಮಟ್ಟದಲ್ಲಿ ಮಾಡುತ್ತಿದೆ. ಪ್ರಚಾರದ ಭಾಗವಾಗಿ ವಿಜಯ್ ದೇವರಕೊಂಡ, ಅನನ್ಯಾ ಪಾಂಡೆ ಮತ್ತು ಇಡೀ ಚಿತ್ರತಂಡ ಭಾರತದಾದ್ಯಂತ ಸುತ್ತಿದೆ.

  'ಲೈಗರ್'ಗೆ ಸೆನ್ಸಾರ್ ಬೋರ್ಡ್‌ನಿಂದ ಆಕ್ಷೇಪಣೆ!'ಲೈಗರ್'ಗೆ ಸೆನ್ಸಾರ್ ಬೋರ್ಡ್‌ನಿಂದ ಆಕ್ಷೇಪಣೆ!

  'ಲೈಗರ್' ಸಿನಿಮಾ ತಂಡ ಸದ್ಯ ಪ್ರಚಾರ ಕಾರ್ಯದಲ್ಲಿ ಮುಳುಗಿದೆ. ಭಾರತದಾದ್ಯಂತ ಸುತ್ತಿ ಹಲವೆಡೆ ಸಿನಿಮಾ ಪ್ರಚಾರವನ್ನು ಕೈಗೊಂಡಿದೆ. ಇದೇ ಸಲುವಾಗಿ ವಿಜಯ್ ಮನೆಯಲ್ಲಿ ಅವರ ತಾಯಿ ವಿಶೇಷ ಪೂಜೆ ಮಾಡಿಸಿದ್ದರು. ಹೈದರಾಬಾದ್‌ನಲ್ಲಿ ಸಿನಿಮಾ ಪ್ರಚಾರ ಮುಗಿಸಿದ 'ಲೈಗರ್' ತಂಡ, ಕರ್ನಾಟಕಕ್ಕೆ ಬಂದಿದೆ. ನಂತರ ಕೊಚ್ಚಿ, ತಮಿಳುನಾಡು, ಮುಂಬೈ, ದೆಹಲಿ ಸೇರಿದಂತೆ ಹಲವೆಡೆ ಸಿನಿಮಾ ತಂಡ ಪ್ರವಾಸ ಮಾಡಲಿದೆ.

  ಬೆಂಗಳೂರಿನಲ್ಲಿ 'ಲೈಗರ್' ತಂಡ!

  ಬೆಂಗಳೂರಿನಲ್ಲಿ 'ಲೈಗರ್' ತಂಡ!

  ಸದ್ಯಕ್ಕೆ ಎಲ್ಲೆಲ್ಲೂ ಲೈಗರ್ ಸಿನಿಮಾದ ಹವಾ ಜೋರಾಗುತ್ತಿದೆ. ದಿನದಿಂದ ದಿನಕ್ಕೆ 'ಲೈಗರ್' ಸಿನಿಮಾದ ಬಗ್ಗೆ ಇರುವ ನಿರೀಕ್ಷೆ ಪ್ರೇಕ್ಷಕರಲ್ಲಿ ಹೆಚ್ಚಾಗುತ್ತಿದೆ. ರಿಲೀಸ್ ದಿನಾಂಕ ಹತ್ತಿರವಿರುವ ಕಾರಣಕ್ಕೆ ಸಿನಿಮಾ ತಂಡ ಅಬ್ಬರದ ಪ್ರಚಾರವನ್ನು ಕೈಗೊಂಡಿದೆ. ಪ್ರಚಾರದ ಸಲುವಾಗಿ 'ಲೈಗರ್' ಚಿತ್ರತಂಡ ಬೆಂಗಳೂರಿಗೆ ಆಗಮಿಸಿದೆ. ಇಂದು (ಆಗಸ್ಟ್ 19)ರಂದು ಬೆಂಗಳೂರಿಗೆ ಬಂದಿಳಿದಿದೆ 'ಲೈಗರ್' ಸಿನಿಮಾ ತಂಡ. ಬೆಂಗಳೂರಿನಲ್ಲಿ ಪ್ರೀ- ರಿಲೀಸ್ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿದೆ. ಈಗಾಗಲೇ ಬೆಂಗಳೂರಿಗೆ ಅನನ್ಯಾ ಪಾಂಡೆ ವಿಜಯ್ ದೇವರಕೊಂಡ ಜೊತೆಗೆ ಲೈಗರ್ ತಂಡ ಬಂದಿದೆ.

  ಅಪ್ಪು ಸಮಾಧಿಗೆ 'ಲೈಗರ್' ಟೀಂ ಭೇಟಿ!

  ಅಪ್ಪು ಸಮಾಧಿಗೆ 'ಲೈಗರ್' ಟೀಂ ಭೇಟಿ!

  ಬೆಂಗಳೂರಿಗೆ ಬಂದ 'ಲೈಗರ್' ಸಿನಿಮಾ ತಂಡ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮೊದಲನೆಯದಾಗಿ ಈ ಚಿತ್ರತಂಡ ಡಾ.ಪುನೀತ್ ರಾಜಕುಮಾರ್ ಆಶೀರ್ವಾದವನ್ನು ಪಡೆಯಲು ಮುಂದಾಗಿದೆ. ಇದೇ ನಿಟ್ಟಿನಲ್ಲಿ 'ಲೈಗರ್' ಚಿತ್ರತಂಡ ಏರ್ಪೋಟ್‌ನಲ್ಲಿ ಇಳಿದ ಬಳಿಕ ಅಪ್ಪು ಸಮಾಧಿಗೆ ಭೇಟಿ ಕೊಟ್ಟಿದೆ. ಅಲ್ಲಿ ಪುನೀತ್ ರಾಜಕುಮಾರ್ ಮತ್ತು ರಾಜಕುಮಾರ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿ, ನಮಿಸಿ ಅಲ್ಲಿಂದ ತೆರಳಿದೆ. ಈ ಮೂಲಕ ಅಪ್ಪು ಆಶೀರ್ವಾದವನ್ನು ಪಡೆಕೊಂಡಿದೆ ಚಿತ್ರತಂಡ.

  ಬೆಂಗಳೂರಲ್ಲಿ 'ಲೈಗರ್' ಸುದ್ದಿಗೋಷ್ಠಿ!

  ಬೆಂಗಳೂರಲ್ಲಿ 'ಲೈಗರ್' ಸುದ್ದಿಗೋಷ್ಠಿ!

  'ಲೈಗರ್' ಸಿನಿಮಾ ಪ್ಯಾನ್ಇಂಡಿಯಾ ಸಿನಿಮಾ. ಹಾಗಾಗಿ ಕನ್ನಡದಲ್ಲೂ ಕೂಡ ಈ ಸಿನಿಮಾ ತೆರೆಗೆ ಬರುತ್ತಿದೆ. ಹಾಗಾಗಿ ಚಿತ್ರತಂಡ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ನಡೆಸುತ್ತಿದ್ದು, ಪ್ರೀ- ರಿಲೀಸ್ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ. ಆಗಸ್ಟ್ 19ರ ಸಂಜೆ ಮಲ್ಲೇಶ್ವರಂ, ಮಂತ್ರಿ ಮಾಲ್‌ನಲ್ಲಿ 'ಲೈಗರ್' ಪತ್ರಿಕಾಗೋಷ್ಠಿಯ ಬಳಿಕ ಪ್ರೀ- ರಿಲೀಸ್ ಕಾರ್ಯಕ್ರಮ ಜನರ ಸಮ್ಮುಖದಲ್ಲಿ ಮಾಡಲಾಗುತ್ತದೆ. ಈ ಹಿಂದೆ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ಕೂಡ ಕನ್ನಡದಲ್ಲಿ ತೆರೆಕಂಡಿದ್ದು. ಆಗ ರಶ್ಮಿಕಾ ಜೊತೆಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು ವಿಜಯ್ ದೇವರಕೊಂಡ.

  ಆಗಸ್ಟ್ 25ಕ್ಕೆ 'ಲೈಗರ್' ರಿಲೀಸ್!

  ಆಗಸ್ಟ್ 25ಕ್ಕೆ 'ಲೈಗರ್' ರಿಲೀಸ್!

  ಆಗಸ್ಟ್ 25ಕ್ಕೆ 'ಲೈಗರ್' ಸಿನಿಮಾ ವಿಶ್ವದಾದ್ಯಂತ ರಿಲೀಸಾಗುತ್ತಿದೆ. ಈ ಚಿತ್ರಕ್ಕೆ ಪುರಿ ಜಗನ್ನಾಥ್ ನಿರ್ದೇಶನವಿದ್ದು, ಚಾರ್ಮಿ ಕೌರ್ ಬಂಡವಾಳ ಹೂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟ್ರೈಲರ್ ಹಾಡು ಮತ್ತು ಟೀಸರ್ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಈ ಚಿತ್ರದ ಮೂಲಕ ಪ್ಯಾನ್‌ಇಂಡಿಯಾ ಸ್ಟಾರ್ ಆಗಿ ವಿಜಯ್ ದೇವರಕೊಂಡ ಹೇಗೆ ಮಿಂಚಲಿದ್ದಾರೆ ಎನ್ನುವುದನ್ನು ನೋಡಬೇಕಿದೆ.

  English summary
  Vijay Deverakonda, Ananya Pandey and Liger Team Visited Puneeth Rajkumar Memorial, Know More,
  Friday, August 19, 2022, 15:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X