ರಶ್ಮಿಕಾ ಮಂದಣ್ಣ ಜೊತೆ ಮದುವೆ.. ಕೋಟಿ ಕೋಟಿ ಡೀಲ್ ತಿರಸ್ಕರಿಸಿದ ವಿಜಯ್ ದೇವರಕೊಂಡ!

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ದಿನಕ್ಕೊಂದು ಸುದ್ದಿ ವೈರಲ್ ಆಗ್ತಿದೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯ್‌ಪುರ್‌ನಲ್ಲಿ ಜೋಡಿ ಹಸೆಮಣೆ ಏರುತ್ತದೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಮದುವೆ ವದಂತಿಯನ್ನು ಇಬ್ಬರು ತಳ್ಳಿ ಹಾಕಿಲ್ಲ.

ಉದಯ್‌ಪುರ್‌ನಲ್ಲಿ ವಿಜಯ್ ಹಾಗೂ ರಶ್ಮಿಕಾ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ಮಾಡಿದ್ದಾರೆ. ಕೆಲವೇ ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯುತ್ತದೆ. ಬಳಿಕ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ರಿಸೆಪ್ಷನ್ ನಡೆಯುತ್ತದೆ ಎಂದು ಫಿಲ್ಮ್‌ ನಗರ್‌ನಲ್ಲಿ ಚರ್ಚೆ ನಡೀತಿದೆ. ಇಬ್ಬರ ಮದುವೆ ಬಹುತೇಕ ಖಚಿತ ಎನ್ನಲಾಗ್ತಿದೆ. ಇದೆಲ್ಲದರ ನಡುವೆ ಅದ್ಧೂರಿ ಕಲ್ಯಾಣೋತ್ಸವದ ಚಿತ್ರೀಕರಣ ಹಾಗೂ ಓಟಿಟಿ ಸ್ಟ್ರೀಮಿಂಗ್ ಬಗ್ಗೆ ಗುಸುಗುಸು ಶುರುವಾಗಿದೆ.

Vijay Deverakonda Rashmika Mandanna Wedding Actor ReportedlyBig OTT Offer to Keep Marriage Private

'ಗೀತಾಗೋವಿಂದಂ' ಚಿತ್ರದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದರು. ಸಿನಿಮಾ ಹಿಟ್ ಆಗಿತ್ತು. ಬಳಿಕ ಇಬ್ಬರ ನಡುವೆ ಸ್ನೇಹ ಗಾಢವಾಗಿ ಅದು ಪ್ರೀತಿಗೆ ತಿರುಗಿದೆ ಎನ್ನಲಾಗ್ತಿದೆ. ಆದರೆ ತಮ್ಮಿಬ್ಬರ ಪ್ರೀತಿಯ ವಿಚಾರವನ್ನು ಇಬ್ಬರೂ ಮಾತನಾಡಲಿಲ್ಲ. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತ ಮಾತ್ರ ಹೇಳ್ತಾ ಬರ್ತಿದ್ದಾರೆ. 'ಗೀತಾಗೋವಿಂದಂ' ಸಿನಿಮಾ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಜೊತೆಗಿನ ರಶ್ಮಿಕಾ ಎಂಗೇಜ್‌ಮೆಂಟ್ ಕೂಡ ಮುರಿದುಬಿದ್ದಿತ್ತು.

ವಿಜಯ್ ಹಾಗೂ ರಶ್ಮಿಕಾ ಮದುವೆ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಇತ್ತೀಚೆಗೆ ತಾರಾ ಜೋಡಿಗಳ ಮದುವೆ ಸಂಭ್ರಮದ ಚಿತ್ರೀಕರಣ, ಪ್ರಸಾರದ ರೈಟ್ಸ್ ಅನ್ನು ಓಟಿಟಿ ಸಂಸ್ಥೆಗಳು ಕೊಂಡುಕೊಳ್ಳುತ್ತಿವೆ. ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ವೀಡಿಯೋ ಓಟಿಟಿ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿತ್ತು. ನೆಟ್‌ ಫ್ಲಿಕ್ಸ್ ಸಂಸ್ಥೆ ಡಾಕ್ಯುಮೆಂಟರಿ ರೀತಿ ಆ ಮದುವೆ ಸಂಭ್ರಮವನ್ನು ಚಿತ್ರೀಕರಿಸಿ ಸ್ಟ್ರೀಮಿಂಗ್ ಮಾಡಿತ್ತು. ಸಣ್ಣ ವಿವಾದಕ್ಕೂ ಕಾರಣವಾಗಿತ್ತು.

Vijay Deverakonda Rashmika Mandanna Wedding Actor ReportedlyBig OTT Offer to Keep Marriage Private

ಸದ್ಯ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ವಿಡಿಯೋ ರೈಟ್ಸ್‌ ಕೊಂಡುಕೊಳ್ಳಲು ಓಟಿಟಿ ಸಂಸ್ಥೆಗಳು ಮುಗಿಬಿದ್ದಿವೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ವಿಜಯ್ ಇದಕ್ಕೆ ನೋ ಎಂದು ಹೇಳಿರುವುದಾಗಿ ಫಿಲ್ಮ್ ನಗರ್‌ನಲ್ಲಿ ಚರ್ಚೆ ನಡೀತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ವೈಯಕ್ತಿಕ ಜೀವನದ ವಿಚಾರ ಇಟ್ಟುಕೊಂಡು ವ್ಯವಹಾರ ಮಾಡುವುದು ಬೇಡ ಎಂದು ವಿಜಯ್ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಭಾರೀ ಆಫರ್ ತಿರಸ್ಕರಿಸಿದ್ದಾರೆ ಎಂದು ಚರ್ಚೆ ಆಗ್ತಿದೆ.

ತಮ್ಮ ಮದುವೆ ವಿಚಾರವನ್ನು ಖಾಸಗಿ ಆಗಿ ಇಟ್ಟುಕೊಳ್ಳಲು ವಿಜಯ್ ದೇವರಕೊಂಡ ಬಯಸಿದ್ದಾರೆ ಎನ್ನಲಾಗ್ತಿದೆ. ಅಭಿಮಾನಿಗಳಂತೂ ಇಬ್ಬರ ಮದುವೆ ಸಂಭ್ರಮ ನೋಡಲು ಕಾಯುತ್ತಿದ್ದಾರೆ. ಈ ಹಿಂದೆ ಕೂಡ ಕೆಲ ಸೆಲೆಬ್ರೆಟಿಗಳು ಕೆಲವೇ ಆಪ್ತರ ಸಮ್ಮುಖದಲ್ಲಿ ಉದಯ್‌ಪುರ್ ಪ್ಯಾಲೇಸ್ ಹೋಟೆಲ್‌ನಲ್ಲಿ ಮದುವೆ ಮಾಡಿಕೊಂಡಿದ್ದರು. ಬಳಿಕ ಆಪ್ತರನ್ನು ಕರೆದು ರಿಸೆಪ್ಷನ್ ಪಾರ್ಟಿ ಆಯೋಜಿಸಿದ್ದರು. ಅದೇ ರೀತಿ ವಿಜಯ್‌, ರಶ್ಮಿಕಾ ಮದುವೆ ಪ್ಲ್ಯಾನ್ ಮಾಡಿರುವಂತೆ ಕಾಣುತ್ತಿದೆ.

'ಗೀತಾಗೋವಿಂದಂ' ಬಳಿಕ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಕೂಡ ವಿಜಯ್ ಹಾಗೂ ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ನಿರೀಕ್ಷಿತ ಮಟ್ಟದಲ್ಲಿ ಆ ಸಿನಿಮಾ ಗೆಲ್ಲಲಿಲ್ಲ. ಮತ್ತೆ ಇಬ್ಬರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಬಯಸುತ್ತಿದ್ದಾರೆ. ಇತ್ತೀಚೆಗೆ 'ರಣಬಾಲಿ' ಎಂಬ ಐತಿಹಾಸಿಕ ಸಿನಿಮಾ ಘೋಷಣೆ ಆಗಿದೆ. ವಿಜಯ್ ಹಾಗೂ ರಶ್ಮಿಕಾ ಇಬ್ಬರೂ 3ನೇ ಬಾರಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷದ ಕೊನೆಗೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X