ಹುಲಿಗೆ ಹಾಲು.. ಸಿಂಹದೊಂದಿಗೆ ಆಟ.. ಹಾವುಗಳ ಜೊತೆ ಸರಸ: ರಶ್ಮಿಕಾ ಮಾತ್ರ ಮಿಸ್ಸಿಂಗ್
'ಲೈಗರ್' ಸಿನಿಮಾ ಸೋಲಿನ ನಂತರ ಸೈಲೆಂಟ್ ಆಗಿದ್ದ ನಟ ವಿಜಯ್ ದೇವರಕೊಂಡ ಇತ್ತೀಚೆಗೆ ಹೊಸ ಸಿನಿಮಾ ಘೋಷಿಸಿದ್ದರು. ಸದ್ಯ 'ಖುಷಿ' ಸಿನಿಮಾ ಶೂಟಿಂಗ್ ಕೂಡ ನಿಂತು ಹೋಗಿರುವುದರಿಂದ ಟಾಲಿವುಡ್ ಸೆನ್ಸೇಷನಲ್ ಸ್ಟಾರ್ ಫ್ಯಾಮಿಲಿ, ಟೂರ್ ಅಂತ ಎಂಜಾಯ್ ಮಾಡ್ತಿದ್ದಾರೆ.
ಗೌತಮ್ ತಿನ್ನನೂರಿ ನಿರ್ದೇಶನದಲ್ಲಿ ವಿಜಯ್ ತಮ್ಮ ಮುಂದಿನ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ರೋಲ್‌ನಲ್ಲಿ ಅಬ್ಬರಿಸೋಕೆ ಬರ್ತಿದ್ದಾರೆ. 'ಅರ್ಜುನ್ ರೆಡ್ಡಿ' ಆಗಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ವಿಜಯ್ 'ಲೈಗರ್' ಸಿನಿಮಾದಿಂದ ಪಾತಾಳಕ್ಕೆ ಬಿದ್ದು ಬಿಟ್ಟರು. 6 ತಿಂಗಳು ಕಳೆದರೂ ತಂಡಕ್ಕೆ ಆ ಸಿನಿಮಾ ಸೋಲಿನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ವಿಜಯ್ ದೇವರಕೊಂಡ ದುಬೈ ಪ್ರವಾಸಕ್ಕೆ ಹೋಗಿದ್ದರು.
ಸದ್ಯ ಶೂಟಿಂಗ್ ಇಲ್ಲದೇ ಫ್ರೀಯಾಗಿ ಇರುವ ವಿಜಯ್ ದೇವರಕೊಂಡ ಇತ್ತೀಚೆಗೆ ಫ್ಯಾಮಿಲಿ ಜೊತೆ ದುಬೈಗೆ ಹೋಗಿ ಬಂದಿದ್ದರು. ಅಲ್ಲಿನ ಫೇಮ್ ಪಾರ್ಕ್‌ಗೆ ಹೋಗಿದ್ದ ವಿಜಯ್ ಕ್ರೂರ ಪ್ರಾಣಿಗಳ ಜೊತೆ ಸಮಯ ಕಳೆದಿದ್ದಾರೆ.
ಕ್ರೂರ ಮೃಗಗಳ ಜೊತೆ ಕ್ರೇಜಿ ಗೇಮ್ಸ್
ಭಾರತದ ಮೃಗಾಲಯಗಳಲ್ಲಿ ಪ್ರಾಣಿ- ಪಕ್ಷಿಗಳನ್ನು ಕಬ್ಬಿಣದ ಮಂಜರಗಳಲ್ಲಿ ಕೂಡಿ ಹಾಕಿರುತ್ತಾರೆ. ಪ್ರವಾಸಿಗಳು ಅದನ್ನು ನೋಡಲು ಮಾತ್ರ ಅವಕಾಶ ಇರುತ್ತದೆ. ಆದರೆ ಕೆಲ ದೇಶಗಳಲ್ಲಿರುವ ಖಾಸಗಿ ಮೃಗಾಲಯಗಳಲ್ಲಿ ಆ ಪ್ರಾಣಿ ಪಕ್ಷಿಗಳ ಜೊತೆ ಆಟ ಆಡಲು ಅವಕಾಶ ಇದೆ. ದುಬೈನ ಫೇಮ್ ಪಾರ್ಕ್‌ನಲ್ಲಿ ಇಂತದ್ದೇ ವಿಶೇಷ ಅವಕಾಶ ಸಿಗುತ್ತದೆ. ನಟ ವಿಜಯ್ ದೇವರಕೊಂಡ ಕೂಡ ಈ ಮೃಗಾಲಯಕ್ಕೆ ಭೇಟಿ ನೀಡಿ ಅಲ್ಲಿನ ಕ್ರೂರ ಪ್ರಾಣಿ ಪಕ್ಷಗಳ ಜೊತೆ ಕ್ರೇಜಿ ಗೇಮ್ಸ್ ಆಗಿ ಎಂಜಾಯ್ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹಾವುಗಳ ಜೊತೆ ವಿಜಯ್ ಸರಸ
ಸೈಫ್ ಅಹಮದ್ ಬೆಲ್ಸಾಸಾ ಒಡೆತನದ ಈ ಖಾಸಗಿ ಜೂ ಪಾರ್ಕ್‌ನಲ್ಲಿ ವಿಜಯ್ ದೇವರಕೊಂಡ ಕ್ವಾಲಿಟಿ ಟೈಂ ಸ್ಪೆಂಡ್ ಮಾಡಿದ್ದಾರೆ. ಮೊದಲಿಗೆ ಅಲ್ಲಿರೋ ಪಕ್ಷಿಗಳು, ಕೋತಿಗಳಿಗೆ ಊಟ ತಿನ್ನಿಸಿದ್ದಾರೆ. ನಂತರ ಕೆಲ ಹಾವುಗಳನ್ನು ಕುತ್ತಿಗೆಗೆ, ಭುಜಕ್ಕೆ ಸುತ್ತಿಕೊಂಡಿದ್ದಾರೆ. ಕೊನೆಗೆ ಭಾರೀ ಗಾತ್ರದ ಹೆಬ್ಬಾವು ಒಂದನ್ನು ದೇಹದ ಮೇಲೆ ಹಾಕಿಕೊಂಡಿದ್ದಾರೆ. ಆತಂಕದಲ್ಲೇ ಪ್ರಾಣಿ ಪಕ್ಷಿಗಳ ಜೊತೆ ತುಂಟಾಟ ಆಡಿ ಎಂಜಾಯ್ ಮಾಡಿದ್ದಾರೆ.

ಸಿಂಹದ ಎದುರು ಸೋತ 'ಲೈಗರ್'!
ಪಂಜರದೊಳಗೆ ಇರುವ ಸಿಂಹದ ಜೊತೆ ಹಗ್ಗ ಜಗ್ಗಾಟ ಆಡಿದ್ದಾರೆ. ಆದರೆ ಆಟದಲ್ಲಿ ಸಿಂಹದ ಎದುರು 'ಲೈಗರ್' ವಿಜಯ್ ದೇವರಕೊಂಡ ಸೋತಿದ್ದಾರೆ. ಅದನ್ನು ಒಪ್ಪಿಕೊಂಡಿದ್ದಾರೆ. ನಂತರ ಹುಲಿ ಮರಿಗಳ ಜೊತೆ ಆಡಿ ಸಮಯ ಕಳೆದಿದ್ದಾರೆ. ಅವುಗಳಿಗೆ ಹಾಲು ಕುಡಿಸಿದ್ದಾರೆ. ಒಟ್ಟಿನಲ್ಲಿ ಜೂ ಪಾರ್ಕ್‌ನಲ್ಲಿರುವ ಪ್ರಾಣಿ ಪಕ್ಷಿಗಳ ಜೊತೆ ಆಟ ಆಡಿ ರಿಲ್ಯಾಕ್ಸ್ ಮಾಡಿದ್ದಾರೆ. ನನ್ನ ಜೀವನದಲ್ಲಿ ಮರೆಯಲಾಗದ ನೆನಪುಗಳು ಇವು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ರಶ್ಮಿಕಾ ಮಂದಣ್ಣ ಎಲ್ಲೋದ್ರು?
"ಬ್ಯೂಟಿಫುಲ್ ಗಾರ್ಡನ್.. ಗಿಳಿಗಳು, ಪಕ್ಷಿಗಳು, ವಿಚಿತ್ರವಾದ ಪ್ರಾಣಿಗಳನ್ನು ನೋಡಿದ್ದು ಬಹಳ ಸಂತೋಷವಾಗಿದೆ. ಅಷ್ಟೇ ಅಲ್ಲ, ಹಾವುಗಳು ಅಂದರೆ ನನಗೆ ಬಹಳ ಭಯ. ಆ ಭಯ ಹೋಗುವಂತೆ ಮಾಡಿದ ಜೂ ಸಿಬ್ಬಂದಿಗೆ ಧನ್ಯವಾದ. ಅದೇ ರೀತಿ ಹುಲಿ, ಸಿಂಹಗಳ ಜೊತೆ ಮಾತನಾಡಲು ಸಹಾಯ ಮಾಡಿ ಸಿಬ್ಬಂದಿ, ಕ್ಯೂರೇಟರ್‌ಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ. ಇನ್ನು ವಿಜಯ್ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ ನಟಿ ರಶ್ಮಿಕಾ ಮಂದಣ್ಣ ಕೂಡ ದುಬೈಗೆ ಟೂರ್ ಹೋಗಿದ್ದಾರೆ. ಆದರೆ ರಶ್ಮಿಕಾ ಮಾತ್ರ ಈ ವಿಡಿಯೋದಲ್ಲಿ ಕಾಣುತ್ತಿಲ್ಲ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ.


Click it and Unblock the Notifications











