For Quick Alerts
  ALLOW NOTIFICATIONS  
  For Daily Alerts

  '2 ದಶಕದಲ್ಲಿ ನಾನು ಕಂಡ ನಟರ ಪೈಕಿ ವಿಜಯ್ ದೇವರಕೊಂಡ ಅದ್ಭುತ'

  |

  'ನ್ಯಾಷನಲ್ ಕ್ರಶ್' ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಬಹಳ ಕುತೂಹಲ ಹುಟ್ಟಿಸಿದೆ. ಸ್ಫೋರ್ಟ್ಸ್ ರೊಮ್ಯಾಂಟಿಕ್ ಕಥೆ ಇದಾಗಿದ್ದು, ಮೇಕಿಂಗ್ ಹಂತದಲ್ಲೇ ಭಾರಿ ಚರ್ಚೆ ಹುಟ್ಟುಹಾಕಿದೆ. ಕರಣ್ ಜೋಹರ್ ಈ ಚಿತ್ರದ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು, ಪೂರಿ ಜಗನ್ನಾಥ್ ನಿರ್ದೇಶನ ಮಾಡ್ತಿದ್ದಾರೆ. ಅಂದ್ಹಾಗೆ, ಈ ಸಿನಿಮಾ ವಿಜಯ್ ದೇವರಕೊಂಡರ ಮೊದಲ ಬಾಲಿವುಡ್ ಚಿತ್ರ ಆಗಲಿದೆ.

  ಹೀಗೆ ಬಿಡುಗಡೆಗೆ ಮುಂಚೆಯೇ ಹೆಚ್ಚು ಗಮನ ಸೆಳೆಯುತ್ತಿರುವ ಲೈಗರ್ ಚಿತ್ರದ ಬಗ್ಗೆ ಸ್ಟಾರ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ರಾಮ್‌ ಗೋಪಾಲ್ ವರ್ಮಾ 'naughty' ಸಂದರ್ಶನ: ಯುವತಿ ಜೊತೆ ಏನೇನೋ ಮಾತುರಾಮ್‌ ಗೋಪಾಲ್ ವರ್ಮಾ 'naughty' ಸಂದರ್ಶನ: ಯುವತಿ ಜೊತೆ ಏನೇನೋ ಮಾತು

  ''ಲೈಗರ್ ಸಿನಿಮಾದ ಕೆಲವು ದೃಶ್ಯಗಳನ್ನು ನೋಡಿದೆ. ಸಿಂಹ ಮತ್ತು ಹುಲಿಗಿಂತ ಡಿಫ್ರೆಂಟ್. ಮಹೇಶ್ ಬಾಬು, ಪವನ್ ಕಲ್ಯಾಣ್, ಟೈಗರ್ ಶ್ರಾಫ್ ಹಾಗೂ ರವಿತೇಜಗಿಂತ ವಿಶೇಷ'' ಎಂಬ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

  ''ಆ ದೃಶ್ಯಗಳಲ್ಲಿ ವಿಜಯ್ ದೇವರಕೊಂಡ ಅವರನ್ನು ನೋಡುತ್ತಿದ್ದರೆ, ಕಳೆದ ಎರಡು ದಶಕದಲ್ಲಿ ನಾನು ನೋಡಿದ ಅದ್ಭುನ ನಟ'' ಎಂದು ಹೊಗಳಿದ್ದಾರೆ.

  ಆರ್‌ಜಿವಿ ಈ ಟ್ವೀಟ್‌ಗೆ ಟಾಲಿವುಡ್‌ನಲ್ಲಿ ಪ್ರತಿರೋಧ ವ್ಯಕ್ತವಾಗಿದೆ. ಮತ್ತೊಬ್ಬರನ್ನು ತೆಗಳಿ, ಇನ್ನೊಬ್ಬರನ್ನು ಹೊಗಳುವುದು ರಾಮ್ ಗೋಪಾಲ್ ವರ್ಮಾರ ಸ್ವಭಾವ ಎಂದು ಟೀಕಿಸುತ್ತಿದ್ದಾರೆ. ಮಹೇಶ್ ಬಾಬು, ರವಿತೇಜ, ಪವನ್ ಕಲ್ಯಾಣ್ ಅಭಿಮಾನಿಗಳು ವರ್ಮಾ ವಿರುದ್ಧ ಕೆಂಡಕಾರುತ್ತಿದ್ದಾರೆ.

  ಇನ್ನುಳಿದಂತೆ 'ಲೈಗರ್' ಸಿನಿಮಾ ಸೆಪ್ಟೆಂಬರ್ 9 ರಂದು ತೆರೆಗೆ ಬರುವ ಸಾಧ್ಯತೆ ಇದೆ. ಸದ್ಯದ ವರದಿ ಪ್ರಕಾರ, ಒಟಿಟಿ ಕಡೆ ದೇವರಕೊಂಡ ಚಿತ್ರ ಒಲವು ತೋರಿದೆ ಎನ್ನಲಾಗಿದೆ. ಆದರೆ ಸುದ್ದಿಯನ್ನು ವಿಜಯ್ ನಿರಾಕರಿಸಿದ್ದಾರೆ.

  Vijay Deverakonda Is Greater Than Any Star Said RGV
  ಅಶ್ಲೀಲ ಚಿತ್ರ ಶೂಟಿಂಗ್ & ಮಾರಾಟ: ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಅರೆಸ್ಟ್ | Filmibeat Kannada

  ತೆಲುಗಿನಲ್ಲಿ ಸಿನಿಮಾ ತಯಾರಾಗುತ್ತಿದ್ದು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ 'ಲೈಗರ್' ಸಿನಿಮಾ ಡಬ್ ಆಗಲಿದೆ. ಪೂರಿ ಡೈರೆಕ್ಷನ್‌ನಲ್ಲಿ ನಟಿ ಚಾರ್ಮಿ ಕೌರ್ ಬಂಡವಾಳ ಹಾಕಿದ್ದಾರೆ. ಅನನ್ಯ ಪಾಂಡೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Vijay Deverakonda Is Greater Than Any Star i have seen in last 2 decades said Ram gopal varma.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X