twitter
    For Quick Alerts
    ALLOW NOTIFICATIONS  
    For Daily Alerts

    ವಿಜಯ್ ದೇವರಕೊಂಡ 'ಲೈಗರ್' ಪಾತ್ರ ಸೃಷ್ಟಿಗೆ ಅಲ್ಲು ಅರ್ಜುನ್ ಕಾರಣ!

    |

    ಲೈಗರ್ ಸಿನಿಮಾ ಇಂದು(ಆಗಸ್ಟ್ 25)ಕ್ಕೆ ರಿಲೀಸ್ ಆಗಿದೆ. ಲೈಗರ್ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಂಡಿದೆ. ಲೈಗರ್ ನಟ ವಿಜಯ್ ದೇವರಕೊಂಡ ಸಿನಿಮಾ ಬದುಕಿನಲ್ಲೇ ಬಹುದೊಡ್ಡ ಸಿನಿಮಾ. ಈ ಸಿನಿಮಾ ಬಾಕ್ಸಿಂಗ್ ಕಥೆಯನ್ನು ಹೊಂದಿದೆ.

    ಚಿತ್ರದಲ್ಲಿ ಸ್ಪರ್ಧೆಯ ಜೊತೆಗೆ, ಲವ್ ಸ್ಟೋರಿ, ತಾಯಿ ಸೆಂಟಿಮೆಂಟ್, ಆ್ಯಕ್ಷನ್, ಫೈಟ್, ಎಲ್ಲಾ ಅಂಶಗಳೂ ಕೂಡ ಇವೆ. ಇದರ ಜೊತೆಗೆ ನಟ ವಿಜಯ್ ದೇವರಕೊಂಡ ನಾಯಕನಾದರೂ ವಿಶೇಷವಾಗಿ ಅವ್ರ ಪಾತ್ರವನ್ನು ಹೆಣೆಯಲಾಗಿದೆ. ಮಾತನಾಡುವಾಗ ವಿಜಯ್ ತೊದಲುತ್ತಾರೆ. ಇದುವೆ ಅವರ ಪಾತ್ರದ ವಿಶೇಷತೆ.

    Recommended Video

    Liger Public Review | ವಿಜಯ್ ದೇವರಕೊಂಡ ಸಿನಿಮಾ ನೋಡಿ ತಲೆಕೆಡಿಸಿಕೊಂಡ ವೀಕ್ಷಕ | Vijay Devarakonda

    ವಿಜಯ್ ಪಾತ್ರಕ್ಕೂ, ನಟ ಅಲ್ಲು ಅರ್ಜುನ್‌ಗೂ ಒಂದು ನಂಟಿದೆ. ಅದನ್ನು ಈ ಚಿತ್ರದ ನಿರ್ದೇಶಕ ಪೂರಿ ಜಗನ್ನಾಥ್ ಸ್ಪಷ್ಟಪಡಿಸಿದ್ದಾರೆ. ಪುಷ್ಪ ಚಿತ್ರದ ನಿರ್ಮಾಪಕ ಸುಕುಮಾರ್ ಅವರೊಂದಿಗೆ ವಿಶೇಷ ಸಂದರ್ಶನವನ್ನು ನಡೆಸಿದ್ದು, ಈ ವಿಚಾರ ರಿವೀಲ್ ಮಾಡಿದ್ದಾರೆ.

    ವಿಜಯ್ ದೇವರಕೊಂಡ ವಿಶೇಷ ಪಾತ್ರ!

    ವಿಜಯ್ ದೇವರಕೊಂಡ ವಿಶೇಷ ಪಾತ್ರ!

    'ಲೈಗರ್' ಸಿನಿಮಾದ ಟ್ರೈಲರ್ ರಿಲೀಸ್ ಆದಾಗ ಅದರಲ್ಲಿ ಪ್ರಮುಖವಾಗಿ ವಿಜಯ್ ದೇವರಕೊಂಡ ಹೆಚ್ಚಾಗಿ ಗಮನ ಸೆಳೆದಿದ್ದರು. ಇದಕ್ಕೆ ಕಾರಣ ನಟ ವಿಜಯ್ ದೇವರಕೊಂಡ ಅವರು ವಿಭಿನ್ನವಾಗಿ ಕಾಣಿಸಿಕೊಂಡಿದ್ದು. ನಾಯಕ ನಟ ವಿಜಯ್ ತೊದಲುತ್ತ ಮಾತನಾಡುತ್ತಾರೆ. ಇದು ಈ ಚಿತ್ರದಲ್ಲಿ ನಾಯಕ ನಟನಿಗಿರುವ ನ್ಯೂನ್ಯತೆ. ತೊದಲು ನುಡಿಯಲ್ಲೇ ಡೈಲಾಗ್‌ಗಳನ್ನು ಸ್ಟೈಲಿಶ್ ಆಗಿ ಹೇಳಿ ಗಮನಸೆಳೆದಿದ್ದರು ವಿಜಯ್. ನಾಯಕ ನಟನ ಪಾತ್ರವನ್ನು ಈ ರೀತಿಯಾಗಿ ಪ್ರಸ್ತುತಪಡಿಸಲು ಕಾರಣ ನಟ ಅಲ್ಲು ಅರ್ಜುನ್.

    ಈ ಐಡಿಯಾ ಕೊಟ್ಟಿದ್ದು ಅಲ್ಲು ಅರ್ಜುನ್!

    ಈ ಐಡಿಯಾ ಕೊಟ್ಟಿದ್ದು ಅಲ್ಲು ಅರ್ಜುನ್!

    ಲೈಗರ್ ಸಿನಿಮಾದಲ್ಲಿ ನಾಯಕ ನಟನ ಪಾತ್ರವನ್ನು ಹೀಗೆ ಸೃಷ್ಟಿಸಲು ಅಲ್ಲು ಅರ್ಜುನ್ ಹೇಗೆ ಕಾರಣ ಎನ್ನುವುದನ್ನು ನಿರ್ದೇಶಕ ಪೂರಿ ಜಗನ್ನಾಥ್ ಹೇಳಿಕೊಂಡಿದ್ದಾರೆ. "ನನಗೆ 10 ವರ್ಷಗಳ ಹಿಂದೆ ಅಲ್ಲು ಅರ್ಜುನ್ ಹಾಲಿವುಡ್ ನಿರ್ದೇಶಕರೊಬ್ಬರ ಬಗ್ಗೆ ಹೇಳಿದ್ದರು. ಅವರ ನಾಯಕರಿಗೆ ಯಾವಾಗಲೂ ಒಂದು ರೀತಿಯ ಅಂಗವೈಕಲ್ಯ ಇರುತ್ತದೆ. ಎಂದು ಹೇಳಿ, ನೀವು ಅಂತಹ ಪಾತ್ರವನ್ನು ಏಕೆ ಬರೆಯಬಾರದು ಎಂದು ನನ್ನನ್ನು ಕೇಳಿದರು. ನಾನು ತೊದಲುವ ನಾಯಕನನ್ನು ಸೂಚಿಸಿದೆ. ಆಗ ಅವರು ಅದನ್ನು ಇಷ್ಟಪಟ್ಟಿದ್ದರು. ಹಾಗಾಗಿ ಅಲ್ಲಿಂದಲೇ ಅದು ಪ್ರಾರಂಭವಾಯಿತು. ಅಲ್ಲು ಅರ್ಜುನ್ ಅವರಿಂದಲೇ ಈ ಆಲೋಚನೆ ನನಗೆ ಬಂದಿತು" ಎಂದು ಹೇಳಿಕೊಂಡಿದ್ದಾರೆ.

    ಇಂದು ಲೈಗರ್ ರಿಲೀಸ್!

    ಇಂದು ಲೈಗರ್ ರಿಲೀಸ್!

    ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆಗೆ ನಾಯಕಿಯಾಗಿ ಅನನ್ಯಾ ಪಾಂಡೆ ನಟಿಸಿದ್ದಾರೆ. ತಾಯಿಯಾಗಿ ರಮ್ಯಕೃಷ್ಣ ನಟಿಸಿದ್ದು ವಿಶೇಷ ಪಾತ್ರವೊಂದರಲ್ಲಿ ಜಗತ್‌ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ನಟಿಸಿದ್ದಾರೆ. ಸಿನಿಮಾವನ್ನು ನಿರ್ದೇಶನ ಮಾಡುವ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ ಪುರಿ ಜಗನ್ನಾಥ್. ಲೈಗರ್ ಇಂದು ರಿಲೀಸ್ ಆಗಿದ್ದು, ವಿಜಯ್ ದೇವರಕೊಂಡ ಅದೃಷ್ಟ ಹೇಗಿದೆ ಎನ್ನುವ ಬಗ್ಗೆ ನೋಡಬೇಕಿದೆ.

    ಲೈಗರ್ ಬಾಕ್ಸಾಫೀಸ್ ಲೆಕ್ಕಾಚಾರ!

    ಲೈಗರ್ ಬಾಕ್ಸಾಫೀಸ್ ಲೆಕ್ಕಾಚಾರ!

    'ಲೈಗರ್' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಚಿತ್ರದ ಗಳಿಕೆಯ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಅದರಲ್ಲೂ ಚಿತ್ರತಂಡ ಈ ಚಿತ್ರ, ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಗಳಿಕೆ ಕಾಣಲಿದೆ ಎನ್ನುವ ನಿರೀಕ್ಷೆಯಲ್ಲಿ ಇದೆ. ಈ ವಿಚಾರವನ್ನು ಈ ಹಿಂದೆ ಸಂದರ್ಶನದಲ್ಲಿ ವಿಜಯ್ ದೇವರಕೊಂಡ ಹೇಳಿಕೊಂಡಿದ್ದರು. ಈ ಸಿನಿಮಾ ಎಷ್ಟು ಗಳಿಕೆ ಕಾಣಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ವಿಜಯ್ ದೇವರಕೊಂಡ, ಲೈಗರ್ ಸಿನಿಮಾ 200 ಕೋಟಿ ಗಳಿಕೆ ಮಾಡಲಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಮೊದಲ ದಿನ ಎಷ್ಟು ಓಪನಿಂಗ್ ಪಡೆದುಕೊಳ್ಳಲಿದೆ ಎನ್ನುವ ಕುತೂಹಲ ಸೃಷ್ಟಿಯಾಗಿದೆ.

    English summary
    Vijay Deverakonda Carector In Liger was Allu Arjun's Idea Says Director Puri Jagannadh, Know More,
    Thursday, August 25, 2022, 12:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X