ರಶ್ಮಿಕಾ ಜೊತೆ ಮದುವೆ ವದಂತಿ ಬೆನ್ನಲ್ಲೇ ಬೆಲ್ಜಿಯಂ ಗೆಳತಿ ಜೊತೆಗಿನ ದೇವರಕೊಂಡ ಫೋಟೊ ವೈರಲ್
ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮದುವೆಗೆ ಸಿದ್ಧತೆ ನಡೆಯುತ್ತಿದೆ ಎಂದು ಗುಲ್ಲಾಗಿದೆ. ಫೆಬ್ರವರಿ 16ರಂದು ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ನಡೀತಿದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದೆಲ್ಲದರ ನಡುವೆ ಮಾಜಿ ಗೆಳತಿ ಜೊತೆಗಿನ ದೇವರಕೊಂಡ ಫೋಟೊಸ್ ವೈರಲ್ ಆಗ್ತಿದೆ.
2016ರಲ್ಲಿ ತೆರೆಗೆ ಬಂದ 'ಪೆಳ್ಳಿಚೂಪುಲು' ಚಿತ್ರದಲ್ಲಿ ಹೀರೊ ಆಗಿ ವಿಜಯ್ ದೇವರಕೊಂಡ ಗೆದ್ದಿದ್ದರು. 'ಅರ್ಜುನ್ ರೆಡ್ಡಿ' ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅದೇ ಸಮಯದಲ್ಲಿ ವಿದೇಶಿ ಗೆಳತಿ ವರ್ಜೀನಿಯ ಜೊತೆಗೆ ವಿಜಯ್ ದೇವರಕೊಂಡ ಆತ್ಮೀಯವಾಗಿರುವ ಫೋಟೊಗಳು ವೈರಲ್ ಆಗಿತ್ತು. ವಿಜಯ್ ಪೋಷಕರು, ಸಹೋದರನ ಜೊತೆಗೂ ಆಕೆ ಕಾಣಿಸಿಕೊಂಡಿದ್ದರು. ಬೆಲ್ಜಿಯಂ ಮೂಲದ ವರ್ಜೀನಿಯ ತನ್ನ ತಾಯಿ ಜೊತೆಗೆ ವಿಜಯ್ ಮನೆಗೆ ಭೇಟಿ ನೀಡಿದ್ದರು. ಆಕೆಯ 25ನೇ ವರ್ಷದ ಹುಟ್ಟುಹಬ್ಬವನ್ನು ಎಲ್ಲರೂ ಒಟ್ಟಾಗಿ ಆಚರಿಸಿದ್ದರು ಎನ್ನಲಾಗಿತ್ತು.

ಆ ಫೋಟೊಗಳನ್ನೆಲ್ಲಾ ನೋಡಿ ವಿಜಯ್ ಹಾಗೂ ಬೆಲ್ಜಿಯಂ ಚೆಲುವೆ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ಈ ಬಗ್ಗೆ ವಿಜಯ್ ನೇರವಾಗಿ ಏನು ಹೇಳದೇ ಇದ್ದಿದ್ದು ವದಂತಿಗೆ ರೆಕ್ಕೆಪುಕ್ಕ ಬರುವಂತಾಗಿತ್ತು. 'ನೋಟ' ಸಿನಿಮಾ ಸಮಯದಲ್ಲಿ ಇಬ್ಬರ ನಡುವೆ ಬ್ರೇಕಪ್ ಆಗಿತ್ತು ಎನ್ನುವ ಊಹಾಪೋಹ ಕೇಳಿಬಂದಿತ್ತು. ಇದೀಗ ಇದ್ದಕ್ಕಿದ್ದಂತೆ ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಚಕ್ಕರ್ ಹೊಡೆಯುತ್ತಿದೆ.
'ನೋಟ' ಸಿನಿಮಾ ಸುದ್ದಿಗೋಷ್ಠಿ ವೇಳೆ ವೈರಲ್ ಫೋಟೊಗಳ ಬಗ್ಗೆ ವಿಜಯ್ ದೇವರಕೊಂಡಗೆ ಪ್ರಶ್ನೆ ಎದುರಾಗಿತ್ತು. "ಫೋಟೊ ವೈರಲ್ ಆಗ್ತಿದೆ ಅಂದ್ರೆ, ಏನೋ ಇದೆ ಅಂತ ಅಲ್ವಾ?" ಎಂದಿದ್ದರು. ಸಮಯ ಬಂದಾಗ ಆಕೆಯ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತೇನೆ ಎಂದು ತಮಾಷೆಯಾಗಿ ಹೇಳಿದ್ದರು.

ಮತ್ತೊಂದು ಕಡೆ ಸದ್ದಿಲ್ಲದೇ ವಿಜಯ್, ರಶ್ಮಿಕಾ ಮದುವೆಗೆ ತಯಾರಿ ನಡೆಯುತ್ತಿದೆ ಎಂದು ಹೇಳಲಾಗ್ತಿದೆ. ಫೆಬ್ರವರಿ 26ರಂದು ಉದಯ್‌ಪುರದಲ್ಲಿ ಮದುವೆ ಬಳಿಕ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ರಿಸೆಪ್ಷನ್ ಪಾರ್ಟಿಗೆ ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಫಿಲ್ಮ್ ನಗರ್‌ನಲ್ಲಿ ಗುಲ್ಲಾಗಿದೆ. ಇನ್ನು ಮದುವೆಗೆ ಬೆಂಗಳೂರಿನಿಂದ ಹೂವು ಸರಬರಾಜು ಆಗುತ್ತದೆ ಎನ್ನುವ ಮಾತುಗಳು ಕೇಳಿಬಂದಿತ್ತು.
'ಗೀತಾಗೋವಿಂದಂ' ಚಿತ್ರದಲ್ಲಿ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಒಟ್ಟಿಗೆ ನಟಿಸಿದ್ದರು. ಸಿನಿಮಾ ಬಿಡುಗಡೆಯಾಗಿ ಹಿಟ್ ಆಗಿತ್ತು. ಅದರ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಜೊತೆಗಿನ ರಶ್ಮಿಕಾ ನಿಶ್ಚಿತಾರ್ಥ ಮುರಿದುಬಿದ್ದಿತ್ತು. ಹಾಗಾಗಿ ವಿಜಯ್ ಹಾಗೂ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಗುಲ್ಲಾಯಿತು. ಇಬ್ಬರೂ ಬಹಳ ಆತ್ಮೀಯ ಸ್ನೇಹಿತರಾಗಿಬಿಟ್ಟರು. ವಿಜಯ್ ರೀತಿಯ ಸ್ನೇಹಿತ ಪ್ರತಿಯೊಬ್ಬರ ಜೀವನದಲ್ಲಿ ಇರಬೇಕು ಎಂದು ರಶ್ಮಿಕಾ ಹೇಳಿದ್ದಾರೆ.
ಮದುವೆ ಬಗ್ಗೆ ಪ್ರಶ್ನೆಗೆ ರಶ್ಮಿಕಾ ನೇರವಾಗಿ ಉತ್ತರಿಸದೇ ತೇಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ. ಸಮಯ ಬಂದಾಗ ಹೇಳ್ತೀನಿ ಎನ್ನುತ್ತಿದ್ದಾರೆ. ಇತ್ತೀಚೆಗೆ ಏರ್‌ಪೋರ್ಟ್‌ನಲ್ಲಿ ಛಾಯಾಗ್ರಾಹಕರು "ಮದುವೆ ಆಗುತ್ತಿರುವುದಕ್ಕೆ ಅಭಿನಂದನೆ ಮೇಡಂ" ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸದೇ ರಶ್ಮಿಕಾ ಹೊರಟು ಹೋಗಿದ್ದಾರೆ. ಇದನ್ನೆಲ್ಲಾ ನೋಡಿ ಇಬ್ಬರ ಮದುವೆ ಪಕ್ಕಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬಂದರೆ ರಶ್ಮಿಕಾ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ಮತ್ತೊಂದು ಕಡೆ ದೇವರಕೊಂಡ ಸೋಲಿನ ಸುಳಿಗೆ ಸಿಲುಕಿದ್ದಾರೆ. ಇದೀಗ 'ರಣಬಾಲಿ' ಎಂಬ ಐತಿಹಾಸಿಕ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ನಟಿಸುತ್ತಿದ್ದಾರೆ. 'ಗೀತಾಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಬಳಿಕ ಇದು ವಿಜಯ್ ಹಾಗೂ ರಶ್ಮಿಕಾ ನಟಿಸುತ್ತಿರುವ 3ನೇ ಸಿನಿಮಾ ಎನ್ನುವುದು ವಿಶೇಷ.


Click it and Unblock the Notifications











