ಮನೆಗೆ ಕರೆದು ಪುಟಾಣಿ ಅಭಿಮಾನಿಯ ಆಸೆ ಈಡೇರಿಸಿದ ವಿಜಯ್ ದೇವರಕೊಂಡ- ರಶ್ಮಿಕಾ ದಂಪತಿ
ತೆಲುಗು ನಟ ಹಾಗೂ ಕೊಡಗಿನ ನಟಿ ರಶ್ಮಿಕಾ ಮಂದಣ್ಣ 25 ದಿನಗಳ ಹಿಂದೆ ಹೊಸಬಾಳಿಗೆ ಕಾಲಿಟ್ಟಿದ್ದರು. ದೂರದ ಉದಯ್‌ಪುರದಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಬಳಿಕ ಹೈದರಾಬಾದ್‌ನಲ್ಲಿ ರಿಸೆಪ್ಷನ್ ಪಾರ್ಟಿ ಕೂಡ ಆಯೋಜಿಸಿದ್ದರು. ವಿಜಯ್ ತಮ್ಮ ಹುಟ್ಟೂರಿಗೆ ಹೋಗಿ ಅಲ್ಲಿನ ಅಭಿಮಾನಿಗಳಿಗೆ ಮದುವೆ ಊಟ ಹಾಕಿಸಿದ್ದರು.
ಹೈದರಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ಆಯ್ದ ಅಭಿಮಾನಿಗಳನ್ನು ಆಹ್ವಾನಿಸಿ ಮದುವೆ ಊಟ ಹಾಕಿಸಿದ್ದರು. ಇನ್ನು ದೇಶಾದ್ಯಂತ ಸಿಹಿ ಹಂಚಿ ದೇವಾಲಯಗಳಲ್ಲಿ ಅನ್ನದಾನಕ್ಕೆ ದೇಣಿಗೆ ನೀಡಿ ತಮ್ಮ ಮದುವೆಯನ್ನು ಸಂಭ್ರಮಿಸಿದ್ದರು. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮದುವೆ ನಡೀತಲ್ಲ. ನಮ್ಮನ್ನು ಕರೆಯಬಹುದಿತ್ತಲ್ಲ ಎಂದು ಚಿಕ್ಕ ಹುಡುಗಿ ವೀಡಿಯೋ ಮಾಡಿದ್ದು ವೈರಲ್ ಆಗಿತ್ತು. ಇದು ವಿರೋಷ್ ದಂಪತಿ ಗಮನಕ್ಕೂ ಬಂದಿತ್ತು. ಇದೀಗ ಆಕೆ ಆಸೆಯನ್ನು ದಂಪತಿ ಈಡೇರಿಸಿದ್ದಾರೆ.

ಪುಟಾಣಿ ಅಭಿಮಾನಿಯನ್ನು ಮನೆಗೆ ಕರೆಸಿ ಊಟ ಹಾಕಿ, ಆಕೆಯ ಜೊತೆ ಕೆಲವೊತ್ತು ಕಾಲ ಕಳೆದಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೇವರಕೊಂಡ ಫ್ಯಾಮಿಲಿ ಸಮೇತ ಆ ಪುಟಾಣಿ ಅಭಿಮಾನಿ ಡೈನಿಂಗ್ ಟೇಬಲ್‌ನಲ್ಲಿ ಕೂತು ಊಟ ಮಾಡುತ್ತಿರುವುದು ಗಮನ ಸೆಳೆದಿದೆ. ಆಕೆಗೆ ಇಷ್ಟವಾದ ಲಾಡು, ಚಿತ್ರಾನ್ನ ಬಡಿಸಿದ್ದಾರೆ. ನಾವು ಇನ್ನು ಮುಂದೆ ಫ್ರೆಂಡ್ಸ್ ಎಂದು ವಿಜಯ್ ಆ ಬಾಲಕಿ ಜೊತೆ ಮಾತನಾಡಿದ್ದಾರೆ. ತನ್ನನ್ನು ಮದುವೆಗೆ ಕರೆಯಲಿಲ್ಲ ಎಂದು ಕೋಪಿಸಿಕೊಂಡಂತೆ ಮುದ್ದಾಗಿ ವೀಡಿಯೋ ಮಾಡಿ ಅಂದು ಪುಟಾಣಿ ಹಂಚಿಕೊಂಡಿದ್ದಳು. ಆಕೆಯ ಪ್ರೀತಿಗೆ ವಿರೋಷ್ ಜೋಡಿ ಅಂದೇ ಪ್ರತಿಕ್ರಿಯಿಸಿದ್ದರು.
ಮದುವೆ ಸಮಾರಂಭಗಳಿಗೆ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ. ಜನ ಹೆಚ್ಚಾಗಿ ಸುಖಾ ಸುಮ್ಮನೆ ಸಮಸ್ಯೆ ಆಗುವುದು ಬೇಡ ಎಂದು ಭಾರೀ ಭದ್ರತೆ ನಡುವೆ ವಿರೋಷ್ ಜೋಡಿ ಮದುವೆ ಹಾಗೂ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಗ್ಗೆ ಇಬ್ಬರೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
ಮೆಹಂದಿ, ಸಂಗೀತ್ ಪಾರ್ಟಿ ಅಂತೆಲ್ಲಾ ಬಹಳ ಸಡಗರ ಸಂಭ್ರಮದಿಂದ ವಿರೋಷ್ ಮದುವೆ ಶುರುವಾಗಿತ್ತು. ಬಹಳ ದಿನಗಳಿಂದ ಇಬ್ಬರೂ ಡೇಟಿಂಗ್ ಮಾಡುತ್ತಿರುವ ಬಗ್ಗೆ ಗುಲ್ಲಾಗಿತ್ತು. ಆದರೆ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಬಂದಿದ್ದರು. ಕೆಲ ತಿಂಗಳ ಹಿಂದೆ ಗುಟ್ಟಾಗಿ ಎಂಗೇಜ್‌ಮೆಂಟ್ ಆಗಿತ್ತು. ಆದರೂ ಈ ಬಗ್ಗೆ ಜೋಡಿ ಒಪ್ಪಿಕೊಂಡಿರಲಿಲ್ಲ. ಮದುವೆಗೆ ಎರಡು ದಿನ ಬಾಕಿ ಇರುವಾಗಿ ಮದುವೆ ವಿಷಯ ಬಹಿರಂಗಪಡಿಸಿದ್ದರು. ಕನಸಿನಂತೆ ಜೋಡಿ ಬಹಳ ಅದ್ದೂರಿಯಾಗಿ ಅಷ್ಟೇ ಸಂಪ್ರದಾಯಬದ್ಧವಾಗಿ ಮದುವೆ ಆಗಿದ್ದರು.
ತೆಲಂಗಾಣ ಶೈಲಿಯಲ್ಲಿ ಮಾತ್ರವಲ್ಲ ಕೊಡವ ಶೈಲಿಯಲ್ಲಿ ಕೂಡ ಮದುಗೆ ಶಾಸ್ತ್ರಗಳು ನಡೆದವು. ಇಬ್ಬರ ಮದುವೆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚನ ಸೃಷ್ಟಿಸಿದ್ದು ಗೊತ್ತೇಯಿದೆ. 'ಗೀತಾಗೋವಿಂದಂ' ಚಿತ್ರದಲ್ಲಿ ನಟಿಸುವ ವೇಳೆ ವಿಜಯ್ ಹಾಗೂ ರಶ್ಮಿಕಾ ಪರಿಚಯ, ಸ್ನೇಹ ಶುರುವಾಗಿತ್ತು. 'ಡಿಯರ್ ಕಾಮ್ರೆಡ್' ಸಿನಿಮಾ ಶೂಟಿಂಗ್ ವೇಳೆ ಪ್ರೀತಿ ಮೂಡಿತ್ತು.
ರಶ್ಮಿಕಾ ಮೊದಲಿಗೆ ವಿಜಯ್ ದೇರವಕೊಂಡಗೆ ಪ್ರಪೋಸ್ ಮಾಡಿದ್ದರಂತೆ. ಕೆಲ ವರ್ಷಗಳಿಂದ ದೇವರಕೊಂಡ ಮನೆಗೆ ರಶ್ಮಿಕಾ ಆಗಾಗ್ಗೆ ಹೋಗಿ ಬರುತ್ತಿದ್ದರು. ಅವರ ಸ್ನೇಹಿತರು ಹಾಗೂ ಫ್ಯಾಮಿಲಿ ಸದಸ್ಯರ ಜೊತೆ ಪ್ರವಾಸಕ್ಕೆ ಹೋಗುತ್ತಿದ್ದರು. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗಿ ಡೇಟಿಂಗ್ ವದಂತಿ ಹರಡಿತ್ತು. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಾ ಬಂದಿದ್ದರು. ಅಂತಿಮವಾಗಿ ತಮ್ಮ ಪ್ರೀತಿಗೆ ಮದುವೆ ಮುದ್ರೆ ಒತ್ತಿದ್ದಾರೆ. ಸದ್ಯ 'ರಣಬಾಲಿ' ಎಂಬ ಚಿತ್ರದಲ್ಲಿ ವಿಜಯ್-ರಶ್ಮಿಕಾ ಮತ್ತೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇದು ಜೋಡಿಯ 3ನೇ ಸಿನಿಮಾ.


Click it and Unblock the Notifications











