'ಲೈಗರ್​' ಸೋಲಿನ ಬಳಿಕ ಖಡಕ್​ ಲುಕ್​ನಲ್ಲಿ ವಿಜಯ್​ ದೇವರಕೊಂಡ: ಸಿಂಗಲ್​ ಪ್ಲೇಯರ್​ ಹಿಂದಿನ ಅರ್ಥವೇನು..?

ಅರ್ಜುನ್​ ರೆಡ್ಡಿ ಖ್ಯಾತಿಯ ವಿಜಯ್​ ದೇವರಕೊಂಡ ಹಾಗೂ ಬಾಲಿವುಡ್​ ಬೆಡಗಿ ಅನನ್ಯಾ ಪಾಂಡೆ ಅಭಿನಯದ 'ಲೈಗರ್'​ ಚಿತ್ರ ನಿರೀಕ್ಷಿಸಿದ ಮಟ್ಟಕ್ಕೆ ಹಿಟ್​ ಆಗದೇ ಸೋಲು ಕಂಡಿತ್ತು. ಚಿತ್ರದ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದ ಪ್ರೇಕ್ಷಕರಿಗೆ ತೀವ್ರ ನಿರಾಸೆಯಾಗಿತ್ತು. ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿದ ಲೈಗರ್​ ಸೋಲಿನ ಬಳಿಕ ನಟ ವಿಜಯ್​ ದೇವರಕೊಂಡ ಮೊದಲ ಬಾರಿಗೆ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.

ವಿಜಯ್​ ದೇವರಕೊಂಡ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಬ್ಲ್ಯಾಕ್​ ಸೂಟ್​ ಧರಿಸಿರುವ ಫೋಟೋವೊಂದನ್ನು ಶೇರ್​ ಮಾಡಿದ್ದು, ಸಖತ್​ ಡ್ಯಾಶಿಂಗ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಗೋಲ್ಡ್​ ಬ್ಯಾಗ್ರೌಂಡ್​ನಲ್ಲಿ ಬ್ಲ್ಯಾಕ್​ ಸೂಟ್​ನಲ್ಲಿ ಕಾಣಿಸಿಕೊಂಡಿರುವ ವಿಜಯ್​ ದೇವರಕೊಂಡ ನೋಡುಗರ ಕಣ್ಣುಕುಕ್ಕುವಂತೆ ಲುಕ್​ ಕೊಟ್ಟಿದ್ದಾರೆ. ಫೋಟೋ ಜೊತೆಗೆ ವಿಜಯ್​ ದೇವರಕೊಂಡ ನೀಡಿರುವ ಕ್ಯಾಪ್ಶನ್​ ಇಂಟ್ರಸ್ಟಿಂಗ್ ಆಗಿದ್ದು, ಈ ಬರಹದ ಹಿಂದಿನ ಅರ್ಥ ಏನಿರಬಹುದು ಎನ್ನುವ ಕುತೂಹಲ ಮೂಡಿದೆ.

ಫೋಟೋ ಜೊತೆಗೆ ವಿಜಯ್​ ದೇವರಕೊಂಡ ಸಿಂಗಲ್​ ಪ್ಲೇಯರ್​ ಎಂದು ಬರೆದುಕೊಂಡಿದ್ದು, ಅಭಿಮಾನಿಗಳಲ್ಲಿ ನೂರಾರು ಪ್ರಶ್ನೆ ಹುಟ್ಟುಹಾಕಿದೆ. ಲೈಗರ್​ ಸೋಲಿನ ಬಳಿಕ ವಿಜಯ್​ ದೇವರಕೊಂಡ ಸಖತ್​ ಟ್ರೋಲ್​ ಆಗಿದ್ದರು. ಜೊತೆಗೆ ಒಂದಿಷ್ಟು ಸೆಲೆಬ್ರೆಟಿಗಳು ಕೂಡ ಲೈಗರ್​ ಚಿತ್ರದ ಬಗ್ಗೆ ವಿಜಯ್​ ದೇವರಕೊಂಡ ಬಗ್ಗೆ ಲೇವಡಿ ಮಾಡಿದ್ದರು. ಅದರಲ್ಲೂ ನಿರೂಪಕಿ ಅನುಸೂಯ ಭಾರಧ್ವಜ್​ ಅಂತೂ ವಿಜಯ್​ ದೇವರಕೊಂಡ ಅವರನ್ನು ವ್ಯಂಗ್ಯ ಮಾಡಿ ಕರ್ಮ ಹಿಂತಿರುಗಿಕೊಡುತ್ತದೆ ಎಂದು ಪರೋಕ್ಷವಾಗಿ ಟಾಂಗ್​ ಕೊಟ್ಟಿದ್ದರು. ಹೀಗಾಗಿ ಸದ್ಯ ಸಿಂಗಲ್​ ಪ್ಲೇಯರ್​ ಎಂದು ಖಡಕ್​ ಲುಕ್​ ಫೋಟೋ ಹಂಚಿಕೊಂಡಿರುವ ದೇವರಕೊಂಡ ಯಾವ ವ್ಯಂಗ್ಯಕ್ಕೂ, ಯಾವ ಕಮೆಂಟ್​ಗೂ ಡೋಂಟ್​ ಕೇರ್​ ಎನ್ನುವ ಪ್ರತ್ಯುತ್ತರ ಕೊಟ್ಟಿಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ಇನ್ನು ವಿಜಯ್​ ದೇವರಕೊಂಡ ಮದುವೆ ಬಗ್ಗೆ ಕೂಡ ಕೆಲ ಗಾಸಿಪ್​ಗಳು ಹರಿದಾಡುತ್ತಿದ್ದು, ಸಿಂಗಲ್​ ಪ್ಲೇಯರ್​ ಎಂಬ ಕ್ಯಾಪ್ಷನ್​ ಮೂಲಕ ವಿಜಯ್​ ದೇವರಕೊಂಡ ಈ ವಿಚಾರಕ್ಕೂ ತೆರೆಳೆದಿರಬಹುದು.

Vijay Deverakonda Shares First Instagram Post After Liger Flops

ಇನ್ನು ಕೇವಲ ಇನ್ಸ್ಟಾಗ್ರಾಮ್​ನಲ್ಲೇ 17.4 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ವಿಜಯ್​ ದೇವರಕೊಂಡ ಲೈಗರ್​ ಸೋಲಿನ ಬಳಿಕ ಸೋಶಿಯಲ್​ ಮೀಡಿಯಾದಿಂದ ಅಂತರ ಕಾಯ್ದುಕೊಂಡಿದ್ದರು. ಕೆಲ ದಿನಗಳ ವಿರಾಮದ ನಂತರ ವಿಜಯ್​ ಫೋಟೋ ಹಂಚಿಕೊಂಡಿದ್ದು, 1.2 ಅಧಿಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಮಚ್ಚಿನ ನಟನ ಫೋಟೋಗೆ ಸಾಲು ಸಾಲು ಕಮೆಂಟ್​ಗಳು ಹರಿದು ಬಂದಿದ್ದು, ಒನ್​ ಮ್ಯಾನ್​ ಆರ್ಮಿ, ಕಮ್​ ಬ್ಯಾಕ್​ ಸ್ಟ್ರಾಂಗ್​ ಹೀರೋ ಎಂದು ಅಭಿಮಾನಿಗಳು ಕಾಮೆಂಟ್​ ಮಾಡಿದ್ದಾರೆ.

More from Filmibeat

English summary
Vijay Deverakonda Shares First Instagram Post After Liger Flops with captioned Single player. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X