ನಾಳೆ(ಫೆಬ್ರವರಿ 2) ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ.. ಹೇಗಿದೆ ಸಿದ್ಧತೆ? ವಿಡಿಯೋ ವೈರಲ್

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕನ್ನಡ ನಟಿ ರಶ್ಮಿಕಾ ಮಂದಣ್ಣ ಮದುವೆ ಆಗುತ್ತಾರೆ ಎನ್ನುವ ಗುಸುಗುಸು ಕೇಳಿಬರುತ್ತಲೇ ಇದೆ. ಇದೀಗ ಮದುವೆಗೆ ಸಿದ್ಧತೆ ದೂರದ ಉದಯ್‌ಪುರದಲ್ಲಿ ಸಿದ್ಧತೆ ನಡೀತಿದ್ದು ನಾಳೆ(ಫೆಬ್ರವರಿ 2) ಮದುವೆ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಉದಯ್‌ಪುರ್ ಅರಮನೆಯಲ್ಲಿ ಮದುವೆಗೆ ಸಿದ್ಧತೆ ನಡೀತಿದೆ ಎಂದು ವಿಡಿಯೋ ವೈರಲ್ ಆಗ್ತಿದೆ.

'ಗೀತಗೋವಿಂದಂ' ಚಿತ್ರದಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಆಗ ಶುರುವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿದೆ ಎನ್ನಲಾಗ್ತಿದೆ. ಇದೀಗ ಇಬ್ಬರೂ ಪೋಷಕರ ಒಪ್ಪಿಗೆ ಪಡೆದು ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಮದುವೆ ಬಗ್ಗೆ ನೇರವಾಗಿ ಪ್ರಶ್ನೆ ಎದುರಾದಾಗಲೂ ರಶ್ಮಿಕಾ ನಯವಾಗಿಯೇ ಜಾರಿಕೊಳ್ಳುತ್ತಿದ್ದಾರೆ. ಹೌದು, ಇಲ್ಲ ಎಂದು ನೇರವಾಗಿ ಹೇಳದೇ ಗೊಂದಲ ಮೂಡಿಸಿದ್ದಾರೆ.

Vijay Deverakonda Rashmika Mandanna Wedding Rumors Heat Up After Udaipur Palace Video Goes Viral

ವಿಜಯ್ ಹಾಗೂ ರಶ್ಮಿಕಾ ಮದುವೆ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಂತ ಮಾತ್ರ ಇಬ್ಬರೂ ಹೇಳ್ತಾ ಬರ್ತಿದ್ದಾರೆ. ದೇಶ ವಿದೇಶಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. 'ಗೀತಗೋವಿಂದಂ' ಬಳಿಕ 'ಡಿಯರ್ ಕಾಮ್ರೆಡ್' ಎಂಬ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಸದ್ಯ 'ರಣಬಾಲಿ' ಎಂಬ ಐತಿಹಾಸಿಕ ಕಥಾಹಂದರದ ಚಿತ್ರದಲ್ಲಿ 3ನೇ ಬಾರಿ ಜೊತೆಯಾಗುತ್ತಿದ್ದಾರೆ.

ಅರಮನೆಯಲ್ಲಿ ಮದುವೆ ಸಿದ್ಧತೆ?

ಸದ್ಯ ರಾಜಸ್ಥಾನದ ಐತಿಹಾಸಿಕ ಉದಯಪುರ ಸಿಟಿ ಪ್ಯಾಲೇಸ್‌ನಲ್ಲಿ ಮದುವೆಗೆ ಸಿದ್ಧತೆ ನಡೆಯುತ್ತಿದೆ. ವೇದಿಕೆಯನ್ನು ಅಲಂಕರಿಸುತ್ತಿರುವ ವೀಡಿಯೊ ಒಂದು ವೈರಲ್ ಆಗ್ತಿದೆ. ಇಬ್ಬರು ಹುಡುಗಿಯರು ಅರಮನೆಯಲ್ಲಿನ ಅಲಂಕಾರವನ್ನು ತೋರಿಸುತ್ತಾ ಸೆಲ್ಫಿ ವಿಡಿಯೋ ಮಾಡಿದ್ದಾರೆ. "ವಿಜಯ್ ಮತ್ತು ರಶ್ಮಿಕಾ ಅವರ ಮದುವೆ ಫೆಬ್ರವರಿ 2 ರಂದು ಇಲ್ಲಿ ನಡೆಯಲಿದೆ. ಅದಕ್ಕಾಗಿ ಈ ಸಿದ್ಧತೆ" ಎಂದಿದ್ದಾರೆ. ವೀಡಿಯೋ ನೋಡುತ್ತಿದ್ದರೆ ಯಾವುದೋ ಅದ್ಧೂರಿ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿರುವುದು ಗೊತ್ತಾಗುತ್ತಿದೆ. ಆದರೆ ವಿಜಯ್, ರಶ್ಮಿಕಾ ಮದುವೆ ನಡೆಯುತ್ತಾ ಎನ್ನುವ ಬಗ್ಗೆ ಖಚಿತ ಮಾಹಿತಿ ಇಲ್ಲ. ಇಬ್ಬರ ಮದುವೆಗೆ ಬೆಂಗಳೂರಿನಿಂದ ಹೂಗಳು ಸರಬರಾಜು ಆಗ್ತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.

ರಶ್ಮಿಕಾ ಬ್ರೇಕಪ್

'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ರಶ್ಮಿಕಾ ಬಣ್ಣದಲೋಕ ಪ್ರವೇಶಿಸಿದ್ದರು. ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರದಲ್ಲಿ ಸಾನ್ವಿ ಎಂಬ ಪಾತ್ರದಲ್ಲಿ ಮೋಡಿ ಮಾಡಿದ್ದರು. ಅದೇ ಸಮಯದಲ್ಲಿ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಜೊತೆ ಪ್ರೀತಿಲಿ ಬಿದ್ದಿದ್ದರು. ಇಬ್ಬರೂ ಪೋಷಕರನ್ನು ಒಪ್ಪಿಸಿ ಅದ್ದೂರಿಯಾಗಿ ಮದುವೆ ನಿಶ್ಚಯಿಸಿಕೊಂಡಿದ್ದರು. ಆದರೆ 'ಗೀತಗೋವಿಂದಂ' ಸಿನಿಮಾ ಬಳಿಕ ಇಬ್ಬರ ಎಂಗೇಜ್‌ಮೆಂಟ್ ಮುರಿದು ಬಿದ್ದಿತ್ತು.

ರಶ್ಮಿಕಾ ಸಕ್ಸಸ್

ಕನ್ನಡ ಸಿನಿಮಾಗಳಲ್ಲಿ ನಟಿಸಿ ಗೆದ್ದ ರಶ್ಮಿಕಾ ಬಳಿಕ ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. 'ಗೀತಗೋವಿಂದಂ' ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ತಮಿಳು ಸಿನಿಮಾಗಳಲ್ಲಿ ನಟಿಸಿದರು. 'ಪುಷ್ಪ' ಸರಣಿ ಸಿನಿಮಾ ಆಕೆಗೆ ಬಾಲಿವುಡ್ ಬಾಗಿಲು ತೆಗೆಯುವಂತೆ ಮಾಡಿತು. ಗುಡ್‌ಬೈ ಚಿತ್ರದಲ್ಲಿ ಬಿಗ್‌ಬಿ ಜೊತೆ ಮಿಂಚಿದರು. 'ಅನಿಮಲ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು.

3ನೇ ಬಾರಿ ಒಂದಾದ ಜೋಡಿ

ಸದ್ಯ ವಿಜಯ್ ದೇವರಕೊಂಡ ಸತತ ಸೋಲುಗಳಿಂದ ಕಂಗೆಟ್ಟಿದ್ದಾರೆ. ಮತ್ತೊಂದು ಕಡೆ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಾಗಿದೆ. ಇವರಿಬ್ಬರು ಮತ್ತೆ ಒಟ್ಟಿಗೆ ನಟಿಸಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿತ್ತು. ಅಂತೂ ಇಂತೂ 'ರಣಬಾಲಿ' ಚಿತ್ರದ ಮೂಲಕ ಅದು ನನಸಾಗುತ್ತಿದೆ. ರಶ್ಮಿಕಾ ನಾಯಕಿಯಾಗಿ ವಿಜಯ್ ದೇವರಕೊಂಡಗೆ ಗೆಲುವು ತಂದುಕೊಡ್ತಾರಾ? ಕಾದು ನೋಡಬೇಕಿದೆ. ರಾಹುಲ್ ಸಂಕೃತ್ಯಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X