ವಿರೋಷ್ ಕಲ್ಯಾಣ; ನನಗೆ ಅದ್ಭುತ ವ್ಯಕ್ತಿ ಅತ್ತಿಗೆಯಾಗಿ ಸಿಕ್ಕಿದ್ದಾರೆ, ವಿಜಯ್ ದೇವರಕೊಂಡ ಸಹೋದರನ ಮಾತು
ಬಹಳ ಅದ್ಧೂರಿಯಾಗಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ನಡೆದಿದೆ. ಕೆಲವೇ ಆಪ್ತರ ಸಮ್ಮುಖಲದಲ್ಲಿ ಕನಸಿನಂತೆ ಜೋಡಿ ಹಸೆಮಣೆ ಏರಿದೆ. ರಾಜ ರಾಣಿಯಂತೆ ಮದುವೆ ಮಂಟಪದಲ್ಲಿ ಜೋಡಿ ಕಂಗೊಳಿಸಿದೆ. ಮದುವೆ ಸಂಭ್ರಮದ ಫೋಟೊಗಳನ್ನು ರಶ್ಮಿಕಾ, ವಿಜಯ್ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ರಶ್ಮಿಕಾ ಹಾಗೂ ವಿಜಯ್ ಮದುವೆ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಇಬ್ಬರ ಪೋಸ್ಟ್‌ಗೆ ಲಕ್ಷ ಲಕ್ಷ ಲೈಕ್ಸ್, ಕಾಮೆಂಟ್ಸ್ ಸಿಕ್ತಿದೆ. ಅಭಿಮಾನಿಗಳು ಜೋಡಿಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಮದುವೆ ಮನೆಯಿಂದ ಒಂದೇ ಒಂದು ಫೋಟೊ, ವಿಡಿಯೋ ಹೊರಗಡೆ ಬರದಂತೆ ನೋಡಿಕೊಂಡಿದ್ದರು. ಅಂತಿಮವಾಗಿ ತಾವೇ ಸುಂದರಕ್ಷಣಗಳನ್ನು ಹಂಚಿಕೊಂಡಿದ್ದಾರೆ. ವಿರೋಷ್ ಕಲ್ಯಾಣದ ಬಗ್ಗೆ ಆನಂದ್ ದೇವರಕೊಂಡ ಪೋಸ್ಟ್ ಮಾಡಿದ್ದಾರೆ.

ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ಕೂಡ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಆನಂದ್ ಸಿನಿಮಾಗಳಿಗೆ ರಶ್ಮಿಕಾ ಬೆಂಬಲವಾಗಿ ನಿಲ್ಲುತ್ತಿದ್ದರು. ಆಗ ಸ್ನೇಹಿತನ ಸಹೋದರನ ಸಿನಿಮಾ ಹಾಗಾಗಿ ಪ್ರಚಾರಕ್ಕೆ ಹೋಗುತ್ತಿದ್ದಾರೆ ಎಂದು ಸುದ್ದಿ ಆಗುತ್ತಿತ್ತು. ಆನಂದ್ ಮಾತ್ರವಲ್ಲ ಅವರ ಪೋಷಕರ ಜೊತೆಗೂ ರಶ್ಮಿಕಾ ಮೊದಲಿನಿಂದಲೂ ಆತ್ಮೀಯ ಒಡನಾಡ ಇಟ್ಟುಕೊಂಡಿದ್ದರು. ಈ ಹಿಂದೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ರಶ್ಮಿಕಾ "ನಾನು ನಿಮ್ಮ ಫ್ಯಾಮಿಲಿ ಕಣೋ" ಎಂದು ಆನಂದ್‌ಗೆ ಹೇಳಿದ್ದರು. ವಿಜಯ್, ರಶ್ಮಿಕಾ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಆಗ ಬಹಳ ಚರ್ಚೆ ಆಗಿತ್ತು. ಈಗ ಅದು ನಿಜವಾಗಿದೆ.
ಅಭಿಮಾನಿಗಳು "ಅತ್ತಿಗೆ, ಹೇಗಿದ್ದೀರಾ?" ಎಂದು ಕೂಗುತ್ತಿದ್ದ ಹಲವು ಸಂದರ್ಭಗಳಿದ್ದವು.. ಆಗ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿರಲಿಲ್ಲ ಎಂದು ನನಗೆ ತಿಳಿದಿರಲಿಲ್ಲ. ಇಂದು, ನನ್ನ ಸಹೋದರ ಮದುವೆಯಾಗಿದ್ದಾನೆ. ನಾನು ನನ್ನ ಅತ್ತಿಗೆಯಂತಹ ಅತ್ಯಂತ ಸಕಾರಾತ್ಮಕ ಮತ್ತು ಸಹಾನುಭೂತಿಯ ವ್ಯಕ್ತಿಯನ್ನು ಪಡೆದುಕೊಂಡಿದ್ದೇನೆ. ಅವರ ಜೀವನದುದ್ದಕ್ಕೂ, ಅವರು ಹೀಗೆಯೇ ನಗುತ್ತಲೇ ಇರಬೇಕೆಂದು ನಾನು ಪ್ರಾರ್ಥಿಸುತ್ತೇನೆ. ಇಬ್ಬರೂ ಒಟ್ಟಿಗೆ ಜೀವಮಾನವಿಡೀ" ಎಂದು ಆನಂದ್ ದೇವರಕೊಂಡ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೇಘನಾ ರಾಜ್ ಸೇರಿದಂತೆ ಹಲವರು ಆನಂದ್ ದೇವರಕೊಂಡ ಪೋಸ್ಟ್ ಲೈಕ್ ಮಾಡಿದ್ದಾರೆ. ರಶ್ಮಿಕಾ, ವಿಜಯ್ ಪೋಸ್ಟ್ ಮಾತ್ರವಲ್ಲ ಆನಂದ್ ಪೋಸ್ಟ್‌ಗೆ ಕೂಡ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಲಕ್ಷ ಲಕ್ಷ ಲೈಕ್ಸ್ ಗಳಿಸುತ್ತಿದೆ.
'ದೊರಸಾನಿ' ಎಂಬ ಸಿನಿಮಾ ಮೂಲಕ ಆನಂದ್ ದೇವರಕೊಂಡ ಚಿತ್ರರಂಗ ಪ್ರವೇಶಿಸಿದ್ದರು. 'ಮಿಡ್ಲ್ ಕ್ಲಾಸ್ ಮೆಲೋಡಿಸ್', 'ಪುಷ್ಪಕ ವಿಮಾನಂ', 'ಬೇಬಿ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ದೊಡ್ಡಮಟ್ಟದ ಬ್ರೇಕ್ ಮಾತ್ರ ಸಿಕ್ಕಿರಲಿಲ್ಲ. ಆನಂದ್ ನಟಿಸಿದ 'ಗಂ ಗಂ ಗಣೇಶ' ಎಂಬ ಚಿತ್ರದ ಪ್ರೀ ರಿಲೀಸ್ ಈವೆಂಟ್‌ಗೆ ರಶ್ಮಿಕಾ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಆನಂದ್ ಕೇಳಿದ ಪ್ರಶ್ನೆಗೆ ರಶ್ಮಿಕಾ ಉತ್ತರಿಸಲು ತಡಬಡಾಯಿಸುವಂತಾಯಿತು.
ನೀವು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದೀರಾ, ನಿಮ್ಮ ಫೇವರಿಟ್ ಸಹನಟ ಯಾರು ಎಂದು ಆನಂದ್ ದೇವರಕೊಂಡ ಕೇಳಿದ್ದರು. ಅದಕ್ಕೆ ರಶ್ಮಿಕಾ ಉತ್ತರಿಸಿ "ಆನಂದ್ ನೀನು ನಮ್ಮ ಫ್ಯಾಮಿಲಿ ಕಣೋ. ಯಾಕೋ ಈ ರೀತಿ ಸಿಕ್ಕಿ ಹಾಕಿಕೊಳ್ಳುವಂತೆ ಮಾಡ್ತೀಯಾ ಎಂದಿದ್ದರು. ಅಭಿಮಾನಿಗಳೆಲ್ಲಾ ರೌಡಿ.. ರೌಡಿ(ವಿಜಯ್ ದೇವರಕೊಂಡ) ಎಂದು ಕೂಗಿದ್ದರು. ಸರಿ ಹೇಳ್ತೀನಿ.. ರೌಡಿಬಾಯ್(ವಿಜಯ್ ದೇವರಕೊಂಡ) ಎಂದು ಹೇಳಿದ್ದು ವೈರಲ್ ಆಗಿತ್ತು.
ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ವಿಜಯ್ ಹಾಗೂ ರಶ್ಮಿಕಾ ಮದುವೆ ಅರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಸೇರಿದಂ ಸಾಕಷ್ಟು ಜನರಿಗೆ ಆಮಂತ್ರಣ ನೀಡಿದ್ದಾರೆ. ಕನ್ನಡ ಸಿನಿಮಾ ತಾರೆಯರು ಕೂಡ ಈ ಸಂಭ್ರಮದಲ್ಲಿ ಭಾಗಿ ಆಗುವ ಸಾಧ್ಯತೆಯಿದೆ.


Click it and Unblock the Notifications











