For Quick Alerts
  ALLOW NOTIFICATIONS  
  For Daily Alerts

  1 ಮಿಲಿಯನ್‌ ಹಣ ಕೊಡ್ತಿದ್ದಾರೆ ನಟ ವಿಜಯ್‌ ದೇವರ ಕೊಂಡ: ನೀವೂ ಹಣ ಪಡೆಯಬಹುದು!

  |

  ಟಾಲಿವುಡ್‌ ನಟ ವಿಜಯ್‌ ದೇವರಕೊಂಡ ಈ ಬಾರಿಯ ಹೊಸ ವರ್ಷವನ್ನು ಮತ್ತಷ್ಟು ವಿಶೇಷಗೊಳಿಸಲು ಸಜ್ಜಾಗಿದ್ದಾರೆ. ಅದಕ್ಕಾಗಿ ಅವರು ಸಂತನ ಅವತಾರ ತಾಳುತ್ತಿದ್ದಾರೆ. ಅಂದರೆ ಕ್ರಿಸ್ಮಸ್ ಹಬ್ಬಕ್ಕೆ ಸಾಂತಾಕ್ಲಾಸ್ ಎಲ್ಲರಿಗೂ ಉಡುಗೊರೆ ನೀಡುವ ರೀತಿಯಲ್ಲಿ ದೇವರಕೊಂಡ 'ದೇವರ ಸಂತ' ಹೆಸರಲ್ಲಿ ಹೊಸ ಯೋಜನೆ ಹಾಕಿಕೊಂಡಿದ್ದಾರೆ.ಆಯ್ದ 100 ಮಂದಿ ಹೆಸರನ್ನು ಜನವರಿ 1 ಕ್ಕೆ ಪ್ರಕಟಿಸಿ, ಗಿಫ್ಟ್ ವಿತರಿಸಲಿದ್ದಾರೆ.

  ದೇವರಸಂತನಾಗಿ ವಿಜಯ್‌ ದೇವರಕೊಂಡ ಎಲ್ಲರಿಗೂ ಗಿಫ್ಟ್‌ ನೀಡುತ್ತಿದ್ದಾರೆ. ಆದರೆ ಆ ಗಿಫ್ಟ್‌ ಏನು ಎನ್ನುವುದನ್ನು ವಿಜಯ್‌ ದೇವರಕೊಂಡ ರಿವೀಲ್‌ ಮಾಡಿದ್ದಾರೆ. ವಿಜಯ್ ದೇವರಕೊಂಡ ಒಂದು ಮಿಲಿಯನ್‌ ಅಂದರೆ ಹತ್ತು ಲಕ್ಷ ಹಣವನ್ನು ಗಿಫ್ಟ್‌ ಆಗಿ ನೀಡಲು ಸಜ್ಜಾಗಿದ್ದಾರೆ.

  ಈ ಬಗ್ಗೆ ವಿಜಯ್ ಸ್ವತಃ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಮಾಡುವ ಮೂಲಕ ಹಣವನ್ನು ಗಿಫ್ಟ್‌ ಆಗಿ ಪಡೆಯಲು ಏನು ಮಾಡಬೇಕು ಎನ್ನುವುದನ್ನು ಹೇಳಿದ್ದಾರೆ.

  100 ಮಂದಿಗೆ 1 ಮಿಲಿಯನ್ ಹಣ ಮುಡಿಪು!

  ನಟ ವಿಜಯ್‌ ದೇವರಕೊಂಡ ಒಂದು ಮಿಲಿಯನ್‌ ಹಣವನ್ನು ನೀಡಲು ನಿರ್ಧರಿಸಿದ್ದಾರೆ. ಈ ಹಣವನ್ನು ಒಟ್ಟು 100 ಮಂದಿಗೆ ನೀಡಲು ವಿಜಯ್‌ ದೇವರಕೊಂಡ ನಿರ್ಧರಿಸಿದ್ದಾರೆ. 10 ಲಕ್ಷ ಹಣವನ್ನು, ಒಬ್ಬರಿಗೆ 10 ಸಾವಿರದಂತೆ 100 ಮಂದಿಗೆ ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಈ ವಿಚಾರವನ್ನು ವಿಡಿಯೋದ ಮೂಲಕ ವಿಜಯ್‌ ಸ್ಪಷ್ಟ ಪಡಿಸಿದ್ದಾರೆ. ಇದರಲ್ಲಿ 50 ಮಂದಿ ವಿಜಯ್‌ ದೇವರಕೊಂಡ ಅವರು ರೌಡಿ ಸಂಘದವರು ಆಗಿರಬೇಕು. ರೌಡಿ ಎನ್ನುವುದು ವಿಜಯ್‌ ದೇವರಕೊಂಡ ಅವರ ಬಟ್ಟೆ ಬ್ರ್ಯಾಂಡ್, ಮಿಕ್ಕ 50 ಮಂದಿ ಯಾರು ಆದರು ಸರಿ ಅವರಿಗೆ 10 ಸಾವಿರ ವಿಜಯ್‌ ದೇವರಕೊಂಡ ಕಡೆಯಿಂದ ಉಡುಗೊರೆ ಆಗಿ ಸಿಗುತ್ತದೆ.

  ಜನವರಿ 1ಕ್ಕೆ ಗಿಫ್ಟ್‌ ವಿತರಣೆ!

  ಜನವರಿ 1ಕ್ಕೆ ಗಿಫ್ಟ್‌ ವಿತರಣೆ!

  ಈ ಗಿಫ್ಟ್‌ ಹಣವನ್ನು ಜನವರಿ ಒಂದನೇ ತಾರೀಕಿನಂದು ವಿತರಣೆ ಮಾಡಲಿದ್ದಾರೆ ವಿಜಯ್‌ ದೇವರಕೊಂಡ. ಅದಕ್ಕೆ ನೀವು ಮಾಡ ಬೇಕಾಗಿರುವುದು ಇಷ್ಟೆ. ನಿಮಗೆ ಯಾಕೆ ಈ ಹಣ ಬೇಕು, ನಿಮಗೆ ಇರುವ ಅವಶ್ಯಕತೆ ಏನು ಎನ್ನುವುದನ್ನು ಹೇಳಬೇಕು. ಸಾಮಾಜಿಕ ಜಾಲತಾಣದ ಮೂಲಕವೇ ಅವರಿಗೆ ನಿಮಗಿರುವ ಅಶ್ಯಕತೆಯ ಬಗ್ಗೆ ಹೇಳಿಕೊಂಡರೆ ಸಾಕು, ಅದರಲ್ಲಿ ಮೊದಲು 100 ಮಂದಿಯನ್ನು ಆಯ್ಕೆ ಮಾಡಿ ಅವರಿಗೆ, ಹೊಸ ವರ್ಷದಂದು ಈ ಗಿಫ್ಟ್‌ ನೀಡಲಾಗುತ್ತದೆ.

  ಮಿಲಿಯನೇರ್ ಆಗಬೇಕು ಎಂದುಕೊಂಡಿದ್ದೆ: ವಿಜಯ್‌ ದೇವರಕೊಂಡ!

  ಮಿಲಿಯನೇರ್ ಆಗಬೇಕು ಎಂದುಕೊಂಡಿದ್ದೆ: ವಿಜಯ್‌ ದೇವರಕೊಂಡ!

  ವಿಜಯ್‌ ದೇವರಕೊಂಡ ಚಿತ್ರರಂಗಕ್ಕ ಎಂಟ್ರಿ ಕೊಟ್ಟು ಸಾಕಷ್ಟು ವರ್ಷಗಳ ಬಳಿಕ ಅವರಿಗೆ ಲಕ್‌ ಕುದುರಿದೆ. ಮಿಲಿಯನೇರ್‌ ಆಗಬೇಕು ಎನ್ನುವುದು ವಿಜಯ್‌ ಕಂಡ ಕನಸುಗಳಲ್ಲಿ ಒಂದಾಗಿತ್ತಂತೆ. ಆದರೆ ಈಗ ಒಂದು ಮಿಲಿಯನ್‌ ಹಣವನ್ನು ಅವರು ಸಮಾಜಕ್ಕೆ ನೀಡುತ್ತಿದ್ದಾರೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ವಿಜಯ್ ದೇವರಕೊಂಡ, ನಮ್ಮ ಸಮಾಜಕ್ಕೆ ನಾವು ಕೊಡುವೆ ನೀಡುವುದು ಖುಷಿಯ ಸಂಗತಿ ಎಂದು ಹೇಳಿಕೊಂಡಿದ್ದಾರೆ.

  ಲೈಗರ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ!

  ಲೈಗರ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ!

  ಅರ್ಜುನ್ ರೆಡ್ಡಿ ಚಿತ್ರದ ಬಳಿಕ ವಿಜಯ್‌ ದೇವರಕೊಂಡ ಅವರ ಸ್ಟಾರ್‌ ಬದಲಾಗಿದೆ. ಅಲ್ಲಿಂದ ಅವರ ಸಕ್ಸಸ್‌ ಜರ್ನಿ ಮುಂದುವರೆದಿದೆ. ನಂತ್ರ ಗೀತಾಗೋವಿಮದಂ ಸೇರಿದಂತೆ ಹಲವು ಚಿತ್ರಗಳಲ್ಲು ವಿಜಯ್‌ ಅಭಿನಯಿಸಿದ್ದಾರೆ. ಸದ್ಯ ಲೈಗರ್‌ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದು, ಚಿತ್ರ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.

  English summary
  Vijay Deverakonda Giving Away 1 Million As Santa, Know More
  Tuesday, December 28, 2021, 17:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X