'ಖುಷಿ' ಯಶಸ್ಸನ್ನು ಕೋಟಿ ರೂಪಾಯಿ ಹಂಚುವ ಮೂಲಕ ಸಂಭ್ರಮಿಸಲಿದ್ದಾರೆ ವಿಜಯ್ ದೇವರಕೊಂಡ!
ತಮ್ಮ ಸಿನಿಮಾ ಯಶಸ್ಸು ಗಳಿಸಿದರೇ ಪಟಾಕಿ ಹೊಡೆಯುವುದು, ನಟ - ನಟಿಯರಿಗೆ ಅಭಿಷೇಕ, ದೊಡ್ಡ ಪಾರ್ಟಿ ಮಾಡುವುದು ಹೀಗೆ ಹಲವು ರೀತಿಯಲ್ಲಿ ಸಂಭ್ರಮಿಸುತ್ತಾರೆ. ಆದರೆ, ಖುಷಿ ಸಿನಿಮಾ ಸಂಭ್ರಮದಲ್ಲಿರುವ ನಟ ವಿಜಯ್ ದೇವರಕೊಂಡ ತಮ್ಮ ಚಿತ್ರದ ಯಶಸ್ಸನ್ನು ವಿಭಿನ್ನವಾಗಿ ಆಚರಿಸಲಿದ್ದಾರೆ.
ಹೌದು, ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ವಿಜಯ ದೇವಕೊಂಡ ಅವರಿಗೆ ಖುಷಿ ಸಿನಿಮಾ ಮತ್ತೆ ಫಾರ್ಮ್‌ಗೆ ಮರಳಿಸಿದೆ. ಸಿನಿಮಾ ಗಲ್ಲಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದು, ನಟ ತನ್ನ ಇಮೇಜ್ ವಾಪಸ್ ಪಡೆದಿದ್ದಾರೆ. ಖುಷಿ ಚಿತ್ರದ ಯಶಸ್ಸನ್ನು ಆಚರಿಸಲು ಸೋಮವಾರ ವಿಶಾಖಪಟ್ಟಣಂನಲ್ಲಿ ಕಾರ್ಯಕ್ರಮ ನಡೆದಿದೆ. ಈ ವೇಳೆ ವಿಜಯ್ ಮಹತ್ವದ ಘೋಷಣೆ ಮಾಡಿದ್ದಾರೆ.

ಒಂದು ಕೋಟಿ ಹಂಚಲಿದ್ದಾರೆ ನಟ ವಿಜತ್ ದೇವರಕೊಂಡ!
ಖುಷಿ ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು ಇದರಲ್ಲಿ ವಿಜಯ್ ಜೊತೆ ಸಮಂತಾ ರುತ್ ಪ್ರಭು ನಟಿಸಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಖುಷಿ ಸೆಪ್ಟೆಂಬರ್ 1 ರಂದು ಬಹು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಮಿಶ್ರ ವಿಮರ್ಶೆಗಳ ಹೊರತಾಗಿಯೂ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿದೆ.
ವಿಶಾಖಪಟ್ಟಣಂನಲ್ಲಿ ಸಮಾರಂಭದಲ್ಲಿ ತಮ್ಮ ಅಭಿಮಾನಿಗಳಿಗೆ ಆಶ್ಚರ್ಯದ ವಿಷಯ ಘೋಷಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ತಮ್ಮ ಸಂತೋಷವನ್ನು ಮಾತ್ರ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಇದರ ಜೊತೆಗೆ ಚಿತ್ರದಿಂದ ತಾವು ಗಳಿಸಿರುವ ಹಣವನ್ನು ಸಹ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 100 ಕುಟುಂಬಗಳಿಗೆ ತಲಾ 1 ಲಕ್ಷವನ್ನು ವಿತರಿಸುವುದಾಗಿ ಘೋಷಿಸಿದ್ದಾರೆ.
ಸೆಪ್ಟೆಂಬರ್ 4 ರಂದು ವಿಜಯ್ ದೇವರಕೊಂಡ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಿ ಹೈದರಾಬಾದ್‌ನಲ್ಲಿ ಥಿಯೇಟರ್‌ಗಳಿಗೆ ಭೇಟಿ ನೀಡಿದ ನಂತರ, ವಿಶಾಖಪಟ್ಟಣಂನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಖುಷಿ ಸಂಭಾವನೆಯಿಂದ 100 ಕುಟುಂಬಗಳಿಗೆ 1 ಕೋಟಿ ರೂ.ಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೂ 'ಖುಷಿ' ಹರಡಿಸಲು ಬಯಸಿರುವುದಾಗಿ ತಿಳಿಸಿದ್ದಾರೆ.

"ನೀವು ಸಂತೋಷವಾಗಿದ್ದೀರಿ ಮತ್ತು ನಾನು ಸಂತೋಷವಾಗಿದ್ದೇನೆ. ನಾನು ಏನೋ ಯೋಚಿಸುತ್ತಿದ್ದೇನೆ. ನಾನು ಯೋಚಿಸುತ್ತಿರುವುದು ಸರಿಯೋ ತಪ್ಪೋ ಎಂದು ನನಗೆ ತಿಳಿದಿಲ್ಲ. ಆದರೆ, ನಾನು ಅದನ್ನು ಮಾಡದಿದ್ದರೆ ನನಗೆ ನಿದ್ದೆ ಬರುವುದಿಲ್ಲ. ಹೀಗಾಗಿ ನಿಮ್ಮೊಂದಿಗೆ 'ಖುಷಿ' ಹಂಚಲು ನಾನು ನನ್ನ 'ಖುಷಿ' ಸಂಬಳದಿಂದ 100 ಕುಟುಂಬಗಳಿಗೆ 1 ಕೋಟಿ ರೂಪಾಯಿ ನೀಡುತ್ತೇನೆ" ಎಂದು ವಿಜಯ್ ದೇವಕೊಂಡ ಹೇಳಿದ್ದಾರೆ.
"ಅಗತ್ಯವಿರುವ 100 ಕುಟುಂಬಗಳನ್ನು ಆಯ್ಕೆ ಮಾಡುತ್ತೇನೆ. ಮುಂದಿನ 10 ದಿನಗಳಲ್ಲಿ ಅವರಿಗೆ ತಲಾ ರೂ 1 ಲಕ್ಷ ಚೆಕ್ ವಿತರಿಸುತ್ತೇನೆ. ನನ್ನ ಯಶಸ್ಸು, ನನ್ನ ಸಂತೋಷ ಮತ್ತು ನನ್ನ ಸಂಬಳವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕು" ಎಂದು ವೇದಿಕೆ ಮೇಲೆ ತಮ್ಮ ಆಸೆಯನ್ನು ತಿಳಿಸಿದ್ದಾರೆ.
"ನಾಳೆ ನನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಫಾರ್ಮ್ ಅನ್ನು ಹಂಚಿಕೊಳ್ಳುತ್ತೇನೆ. ನಾನು ಇನ್ನೂ ಪೂರ್ತಿ ಪ್ಲ್ಯಾನ್ ಮಾಡಿಲ್ಲ. ನಾನು ಫಾರ್ಮ್ ಅನ್ನು 'ಖುಷಿ ಹರಡುವುದು' ಅಥವಾ 'ದೇವರ ಕುಟುಂಬ' ಎಂದು ಹೆಸರಿನಲ್ಲಿ ಇಡಬೇಕು ಎಂದುಕೊಂಡಿದ್ದೇನೆ. ನಾನು ನೀಡುವ ಹಣದಿಂದ ಜನರು ತಮ್ಮ ಬಾಡಿಗೆ ಅಥವಾ ಶುಲ್ಕ ಅಥವಾ ಯಾವುದನ್ನಾದರೂ ಪಾವತಿಸಲು ಸಾಧ್ಯವಾದರೇ ನನಗೆ ಖುಷಿಯಾಗುತ್ತದೆ" ಎಂದು ಹೇಳಿದ್ದಾರೆ.
"ಇನ್ನು 10 ದಿನಗಳಲ್ಲಿ ಹೈದರಾಬಾದ್‌ನಲ್ಲಿ 'ಖುಷಿ' ಯಶಸ್ಸಿನ ಸಂಭ್ರಮಾಚರಣೆ ನಡೆಸಲಿದ್ದೇವೆ. ಅದಕ್ಕೂ ಮೊದಲು ನಾನು ಹಣ ಹಂಚಲು ಪ್ರಯತ್ನಿಸುತ್ತೇನೆ. 100 ಕುಟುಂಬಗಳಿಗೆ ಸಹಾಯ ಮಾಡುತ್ತೇನೆ. ಇದನ್ನು ಮಾಡಿದರೇ, ನಾನು ಸಿನಿಮಾದ ಯಶಸ್ಸನ್ನು ಆನಂದಿಸಲು ಸಾಧ್ಯ" ಎಂದಿದ್ದಾರೆ.
ಖುಷಿ ಸಿನಿಮಾ
ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿರುವ ಖುಷಿ ಒಂದು ರೊಮ್ಯಾಂಟಿಕ್ ಸಿನಿಮಾವಾಗಿದ್ದು, ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಪ್ಲವ್ ಮತ್ತು ಆರಾಧ್ಯ ಪಾತ್ರಗಳ ಮೂಲಕ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಎರಡನೇ ಬಾರಿಗೆ ಜೋಡಿಯಾಗಿದ್ದಾರೆ. ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿರುವ ಸಿನಿಮಾ ಕೇವಲ ಮೂರು ದಿನಗಳಲ್ಲಿ 70 ಕೋಟಿ ರೂಪಾಯಿಗಳನ್ನು ಗಳಿಸಿದೆ.


Click it and Unblock the Notifications











