ಕೈಗೆ ಸಿಹಿಮುತ್ತು; ಎಲ್ಲರ ಜೀವನದಲ್ಲಿ ಒಬ್ಬ ವಿಜಯ್‌ ದೇವರಕೊಂಡ ಇರ್ಬೇಕು ಎಂದ ರಶ್ಮಿಕಾ

ಕನ್ನಡ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಮದುವೆ ಆಗ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಈಗಾಗಲೇ ಇಬ್ಬರ ನಿಶ್ಚಿತಾರ್ಥ ಗುಟ್ಟಾಗಿ ನಡೆದಿದ್ದು ಮುಂದಿನ ಫೆಬ್ರವರಿಯಲ್ಲಿ ಡುಂಡುಂಡುಂ ಪಿಪಿಪಿ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನು ಸಿಕ್ಕಿಲ್ಲ.

ರಶ್ಮಿಕಾ ಮಂದಣ್ಣ ನಟನೆಯ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ. ಸಕ್ಸಸ್ ಮೀಟ್ ಮಾಡಿ ಎಲ್ಲರಿಗೂ ಚಿತ್ರತಂಡ ಧನ್ಯವಾದ ತಿಳಿಸಿದೆ. ಈ ಸಂಭ್ರಮಾಚರಣೆಗೆ ನಟ ವಿಜಯ್ ದೇವರಕೊಂಡ ಮುಖ್ಯ ಅತಿಥಿಯಾಗಿ ಬಂದಿದ್ದರು. ವೇದಿಕೆ ಬಳಿ ಬರುತ್ತಿದ್ದಂತೆ ರಶ್ಮಿಕಾ ಕೈಗೆ ವಿಜಯ್ ಮುತ್ತು ಕೊಟ್ಟಿದ್ದಾರೆ. ಕೂಡಲೇ ಅಭಿಮಾನಿಗಳು ಓಹ್ ಎಂದು ಕಿರುಚಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

Vijay Deverakonda s Hand Kiss to Rashmika Mandanna at The Girlfriend Success Meet Goes Viral

'ದಿ ಗರ್ಲ್‌ಫ್ರೆಂಡ್' ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ಬಗ್ಗೆ ರಶ್ಮಿಕಾ ಮಂದಣ್ಣ ವೇದಿಕೆಯಲ್ಲಿ ಮಾತನಾಡಿದ್ದಾರೆ. ಕೊನೆಗೆ ವಿಜಯ್ ದೇವರಕೊಂಡಗೆ ಧನ್ಯವಾದ ತಿಳಿಸಿದ್ದಾರೆ. "ವಿಜ್ಜು ಮೊದಲ ದಿನದಿಂದಲೂ ನೀನು ಈ ಸಿನಿಮಾ ಜೊತೆಗಿದ್ದೀಯಾ, ಸಿನಿಮಾ ಗೆದ್ದ ಬಳಿಕ ಕೂಡ ನೀನು ಇಲ್ಲಿಗೆ ಬಂದಿದ್ದೀಯಾ. ನನಗೆ ಇಡೀ ಸಿನಿಮಾ ನೀನು ಜೊತೆಗಿದ್ದೆ. ಪ್ರತಿಯೊಬ್ಬರ ಜೀವನದಲ್ಲಿ ವಿಜಯ್ ದೇವರಕೊಂಡ ಇರ್ಬೇಕು(ಬೆಂಬಲವಾಗಿ ನಿಲ್ಲುವವರು) ಎಂದು ನಾನು ಭಾವಿಸ್ತೀನಿ. ಅದು ಆಶೀರ್ವಾದ" ಎಂದಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಚರ್ಚೆ ಇಂದು ನಿನ್ನೆಯದಲ್ಲ. 'ಡಿಯರ್ ಕಾಮ್ರೇಡ್' ಸಿನಿಮಾ ಸಮಯದಿಂದಲೂ ಶುರುವಾಗಿತ್ತು. ರಕ್ಷಿತ್ ಶೆಟ್ಟಿ ಜೊತೆಗಿನ ನಿಶ್ಚಿತಾರ್ಥ ಮುರಿದುಬಿತ್ತು ಎಂದ ಮೇಲೆ ಈ ವದಂತಿ ಮತ್ತಷ್ಟು ಹೆಚ್ಚಾಗಿತ್ತು. ವಿಜಯ್ ಆಪ್ತ ಬಳಗದಲ್ಲಿ ರಶ್ಮಿಕಾ ಗುರ್ತಿಸಿಕೊಂಡಿದ್ದು ಅವರ ಮನೆಗೂ ಹೋಗಿಬರುತ್ತಾರೆ. ಕುಟುಂಬದ ಸಂಭ್ರಮಾಚರಣೆಯಲ್ಲಿ ಭಾಗಿ ಆಗುತ್ತಿರುತ್ತಾರೆ.

ವಿಜಯ್ ದೇವರಕೊಂಡ ಸ್ನೇಹಿತರ ಬಳಗದಲ್ಲಿ ರಶ್ಮಿಕಾ ಸೇರಿಕೊಂಡಿದ್ದಾರೆ. ಆಗಾಗ್ಗೆ ಎಲ್ಲರೂ ಸೇರಿ ಪ್ರವಾಸ ಕೈಗೊಳ್ಳುತ್ತಾರೆ. ಇಬ್ಬರೂ ರೆಸ್ಟೋರೆಂಟ್‌ಗಳಲ್ಲಿ ಕಾಣಿಸಿಕೊಂಡಿರುವುದು ಇದೆ. ಇದನ್ನೆಲ್ಲಾ ನೋಡಿ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಚರ್ಚೆ ಶುರುವಾಗಿತ್ತು. ತಿಂಗಳ ಹಿಂದೆ ಇಬ್ಬರು ಉಂಗುರ ಬದಲಿಸಿಕೊಂಡು ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಇದನ್ನು ಇಬ್ಬರೂ ಖಂಡಿಸಲು ಇಲ್ಲ.

ಫೆಬ್ರವರಿ 26ರಂದು ಉದಯಪುರದಲ್ಲಿ ವಿಜಯ್- ರಶ್ಮಿಕಾ ಡೆಸ್ಟಿನೇಷನ್ ವೆಡ್ಡಿಂಗ್ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಮದುವೆ ತಯಾರಿ ಶುರುವಾಗಿದ್ದು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಸಿಹಿಸುದ್ದಿ ಹಂಚಿಕೊಳ್ಳುತ್ತಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ. 'ಗೀತಾಗೋವಿಂದಂ' ಹಾಗೂ 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇಬ್ಬರ ಲಿಪ್‌ಲಾಕ್ ದೃಶ್ಯಗಳು ವೈರಲ್ ಆಗಿತ್ತು.

'ದಿ ಗರ್ಲ್‌ಫ್ರೆಂಡ್' ಸಕ್ಸಸ್ ಮೀಟ್‌ನಲ್ಲಿ ವಿಜಯ್ ದೇವರಕೊಂಡ ಮಾತನಾಡಿ "ರಶ್ಮಿಕಾ ನಿಜ ಜೀವನದಲ್ಲಿ ಕೂಡ ಚಿತ್ರದ ಪಾತ್ರದಂತೆ ಭೂಮಾದೇವಿ. ಬಹಳ ಮುಗ್ಧ ಹುಡುಗಿ. ಎಲ್ಲರಿಗೂ ಸಹಾಯವಾಗಿ ನಿಲ್ಲತ್ತಾಳೆ. ಯಾರಿಗೂ ತೊಂದರೆ ಕೊಡಲು ಬಯಸಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇರ್ತಾಳೆ. ಈ ಚಿತ್ರದಲ್ಲಿ ಆಕೆಗೆ ಅಂಥದ್ದೇ ಪಾತ್ರ ಸಿಕ್ಕಿದೆ. ನನ್ನನ್ನು ಯಾರಾದರೂ ಕೆಣಕಿದರೆ ತಿರುಗಿಬೀಳ್ತೀನಿ. ಆದರೆ ರಶ್ಮಿಕಾ ಆ ರೀತಿ ಅಲ್ಲ, ಪ್ರಪಂಚ ಎಷ್ಟೇ ಮಾತನಾಡಿದರೂ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇದ್ದು ಬಿಡ್ತಾಳೆ" ಎಂದಿದ್ದಾರೆ.

ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ 'ದಿ ಗರ್ಲ್‌ಫ್ರೆಂಡ್' ಚಿತ್ರ ನಿರ್ಮಾಣವಾಗಿದೆ. 5 ದಿನಕ್ಕೆ ಸಿನಿಮಾ 20 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗ್ತಿದೆ. ಮಹಿಳಾ ಪ್ರೇಕ್ಷಕರಿಂದ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಕೆಲವರು ಇದು ತಮ್ಮದೇ ಕಥೆ ಎಂದು ಭಾಸವಾಗುತ್ತಿದ್ದಾರೆ. ಅಷ್ಟರಮಟ್ಟಿಗೆ ಸಿನಿಮಾ ಗಮನ ಸೆಳೆಯುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X