ಅಂದು ರಕ್ಷಿತ್, ರಶ್ಮಿಕಾ ವಯಸ್ಸಿನ ಅಂತರದ ಬಗ್ಗೆ ಟ್ರೋಲ್; ಈಗ ವಿಜಯ್- ರಶ್ಮಿಕಾ ವಯಸ್ಸಿನ ಅಂತರದ ಬಗ್ಗೆ ಚರ್ಚೆ

By ಫಿಲ್ಮಿಬೀಟ್ ಡೆಸ್ಕ್

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ನಟಿ ರಶ್ಮಿಕಾ ಮಂದಣ್ಣ ಕಲ್ಯಾಣೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಗುರುವಾರ(ಫೆಬ್ರವರಿ 26) ಉದಯ್‌ಪುರದಲ್ಲಿ ಜೋಡಿ ಹಸೆಮಣೆ ಏರಲಿದೆ. 'ಗೀತಾಗೋವಿಂದಂ' ಸಿನಿಮಾ ಸಮಯದಲ್ಲಿ ಸ್ನೇಹಿತರಾಗಿದ್ದ ವಿಜಯ್, ರಶ್ಮಿಕಾ ಬಳಿಕ ಪ್ರೀತಿಸಿ ಇದೀಗ ಪೋಷಕರ ಒಪ್ಪಿಗೆ ಪಡೆದು ಅದ್ಧೂರಿಯಾಗಿ ಹಸೆಮಣೆ ಏರುತ್ತಿದ್ದಾರೆ.

ಇಷ್ಟು ದಿನ ಮದುವೆ ಬಗ್ಗೆ ಮೌನ ವಹಿಸಿದ್ದ ಜೋಡಿ ಅಂತೂ ಇಂತೂ ವಿಷಯವನ್ನು ಖಚಿತಪಡಿಸಿ ಪೋಸ್ಟ್ ಮಾಡಿದೆ. 3 ದಿನ ಮುನ್ನ ಇಬ್ಬರೂ ಮದುವೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ನಮ್ಮ ಪ್ರೀತಿಪಾತ್ರರೇ, ನಾವು ಯಾವುದೇ ಯೋಜನೆಗಳನ್ನು ರೂಪಿಸುವ ಮೊದಲು, ನಮಗಾಗಿ ಏನನ್ನಾದರೂ ಆಯ್ಕೆ ಮಾಡುವ ನೀವು ಅಲ್ಲಿದ್ದೀರಿ. ತುಂಬಾ ಪ್ರೀತಿಯಿಂದ, ನೀವು ನಮಗೆ ಒಂದು ಹೆಸರನ್ನು ಕೊಟ್ಟಿದ್ದೀರ. ನೀವು ನಮ್ಮನ್ನು 'ವಿರೋಶ್' ಎಂದು ಕರೆದಿದ್ದೀರಾ. ನಿಮ್ಮ ಗೌರವಾರ್ಥವಾಗಿ ನಮ್ಮ ಮದುವೆಗೆ 'ದಿ ವೆಡ್ಡಿಂಗ್ ಆಫ್ ವಿರೋಷ್' ಹೆಸರಿಡುತ್ತಿದ್ದೇವೆ" ಎಂದು ಪೋಸ್ಟ್ ಮಾಡಿದ್ದಾರೆ.

Vijay Deverakonda and Rashmika Mandanna to Tie the Knot in Udaipur Fans Discuss Virosh Age Gap

ವಿಜಯ್ ಹಾಗೂ ರಶ್ಮಿಕಾ ಮದುವೆ ಎನ್ನುತ್ತಿದ್ದಂತೆ ಇಬ್ಬರ ಲವ್ ಸ್ಟೋರಿ, ಒಟ್ಟಿಗೆ ನಟಿಸಿದ್ದ ಸಿನಿಮಾಗಳು, ಇಬ್ಬರ ಆಸ್ತಿ ಮೌಲ್ಯ ಹೀಗೆ ಸಾಕಷ್ಟು ವಿಚಾರಗಳು ಚರ್ಚೆ ಆಗ್ತಿದೆ. ಸಾಕಷ್ಟು ಸಂದರ್ಭಗಳಲ್ಲಿ ಇಬ್ಬರ ನಡುವಿನ ಸುಂದರ ಕ್ಷಣಗಳ ಫೋಟೊ, ವೀಡಿಯೋ ವೈರಲ್ ಆಗುತ್ತಿದೆ. ಒಂದೇ ಜಾಗದಲ್ಲಿ ಇದ್ದಕೊಂಡು ಇಬ್ಬರೂ ಒಂಟಿಯಾಗಿ ಫೋಟೊ, ವೀಡಿಯೋ ಪೋಸ್ಟ್ ಮಾಡುತ್ತಿದ್ದದ್ದು. ಆ ಮೂಲಕ ಡೇಟಿಂಗ್ ವದಂತಿಗೆ ಪುಷ್ಠಿ ಕೊಟ್ಟಿದ್ದು ಹೀಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಗತಿಗಳು ಚರ್ಚೆ ಆಗ್ತಿದೆ.

ಸದ್ಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ವಯಸ್ಸಿನ ಅಂತರದ ಬಗ್ಗೆ ಚರ್ಚೆ ಶುರುವಾಗಿದೆ. ಇಬ್ಬರ ನಡುವೆ 6ರಿಂದ 7 ವರ್ಷ ವಯಸ್ಸಿನ ವ್ಯತ್ಯಾಸ ಇರುವುದು ಗೊತ್ತೇಯಿದೆ. ಅಂದಹಾಗೆ ಮದುವೆಗೂ ವಯಸ್ಸಿಗೂ ಸಂಬಂಧವಿಲ್ಲ ಎನ್ನುವವರು ಇದ್ದಾರೆ. ಸಾಮಾನ್ಯವಾಗಿ ಮದುವೆಯಾಗುವ ಹುಡುಗ ಹಾಗೂ ಹುಡುಗಿಯ ನಡುವೆ 3ರಿಂದ 4 ವರ್ಷ, 5ರಿಂದ 6 ವರ್ಷ ವ್ಯತ್ಯಾಸ ಇದ್ದರೆ ಒಳ್ಳೆಯದು ಎನ್ನುವ ವಾದ ಕೆಲವರದ್ದು.

Vijay Deverakonda and Rashmika Mandanna to Tie the Knot in Udaipur Fans Discuss Virosh Age Gap

ಹುಡುಗಿಂತ ಹುಡುಗನ ವಯಸ್ಸು ಹೆಚ್ಚಾಗಿರಬೇಕು ಎಂದು ಬಹುತೇಕರು ಹೇಳುತ್ತಾರೆ. ಆದರೆ ಈ ತನಗಿಂತ ಚಿಕ್ಕ ವಯಸ್ಸಿನ ಹುಡುಗರನ್ನು ಹುಡುಗಿಯರು ಮದುವೆ ಆಗುವುದು ಇದೆ. ಇಬ್ಬರ ನಡುವೆ ಪ್ರೀತಿ, ಅನ್ಯೋನ್ಯತೆ ಇದ್ದರೆ ವಯಸ್ಸಿನ ವಿಚಾರ ಲೆಕ್ಕಕ್ಕೇ ಬರಲ್ಲ. ಅದರಲ್ಲೂ ಹುಡುಗಿಗಿಂತ ಹುಡುಗ ದೊಡ್ಡವನಾಗಿರಲೇಬೇಕು ಎನ್ನುವುದು ಸರಿಯಲ್ಲ ಎನ್ನುವವರು ಇದ್ದಾರೆ. ತಮಗಿಂತ ಕಿರಿಯ ವಯಸ್ಸಿನ ನಟರನ್ನು ಕೆಲ ನಟಿಯರು ಮದುವೆ ಆಗಿರುವ ಉದಾಹರಣೆಗಳಿವೆ. ಇನ್ನು ಭಾರೀ ವಯಸ್ಸಿನ ಅಂತರ ಇರುವವರು ಪರಸ್ಪರ ಪ್ರೀತಿಸಿ ಮದುವೆ ಆಗುವುದು ಇದೆ.

ಈ ಹಿಂದೆ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿಸಿ ಮದುವೆಗೆ ಸಜ್ಜಾಗಿದ್ದರು. ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಆದರೆ ಕಾರಣಾಂತರಗಳಿಂದ ಬ್ರೇಕಪ್ ಆಗಿತ್ತು. ಆಗ ರಕ್ಷಿತ್ ಹಾಗೂ ರಶ್ಮಿಕಾ ನಡುವಿನ ವಯಸ್ಸಿನ ಅಂತರ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಸಖತ್ ಟ್ರೋಲ್ ಆಗಿತ್ತು. ಎಂಗೇಜ್‌ಮೆಂಟ್ ವೇಳೆಗೆ ರಕ್ಷಿತ್ ಶೆಟ್ಟಿ ವಯಸ್ಸು 34 ವರ್ಷ. ಆಗ ರಶ್ಮಿಕಾ ವಯಸ್ಸು 21 ವರ್ಷ. ಹಾಗಾಗಿ ಇಬ್ಬರ ನಡುವೆ 13 ವರ್ಷಗಳ ಅಂತರವಿತ್ತು. ಇದನ್ನೇ ಕೆಲವರು ಟ್ರೋಲ್ ಮಾಡಿದ್ದರು.

1989ರಲ್ಲಿ ವಿಜಯ್ ದೇವರಕೊಂಡ ಜನಿಸಿದ್ದರು. ಈಗ ಅವರ ವಯಸ್ಸು 36 ವರ್ಷ. ಅದೇ ರೀತಿ 1996ರಲ್ಲಿ ಹುಟ್ಟಿದ್ದ ರಶ್ಮಿಕಾಗೆ 29 ವರ್ಷ ವಯಸ್ಸಾಗಿದೆ. ಇಬ್ಬರ ವಯಸ್ಸಿನ ಅಂತರ 6 ವರ್ಷ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಉದಯ್‌ಪುರದ ಖಾಸಗಿ ರೆಸಾರ್ಟ್‌ನಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ಮಾಡಿದ್ದಾರೆ. ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ. ಬಳಿಕ ಹೈದರಾಬಾದ್‌ನಲ್ಲಿ ರಿಸೆಪ್ಷನ್ ಪಾರ್ಟಿ ಆಯೋಜಿಸಲಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X