Kushi Trailer: "ಗಂಡ ಹೇಗಿರಬೇಕೋ ಈ ಸಮಾಜಕ್ಕೆ ತೋರಿಸ್ತೀನಿ"

ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ 'ಖುಷಿ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಶಿವ ನಿರ್ವಣ ನಿರ್ದೇಶನದ ಈ ರೊಮ್ಯಾಂಟಿಕ್ ಎಂಟರ್‌ಟೈನರ್ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಇತ್ತೀಚೆಗೆ ಪೋಸ್ಟರ್, ಸಾಂಗ್ಸ್‌ನಿಂದ ಸದ್ದು ಮಾಡ್ತಿದ್ದ 'ಖುಷಿ' ಸಿನಿಮಾ ಇದೀಗ ಟ್ರೈಲರ್‌ನಿಂದ ಮತ್ತಷ್ಟು ಗಮನ ಸೆಳೆದಿದೆ.

ಜಯರಾಂ, ಸಚಿನ್ ಖಡೇಕರ್, ಮುರಳಿ ಶರ್ಮಾ, ಜ್ಯೂಲಿ ಲಕ್ಷ್ಮಿ, ಅಲಿ, ರೋಹಿಣಿ, ವೆನ್ನಲ ಕಿಶೋರ್ ಸೇರಿದಂತೆ ದೊಡ್ಡ ತಾರಾಗಣ 'ಖುಷಿ' ಚಿತ್ರದಲ್ಲಿದೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ಸಮಂತಾ ಮಯೋಸೈಟಿಸ್ ಸಮಸ್ಯೆ ತುತ್ತಾಗುತ್ತಿದ್ದಂತೆ ಸಿನಿಮಾ ಚಿತ್ರೀಕರಣ ನಿಂತು ಹೋಗಿತ್ತು. ಇತ್ತೀಚೆಗೆ ಮತ್ತೆ ಚಿತ್ರೀಕರಣ ಆರಂಭಿಸಿ ಮುಗಿಸಲಾಗಿತ್ತು. ಸೆಪ್ಟೆಂಬರ್ 1ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ.

Vijay Deverakonda, Samantha Starrer Kushi Trailer Released

ಕಾಶ್ಮೀರಕ್ಕೆ ಹೋಗುವ ಕ್ರಿಶ್ಚಿಯನ್ ಯುವಕ ವಿಪ್ಲವ್ ಹಾಗೂ ಮುಸ್ಲಿಂ ಯುವತಿ ಬೇಗಂ ಭೇಟಿಯಾಗುತ್ತದೆ. ಆಕೆಯನ್ನು ನೋಡಿ ನಾಯಕ ಪ್ರೀತಿಯಲ್ಲಿ ಬೀಳುತ್ತಾನೆ. ನಂತರ ಆಕೆ ಮುಸ್ಲಿಂ ಅಲ್ಲ ಬ್ರಾಹ್ಮಣ ಕುಟುಂಬದ ಯುವತಿ ಅನ್ನೋದು ಗೊತ್ತಾಗುತ್ತದೆ. ಅಂದರೆ ಇದು ಕ್ರಿಶ್ಚಿಯನ್ ಯುವಕ ಹಾಗೂ ಹಿಂದೂ ಯುವತಿಯ ಪ್ರೇಮಕಥೆ ಅನ್ನೋದು ಅರ್ಥವಾಗುತ್ತದೆ. ಇಬ್ಬರ ಮನೆಯಲ್ಲೂ ಮದುವೆಗೆ ಒಪ್ಪುವುದಿಲ್ಲ.

ನಾಯಕಿಯ ತಂದೆಯಂತೂ ಇವರಿಬ್ಬರು ಮದುವೆ ಆದರೆ ಭಾರೀ ಸಮಸ್ಯೆಗಳಾಗುತ್ತದೆ ಎಂದು ಭವಿಷ್ಯ ನುಡಿಯುತ್ತಾನೆ. ಆದರೆ ಅದನ್ನೆಲ್ಲಾ ಮೀರಿ ಇಬ್ಬರು ಮದುವೆ ಆಗಿ ಒಂದು ವರ್ಷ ನಾವು ಆದರ್ಶ ದಂಪತಿಗಳಾಗಿ ಬದುಕಿ ತೋರಿಸುತ್ತೇವೆ ಎಂದು ಸವಾಲು ಹಾಕಿ ಮದುವೆ ಆಗುತ್ತಾರೆ. ಮದುವೆ ನಂತರ ಇಬ್ಬರ ನಡುವೆ ನಡೆಯುವ ಕಿರಿಕ್, ಜಗಳ ಇದನ್ನೇ ತಮಾಷೆಯಾಗಿ ಕಟ್ಟಿಕೊಡುವ ಕೆಲಸ ಮಾಡಲಾಗಿದೆ. ಇವತ್ತಿನ ಯುವ ಜನತೆ ಮದುವೆಯಾಗಿ ಭಿನ್ನಾಭಿಪ್ರಾಯಗಳಿಂದ ಏನೆಲ್ಲಾ ರಾದ್ಧಾಂತ ಆಗುತ್ತದೆ ಅನ್ನೋದೇ ಖುಷಿ ಸಿನಿಮಾ ಕಥೆ.

Vijay Deverakonda, Samantha Starrer Kushi Trailer Released

'ಖುಷಿ' ಟ್ರೈಲರ್ ನೋಡಿದರೆ ಸಿನಿಮಾ ಕಥೆ ಏನು ಎನ್ನುವುದು ಅರ್ಥವಾಗಿ ಬಿಡುತ್ತದೆ. ಆದರೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಜೋಡಿ ಹೇಗೆ ಈ ಕಥೆಯನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಹೇಗೆ ಪ್ರೇಕ್ಷಕರನ್ನು ರಂಜಿಸುತ್ತಾರೆ? ಅನ್ನುವುದನ್ನು ಕಾದು ನೋಡಬೇಕಿದೆ. ಇತ್ತೀಚೆಗೆ ಸಮಂತಾ ನಟಿಸಿದ ಸಿನಿಮಾಗಳು ಅಷ್ಟಾಗಿ ಸದ್ದು ಮಾಡಲಿಲ್ಲ. 'ಯಶೋದ' ಹಾಗೂ 'ಶಾಕುಂತಲಂ' ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಸೋಲುಂಡಿದ್ದವು.

'ಲೈಗರ್' ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುವ ವಿಜಯ್ ದೇವರಕೊಂಡ ಕನಸು ಈಡೇರಲೇಯಿಲ್ಲ. ಕಳೆದ ವರ್ಷ ಆಗಸ್ಟ್ 25ಕ್ಕೆ ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಬಂದು ಸಿನಿಮಾ ಮೇಲೇಳಲೇ ಇಲ್ಲ. ಹಾಗಾಗಿ ವಿಜಯ್, ಸಮಂತಾ ಇಬ್ಬರು ಸೋಲಿನ ಸುಳಿಗೆ ಸಿಲುಕಿದ್ದು 'ಖುಷಿ' ಸಿನಿಮಾ ಮೂಲಕ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

More from Filmibeat

English summary
Vijay Deverakonda, Samantha Starrer Kushi Trailer Released
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X