VD12 first look: 'ಲೈಗರ್' ಸೋಲು.. ಅರ್ಧಕ್ಕೆ ನಿಂತ 'ಖುಷಿ' & 'JGM'.. ಕೊನೆಗೂ ದೇವರಕೊಂಡ ಹೊಸ ಸಿನಿಮಾ ಘೋಷಣೆ

ಒಂದೇ ಒಂದು ಸೋಲಿನಿಂದ ವಿಜಯ್ ದೇವರಕೊಂಡ ಪಾತಾಳಕ್ಕೆ ಬಿದ್ದಂತಾಗಿದೆ. ಕಳೆದ 5 ತಿಂಗಳಿನಿಂದ ಯಾವುದೇ ಸಿನಿಮಾ ಇಲ್ಲದೇ ಸೈಲೆಂಟ್ ಆಗಿದ್ದ ವಿಜಯ್ ದೇವರಕೊಂಡ ಕೊನೆಗೂ ಹೊಸ ಸಿನಿಮಾ ಘೋಷಿಸಿದ್ದಾರೆ.

'ಲೈಗರ್' ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎನ್ನುವ ವಿಜಯ್ ದೇವರಕೊಂಡ ಆಸೆಗೆ ತಣ್ಣೀರು ಎರಚಿದಂತಾಗಿತ್ತು. ಮೊದಲ ಶೋನಿಂದಲೇ ನೆಗೆಟಿವ್ ಟಾಕ್‌ ಪಡೆದುಕೊಂಡಿದ್ದ ಸಿನಿಮಾ ಕೊನೆಗೂ ಮೇಲೆ ಏಳಲೇಯಿಲ್ಲ. ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಿನಿಮಾದಿಂದ ಸಾಕಷ್ಟು ನಷ್ಟ ಅನುಭವಿಸುವಂತಾಗಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ನಿರ್ದೇಶಕ ಪುರಿ ಜಗನ್ನಾಥ್‌ಗೆ ಮರೆಯಲಾಗದ ಪೆಟ್ಟು ಕೊಟ್ಟುಬಿಟ್ಟಿತ್ತು. ಆಗಸ್ಟ್ 25ಕ್ಕೆ 'ಲೈಗರ್' ಸಿನಿಮಾ ರಿಲೀಸ್ ಆಗಿತ್ತು. ಆ ನಂತರ ವಿಜಯ್ ದೇವರಕೊಂಡ ಮತ್ತಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ.

'ಲೈಗರ್' ನಂತರ ವಿಜಯ್ 'ಖುಷಿ' ಚಿತ್ರದಲ್ಲಿ ನಟಿಸ್ತಿದ್ದಾರೆ. ಆ ನಂತರ ಮುಂದೇನು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ತಮ್ಮ 12ನೇ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

VD12 ಸಿನಿಮಾ ಘೋಷಣೆ

VD12 ಸಿನಿಮಾ ಘೋಷಣೆ

ಗೌತಮ್ ತಿನ್ನನೂರು ನಿರ್ದೇಶನದ ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸಲಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಸಮೇತ ಆ ವಿಚಾರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಟಾಲಿವುಡ್ ಅರ್ಜುನ್ ರೆಡ್ಡಿ ಪೊಲೀಸ್ ಆಫೀಸರ್ ಆಗಿ ನಟಿಸೋದು ಪಕ್ಕಾ ಆಗಿದೆ. ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ. ಇದು ದೇವರಕೊಂಡ ನಟನೆಯ 12ನೇ ಸಿನಿಮಾ. ಹಾಗಾಗಿ VD12 ಎನ್ನುವ ಟೆಂಟಿಟಿವ್ ಟೈಟಲ್‌ನಲ್ಲಿ ಸಿನಿಮಾ ಶುರುವಾಗಲಿದೆ. ನಾಗ ವಂಶಿ ಹಾಗೂ ಸಾಯಿ ಸೌಜನ್ಯ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ಬರಲಿದೆ.

ಚರಣ್ ಮಾಡಬೇಕಿದ್ದ ಚಿತ್ರ?

ಚರಣ್ ಮಾಡಬೇಕಿದ್ದ ಚಿತ್ರ?

'ಮಳ್ಳಿ ರಾವ' ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಗೌತಮ್ ತಿನ್ನನೂರಿ 'ಜರ್ಸಿ' ಎನ್ನುವ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದರು. ಇದೇ ಚಿತ್ರವನ್ನು ಬಾಲಿವುಡ್‌ಗೂ ರೀಮೆಕ್ ಮಾಡಿ ಗೆದ್ದಿದ್ದರು. ಗೌತಮ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ರಾಮ್‌ಚರಣ್ ತೇಜಾ ನಟಿಸ್ತಾರೆ ಎನ್ನುವ ಗುಸುಗುಸು ಕೇಳಿಬರ್ತಿತ್ತು. ಆದರೆ ಈಗ ಅದೇ ಕಥೆಯಲ್ಲಿ ವಿಜಯ್ ದೇವರಕೊಂಡ ನಟಿಸ್ತಿದ್ಧಾರೆ ಎನ್ನಲಾಗ್ತಿದೆ. ನೆಚ್ಚಿನ ನಟನನ್ನು ಪೊಲೀಸ ಆಫೀಸರ್ ರೋಲ್‌ನಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

 'JGM' ಕಥೆ ಏನಾಯ್ತು?

'JGM' ಕಥೆ ಏನಾಯ್ತು?

ಹೀರೊ ವಿಜಯ್ ದೇವರಕೊಂಡಗೆ 'ಲೈಗರ್‌' ನಿಜಕ್ಕೂ ದೊಡ್ಡಮಟ್ಟದ ಸೋಲು ತಂದೊಡ್ಡಿತ್ತು. ಸಿನಿಮಾ ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನಿಮಾ ಮೂಲಕ ಬಾಲಿವುಡ್‌ಗೂ ಟಾಲಿವುಡ್ ರೌಡಿ ಭರ್ಜರಿ ಆಗಿ ಎಂಟ್ರಿ ಕೊಡುತ್ತಾರೆ ಎನ್ನಲಾಗಿತ್ತು. ಆದರೆ ಎಲ್ಲವೂ ಠುಸ್ ಪಟಾಕಿ ಆಗಿತ್ತು. 'ಲೈಗರ್‌' ನಂತರ ಪುರಿ ಜಗನ್ನಾಥ್ ನಿರ್ದೇಶನದಲ್ಲೇ 'JGM' ಎನ್ನುವ ಸಿನಿಮಾ ಶುರುವಾಗಿತ್ತು. ದೊಡ್ಡದಾಗಿ ಮುಹೂರ್ತ ಕೂಡ ಮಾಡಿದ್ದರು. ಚಿತ್ರದಲ್ಲಿ ಸೈನಿಕನ ವೇಷದಲ್ಲಿ ದೇವರಕೊಂಡ ಮಿಂಚಿದ್ದರು. ಆದರೆ ಈಗ ಆ ಸಿನಿಮಾ ಸುದ್ದಿನೇ ಇಲ್ಲ.

ಶೀಘ್ರದಲ್ಲೇ 'ಖುಷಿ' ಶೂಟಿಂಗ್

ಶೀಘ್ರದಲ್ಲೇ 'ಖುಷಿ' ಶೂಟಿಂಗ್

'JGM' ಮಾತ್ರವಲ್ಲ ವಿಜಯ್ ದೇವರಕೊಂಡ ಹಾಗೂ ಸಮಂತಾ ನಟನೆಯ 'ಖುಷಿ' ಸಿನಿಮಾ ಶೂಟಿಂಗ್ ಕೂಡ ಅರ್ಧಕ್ಕೆ ನಿಂತು ಹೋಗಿದೆ. ಸ್ಯಾಮ್ ಮಯೋಸೈಟಿಸ್ ಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೆ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಶೀಘ್ರದಲ್ಲೇ ಸಿನಿಮಾ ಸೆಟ್‌ಗೆ ಸಮಂತಾ ಬರುವ ಸಾಧ್ಯತೆಯಿದೆ. ಒಟ್ನಲ್ಲಿ ಸೋಲಿನ ಸುಳಿಗೆ ಸಿಲುಕಿರುವ ವಿಜಯ್ ದೇವರಕೊಂಡ ಫಿನಿಕ್ಸ್ ರೀತಿ ಎದ್ದು ಬರುವ ಲೆಕ್ಕಾಚಾರದಲ್ಲಿದ್ದಾರೆ.

More from Filmibeat

English summary
Vijay Deverakonda teams up with Gowtam Tinnanuri for his next film VD12. Sithara Entertainments are set to bankroll project in Big scale and it will be released in 5 laguages. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X