'ವಿರೋಷ್' ರಾಯಲ್ ರಿಸೆಪ್ಷನ್; ಯಾರೆಲ್ಲಾ ಭಾಗಿ ಆಗಿದ್ದಾರೆ? ಇಲ್ಲಿದೆ ಲೈವ್ ಲಿಂಕ್

ಫೆಬ್ರವರಿ 26ರಂದ ಹಸೆಮಣೆ ಏರಿದ್ದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ದಂಪತಿ ಆರತಕ್ಷತೆ ಕಾರ್ಯಕ್ರಮ ಶುರುವಾಗಿದೆ. ಈಗಾಗಲೇ ತಾರೆಯರು ಒಬ್ಬೊಬ್ಬರಾಗಿ ವೇದಿಕೆಗೆ ಆಗಮಿಸುತ್ತಿದ್ದಾರೆ. ಹೈದರಾಬಾದ್ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಕಾರ್ಯಕ್ರಮ ನಡೀತಿದೆ.

ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟು ವಿಜಯ್ ದೇವರಕೊಂಡ ಮಿಂಚಿದ್ದಾರೆ. ಕೆಂಪು ಬಣ್ಣದ ಸೀರೆ ಉಟ್ಟು ರಶ್ಮಿಕಾ ಕಂಗೊಳಿಸಿದ್ದಾರೆ. ಹೋಟೆಲ್ ಹೊರ ಭಾಗದಲ್ಲಿ ಜೋಡಿ ಮಾಧ್ಯಮಗಳ ಮುಂದೆ ಹಾಜರಾಗಿದೆ. ತಮಿಳು ನಟ ಶರತ್‌ಕುಮಾರ್ ಹಾಗೂ ಪತ್ನಿ ನಟಿ ರಾಧಿಕಾ ಶರತ್‌ಕುಮಾರ್ ಸೇರಿ ಸಾಕಷ್ಟು ಗಣ್ಯರು ಆರತಕ್ಷತೆ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ.

Vijay Deverakonda Rashmika Mandanna Wedding Reception LIVE Star-Studded Celebration at Taj Krishna

ಹೋಟೆಲ್ ಒಳಗಡೆ ವೇದಿಕೆ ಏರುವ ಮುನ್ನ ಅತಿಥಿಗಳು ಹೊರಗಡೆ ಮಾಧ್ಯಮಗಳ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಹೋಟೆಲ್ ಒಳಗೆ ಅಭಿಮಾನಿಗಳಿಗೆ, ಮಾಧ್ಯಮವರಿಗೆ ಪ್ರವೇಶವಿಲ್ಲ. ರಾಜಕೀಯ ಮುಖಂಡರು, ಸಿನಿಮಾ ತಾರೆಯರು ಸೇರಿ ಗಣ್ಯಾತಿಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಾರೆ. ಹಾಗಾಗಿ ಭದ್ರತೆ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬರಲಾಗಿದೆ.

ಕಳೆದೊಂದು ವಾರದಿಂದ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಸಂಭ್ರಮ ನಡೀತಿದೆ. ಇತ್ತೀಚೆಗೆ ವಿರೋಷ್ ಜೋಡಿ ಅಭಿಮಾನಿಗಳನ್ನು ಭೇಟಿ ಮಾಡಿತ್ತು. ಅದಕ್ಕೂ ಮುನ್ನ ವಿಜಯ್ ತಮ್ಮ ಹುಟ್ಟೂರಿನ ಜನರ ಜೊತೆ ಮದುವೆ ಸಂಭ್ರಮಾಚರಣೆ ಮಾಡಿದ್ದರು. ಊರಿನ ಜನರಿಗೆ ಊಟ ಹಾಕಿಸಿ ಖುಷಿಪಟ್ಟಿದ್ದರು.

ವಿಜಯ್ ಹಾಗೂ ರಶ್ಮಿಕಾ ಪರಸ್ಪರ ಪ್ರೀತಿಸಿ ಇದೀಗ ಮದುವೆ ಆಗಿದ್ದಾರೆ. ನೆಚ್ಚಿನ ಜೋಡಿ ಮದುವೆ ಆಗಿರುವುದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. 'ವಿರೋಷ್' ಜೋಡಿಯ ಮದುವೆ ರಿಸೆಪ್ಷನ್ ಲೈವ್ ವಿಡಿಯೋ ಲಿಂಕ್ ಇಲ್ಲಿದೆ ನೋಡಿ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X