ವಿಜಯ್ ದೇವರಕೊಂಡ ಮತ್ತು ಸುಕುಮಾರ್ ಸಿನಿಮಾ ವದಂತಿಗೆ ಸ್ಪಷ್ಟನೆ
ಟಾಲಿವುಡ್ ಸ್ಟಾರ್ ನಿರ್ದೇಶಕ ಸುಕುಮಾರ್ ಮತ್ತು 'ಅರ್ಜುನ್ ರೆಡ್ಡಿ' ಖ್ಯಾತಿಯ ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಸಿನಿಮಾವೊಂದು ಬರಲಿದೆ. ಬಹಳ ಹಿಂದೆಯೇ ಈ ಪ್ರಾಜೆಕ್ಟ್ ಘೋಷಣೆಯಾಗಿತ್ತು. ಆದ್ರೀಗ, ದೇವರಕೊಂಡ ಮತ್ತು ಸುಕುಮಾರ್ ಸಿನಿಮಾ ನಿಂತು ಹೋಗಿದೆ ಎಂಬ ಸುದ್ದಿ ವರದಿಯಾಗಿದೆ.
ಕಾರಣಾಂತರಗಳಿಂದ ದೇವರಕೊಂಡ-ಸುಕುಮಾರ್ ಸಿನಿಮಾ ನಿಂತಿದೆ. ವಿಜಯ್ ದೇವರಕೊಂಡ ಬದಲು ಬೇರೊಬ್ಬ ನಟನ ಜೊತೆ ಸುಕುಮಾರ್ ಸಿನಿಮಾ ಮುಂದುವರಿಸಲಿದ್ದಾರೆ ಎಂದು ಹೇಳಲಾಗಿತ್ತು. ಇದು ಸುಳ್ಳು ಎಂದು ನಿರ್ಮಾಣ ಸಂಸ್ಥೆ ಸ್ಪಷ್ಟಪಡಿಸಿದೆ.
ನಿರ್ಮಾಪಕ ಕೇದಾರ ಸೆಲಗಂಸೆಟ್ಟಿ ಈ ಕುರಿತು ಪ್ರಕಟಣೆ ನೀಡಿದ್ದು, ''ನಿರ್ಧರಿಸಿರುವಂತೆ ದೇವರಕೊಂಡ-ಸುಕುಮಾರ್ ಸಿನಿಮಾ ಆರಂಭವಾಗಲಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ. ಬಹಳ ದೊಡ್ಡ ಮಟ್ಟದಲ್ಲಿ ಈ ಪ್ರಾಜೆಕ್ಟ್ ಬರಲಿದೆ'' ಎಂದು ತಿಳಿಸಿದ್ದಾರೆ.

ವಿಜಯ್ ದೇವರಕೊಂಡ ಬದಲು ಮೆಗಾಸ್ಟಾರ್ ಪುತ್ರ ರಾಮ್ ಚರಣ್ ತೇಜ್ ಅವರ ಜೊತೆ ಸುಕುಮಾರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಚರ್ಚೆಯಲ್ಲಿದ್ದವು. ಇದೀಗ, ಈ ಎಲ್ಲಾ ಅಂತೆಕಂತೆಗಳಿಗೆ ತೆರೆ ಎಳೆಯಲಾಗಿದೆ.
ಪ್ರಸ್ತುತ, ಸುಕುಮಾರ್ ಅವರು ಅಲ್ಲು ಅರ್ಜುನ್ ಜೊತೆ 'ಪುಷ್ಪ' ಸಿನಿಮಾ ಮಾಡ್ತಿದ್ದಾರೆ. ಶೂಟಿಂಗ್ ಸಂಪೂರ್ಣವಾಗಿ ಮುಗಿದಿದ್ದು, ಆಗಸ್ಟ್ ತಿಂಗಳಲ್ಲಿ ಬರುವುದಾಗಿ ಘೋಷಿಸಿಕೊಂಡಿದೆ. ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ.
ಮತ್ತೊಂದೆಡೆ ಪೂರಿ ಜಗನ್ನಾಥ್ ಜೊತೆ ವಿಜಯ್ ದೇವರಕೊಂಡ 'Liger' ಎಂಬ ಸಿನಿಮಾ ಮಾಡ್ತಿದ್ದಾರೆ. ಬಾಲಿವುಡ್ ನಟಿ ಅನನ್ಯ ಪಾಂಡೆ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.


Click it and Unblock the Notifications











