ವಿಜಯ್ ದೇವರಕೊಂಡ ಜೊತೆ ಮದುವೆ ವಂದತಿ ; ವಿಜು ನನ್ನ ದೊಡ್ಡ ಶಕ್ತಿ ಎಂದ ರಶ್ಮಿಕಾ ಮಂದಣ್ಣ..!
ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಾಯಕಿಯಾಗಿ ಅವತರಿಸಿದವರು ರಶ್ಮಿಕಾ ಮಂದಣ್ಣ. ಇದೊಂದೇ ಸಿನಿಮಾದ ಮೂಲಕ ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ನ್ಯಾಶನಲ್ ಕ್ರಶ್ ಆಗಿ ಹೊರ ಹೊಮ್ಮಿದ ರಶ್ಮಿಕಾ ಆ ನಂತರ, ಕನ್ನಡಕ್ಕಿಂತ ತೆಲುಗಿನಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು. ಅದರಲ್ಲಿಯೂ ವಿಜಯ್ ದೇವರಕೊಂಡ ಜೊತೆ ಇವರ ಆತ್ಮೀಯತೆ, ಕೇವಲ ಆಂಧ್ರದಲ್ಲಿ ಅಷ್ಟೇ ಅಲ್ಲ ಭಾರತದೆಲ್ಲೆಡೆ ಚರ್ಚೆಗೀಡಾಗಿತ್ತು. ಇವತ್ತು ಕೂಡ ಚರ್ಚೆಗೀಡಾಗ್ತಿದೆ.
ವಿಜಯ್ ದೇವರಕೊಂಡ ಜೊತೆಗೆ ಇವರ ಸಲುಗೆಯನ್ನ ಕಂಡು, ಅನೇಕರು ಇಲ್ಲಿಯವರೆಗೆ ಅನೇಕ ಮಾತುಗಳನ್ನಾಡಿದ್ದಾರೆ. ಅನೇಕ ಬಾರಿ ಇಬ್ಬರ ಮದುವೆಯನ್ನೂ ಮಾಡಿಸಿದ್ದಾರೆ. ಈ ಫೆಬ್ರುವರಿಯಲ್ಲಿ ಇಬ್ಬರು ಮದುವೆಯಾಗುವುದು ಖಚಿತ.. ನಿಶ್ಚಿತವೆಂಬ ಭವಿಷ್ಯವಾಣಿಯನ್ನೂ ಅನೇಕರು ಹೇಳುತ್ತಿದ್ದಾರೆ. ಇದರ ನಡುವೆ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ವಿಜಯ್ ದೇವರಕೊಂಡ ಬಗ್ಗೆ ಮುಕ್ತವಾದ ಮನಸಿನಿಂದ ಮಾತನಾಡಿದ್ದಾರೆ. ವಿಜಯ್ ದೇವರಕೊಂಡ ನನ್ನ ಬದುಕಿನಲ್ಲಿ ಬರದೇ ಇದ್ದಿದ್ದರೆ, ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವೇ ಇರ್ತಿರಲಿಲ್ಲ ಎಂಬ ಅರ್ಥದಲ್ಲಿ ಮನದ ಮಾತನ್ನ ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಅವರನ್ನ ಪ್ರೀತಿಯಿಂದ ವಿಜು ಎಂದು ಸಂಭೋಧಿಸಿದ್ದಾರೆ.

ವಿ ಆರ್ ಯುವ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ನಾನು ಮತ್ತು ವಿಜು ಒಂದು ರೀತಿಯಲ್ಲಿ ಒಟ್ಟಿಗೆ ಬೆಳೆದವರು. ಈಗ ನಾನು ಮಾಡುತ್ತಿರುವ ಎಲ್ಲದರಲ್ಲೂ ಅವರ ಕೊಡುಗೆ ಇದೆ. ಎಲ್ಲ ಕೆಲಸದಲ್ಲೂ ನಾನು ಅವರ ಸಲಹೆ ಪಡೆಯುತ್ತೇನೆ. ಅವರ ಅಭಿಪ್ರಾಯ ನನಗೆ ಬೇಕು. ಎಲ್ಲದಕ್ಕೂ ಯೆಸ್ ಎನ್ನುವ ವ್ಯಕ್ತಿ ಅವರಲ್ಲ. ಇದು ಒಳ್ಳೆಯದು, ಇದು ಕೆಟ್ಟದು, ಇದರ ಬಗ್ಗೆ ನನಗೆ ಹೀಗೆ ಅನಿಸುತ್ತಿದೆ ಅಂತ ಅವರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ' ಎಂದು ಹೇಳಿದ್ದಾರೆ. ಇಷ್ಟೇ ಅಲ್ಲ 'ನನ್ನ ಬದುಕಿನಲ್ಲಿ ವಿಜಯ್ ದೇವರಕೊಂಡ ಅವರು ಎಲ್ಲರಿಗಿಂತ ಹೆಚ್ಚಾಗಿ ಬೆಂಬಲ ನೀಡಿದ್ದಾರೆ. ಹಾಗಾಗಿ ನಾನು ಅವರನ್ನು ನಿಜವಾಗಿಯೂ ಗೌರವಿಸುತ್ತೇನೆ' ಎಂದು ಕೂಡ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ನಿಶ್ಚಿತಾರ್ಥ- ಮದುವೆಯ ಬಗ್ಗೆ ದೇವರಕೊಂಡ ಏನಂದಿದ್ದರು..?
ಹರಿದಾಡ್ತಿದ್ದ ಹಾಗೂ ಹರಿದಾಡ್ತಿರುವ ಮದುವೆ ಸುದ್ದಿಯ ಬಗ್ಗೆ ಹಿಂದೆ ಪ್ರತಿಕ್ರಿಯಿಸಿದ್ದ ವಿಜಯ್ ದೇವರಕೊಂಡ ಫೆಬ್ರುವರಿಯಲ್ಲಿ ನಾನು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿಲ್ಲ ಮದುವೆ ಕೂಡ ಆಗುತ್ತಿಲ್ಲ. ನಾನು ಪ್ರತಿ ವರ್ಷ ಈ ವದಂತಿಗಳನ್ನ ಕೇಳ್ತಾನೇ ಇದ್ದೇನೆ ಎಂದಿದ್ದರು


Click it and Unblock the Notifications











