ನನಗಿಂತ ಆತ ಬೆಸ್ಟ್ ಡಾನ್ಸರ್ ಎಂದು ಸ್ವತಃ ಅಲ್ಲು ಅರ್ಜುನ್ ಒಪ್ಪಿಕೊಳ್ತಾನೆ ಎಂದ ನಟ ಶಾಮ್! ಬಿದ್ದು ಬಿದ್ದು ನಕ್ಕ ಫ್ಯಾನ್ಸ್

ದಕ್ಷಿಣ ಭಾರತದ ಬೆಸ್ಟ್‌ ಡಾನ್ಸರ್ ಯಾರು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ನಡೆಯುವುದು ಸಾಮಾನ್ಯ. ಈ ವಿಷಯದಿಂದಾಗಿಯೇ ಒಂದೇ ಚಿತ್ರರಂಗದ ನಟರುಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇದು ಕೇವಲ ಒಂದು ಇಂಡಸ್ಟ್ರಿಗೆ ಮಾತ್ರ ಸೀಮಿತವಾಗಿರದೇ ತೆಲುಗು, ಕನ್ನಡ ಹಾಗೂ ತಮಿಳು ಚಿತ್ರರಂಗಗಳ ವಿವಿಧ ನಟರನ್ನು ಹೋಲಿಕೆ ಮಾಡುವ ಹಂತಕ್ಕೂ ಸಹ ಹಲವಾರು ಬಾರಿ ತಲುಪಿದೆ.

ಹೌದು, ತೆಲುಗಿನಲ್ಲಿ ಎನ್‌ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್ ಕಷ್ಟದ ಸ್ಟೆಪ್‌ಗಳನ್ನು ಲೀಲಾಜಾಲವಾಗಿ ಮಾಡುವ ಕಾರಣ ತೆಲುಗು ಸಿನಿ ಪ್ರೇಕ್ಷಕರು ಈ ಮೂವರಲ್ಲಿ ಓರ್ವರನ್ನು ದಕ್ಷಿಣ ಭಾರತದ ಬೆಸ್ಟ್ ಡಾನ್ಸರ್ ಎಂದು ವಾದಿಸುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಅಲ್ಲು ಅರ್ಜುನ್ ಅವರೇ ಸೌತ್ ಇಂಡಿಯಾದ ಬೆಸ್ಟ್ ಡಾನ್ಸರ್ ಎಂಬ ವಾದ ದೊಡ್ಡ ಮಟ್ಟದಲ್ಲಿ ಕೇಳಿಬಂದಿದೆ. ಇನ್ನು ಕನ್ನಡ ಚಿತ್ರರಂಗದ ವಿಚಾರಕ್ಕೆ ಬಂದರೆ ಈ ವಿಷಯವಾಗಿ ಕೇಳಿಬರುವ ಏಕೈಕ ಹೆಸರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.

ಅತ್ತ ತಮಿಳಿನಲ್ಲಿ ಧನುಷ್ ಹಾಗೂ ವಿಜಯ್ ಹೆಸರುಗಳನ್ನು ತಮಿಳು ಸಿನಿ ಪ್ರೇಕ್ಷಕರು ಉಲ್ಲೇಖಿಸುತ್ತಿರುತ್ತಾರೆ. ಹೆಚ್ಚಾಗಿ ಅಭಿಮಾನಿ ಬಳಗ ಹೊಂದಿರುವ ವಿಜಯ್ ಹೆಸರು ಸಹಜವಾಗಿ ಕೇಳಿಬರುತ್ತಲೇ ಇರುತ್ತದೆ. ಇನ್ನು ವಿಜಯ್ ಜತೆ ಇತರೆ ಚಿತ್ರರಂಗಗಳ ನಟರನ್ನು ಡಾನ್ಸ್ ವಿಚಾರವಾಗಿ ಹೋಲಿಸಿ ಈಗಾಗಲೇ ಸಾಕಷ್ಟು ಬಾರಿ ಚರ್ಚೆಗಳು ನಡೆದಿದ್ದು, ಈಗ ಇದೇ ವಿಚಾರದ ಕುರಿತಾಗಿ ನಟ ಶಾಮ್ ಕೂಡ ಮಾತನಾಡಿದ್ದು, ಇದು ತೆಲುಗು ಮಂದಿ ಕೋಪಕ್ಕೆ ಕಾರಣವಾಗಿದೆ ಹಾಗೂ ಟ್ರೋಲ್‌ಗೂ ಸಹ ಆಹಾರವಾಗಿದೆ.

ಅಲ್ಲು ಅರ್ಜುನ್ ನನ್ನ ತಮ್ಮನಂತೆ

ಅಲ್ಲು ಅರ್ಜುನ್ ನನ್ನ ತಮ್ಮನಂತೆ

ಇಂಡಿಯಾಗ್ಲಿಟ್ಸ್ ತೆಲುಗು ಯುಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಮಾತನಾಡಿದ ನಟ ಶಾಮ್ ಅಲ್ಲು ಅರ್ಜುನ್ ಈಗಲೂ ಸಂಪರ್ಕದಲ್ಲಿದ್ದಾರಾ ಎಂಬ ವಿಷಯ ಬಂದಾಗ ಉತ್ತರಿಸಿದ ನಟ ಶಾಮ್ "ಹೌದು, ಈಗಲೂ ಅಲ್ಲು ಅರ್ಜುನ್ ನನ್ನ ಸಂಪರ್ಕದಲ್ಲಿದ್ದಾನೆ. ಆತ ನನ್ನ ತಮ್ಮನಿದ್ದಂತೆ. ಆತ ಅತ್ಯುತ್ತಮ ಡಾನ್ಸರ್" ಎಂದು ಹೊಗಳಿದರು.

ವಿಜಯ್ ಬೆಸ್ಟ್ ಎಂದು ಸ್ವತಃ ಅಲ್ಲು ಅರ್ಜುನ್ ಒಪ್ಪಿಕೊಳ್ತಾನೆ!

ವಿಜಯ್ ಬೆಸ್ಟ್ ಎಂದು ಸ್ವತಃ ಅಲ್ಲು ಅರ್ಜುನ್ ಒಪ್ಪಿಕೊಳ್ತಾನೆ!

ಹೀಗೆ ಶಾಮ್ ಉತ್ತರ ನೀಡುತ್ತಿದ್ದಂಗೆ ಸಂದರ್ಶಕರು ಅಲ್ಲು ಅರ್ಜುನ್ ಹಾಗೂ ತಮಿಳಿನ ವಿಜಯ್ ಇಬ್ಬರಲ್ಲಿ ಯಾರು ಬೆಸ್ಟ್ ಡಾನ್ಸರ್ ಎಂಬ ಪ್ರಶ್ನೆಯನ್ನು ಹಾಕಿದರು. ಈ ಪ್ರಶ್ನೆಗೆ ಉತ್ತರಿಸಿದ ಶಾಮ್ ಖಂಡಿತವಾಗಿಯೂ ವಿಜಯ್ ಎಂದರು. ಈ ಪ್ರಶ್ನೆಯನ್ನು ಅಲ್ಲು ಅರ್ಜುನ್‌ಗೆ ಕೇಳಿದರೂ ಆತನೇ ಸ್ವತಃ ವಿಜಯ್ ತನಗಿಂತ ಬೆಸ್ಟ್ ಡಾನ್ಸರ್ ಎಂದು ಒಪ್ಪಿಕೊಳ್ತಾನೆ ಎಂದು ಹೇಳಿದರು.

ವಿಜಯ್ ಮೆಚ್ಚಿಸುವ ಕೆಲಸವಲ್ಲ, ಇದು ಸತ್ಯಾಂಶ

ವಿಜಯ್ ಮೆಚ್ಚಿಸುವ ಕೆಲಸವಲ್ಲ, ಇದು ಸತ್ಯಾಂಶ

ಮಾತು ಮುಂದುವರಿಸಿದ ಶಾಮ್ ವಿಜಯ್ ಅವರನ್ನು ಮೆಚ್ಚಿಸುವುದಕ್ಕಾಗಿ ಹೇಳುತ್ತಿಲ್ಲ, ವಿಜಯ್ ಎಲ್ಲಾ ವಿಷಯದಲ್ಲೂ ಬೇರೆ ಹಂತದಲ್ಲಿದ್ದಾರೆ, ಆದ್ರೆ ಅಲ್ಲು ಅರ್ಜುನ್ ಸಹ ಓರ್ವ ಒಳ್ಳೆ ಡಾನ್ಸರ್, ನಾವು ರೇಸ್ ಗುರ್ರಂ ಚಿತ್ರದ ಶೂಟಿಂಗ್ ಮಾಡುವಾಗ ಹಾಡಿನ ಚಿತ್ರೀಕರಣಕ್ಕೆ ಇನ್ನೂ ಐವತ್ತು ದಿನ ಬಾಕಿ ಇರುವಾಗಲೇ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದ ಎಂದು ಹೇಳಿದರು.

ಶಾಮ್ ಹೇಳಿಕೆ ಕೇಳಿ ಬಿದ್ದು ಬಿದ್ದು ನಕ್ಕ ತೆಲುಗು ಸಿನಿ ಪ್ರೇಮಿಗಳು

ಶಾಮ್ ಹೇಳಿಕೆ ಕೇಳಿ ಬಿದ್ದು ಬಿದ್ದು ನಕ್ಕ ತೆಲುಗು ಸಿನಿ ಪ್ರೇಮಿಗಳು

ಇನ್ನು ಶಾಮ್ ಅಲ್ಲು ಅರ್ಜುನ್‌ಗಿಂತ ಒಳ್ಳೆಯ ಡಾನ್ಸರ್ ಎಂದು ಹೇಳಿದ್ದನ್ನು ತೆಲುಗು ಸಿನಿ ಪ್ರೇಕ್ಷಕರು ಟ್ರೋಲ್ ಮಾಡುತ್ತಿದ್ದಾರೆ. ವಿಜಯ್ ಬಳಿ ರೇಸ್‌ ಗುರ್ರಂ ಚಿತ್ರದ ಒಂದೇ ಒಂದು ಸ್ಟೆಪ್‌ನಾದರೂ ಸರಿಯಾಗಿ ಮಾಡಿಸಿ ಆನಂತರ ಹೋಲಿಕೆ ಮಾಡಿ, ವಿಜಯ್ ಅಭಿಮಾನಿಗಳು ಟ್ರೋಲ್ ಮಾಡುತ್ತಾರೆ ಎಂಬ ಕಾರಣಕ್ಕೆ ಈ ರೀತಿಯ ಹೇಳಿಕೆ ನೀಡಿದ್ದೀರ, ಅಲ್ಲು ಅರ್ಜುನ್‌ಗೆ ದಕ್ಷಿಣ ಭಾರತದಲ್ಲಿ ಯಾರೂ ಸಹ ಡಾನ್ಸ್‌ನಲ್ಲಿ ಹೋಲಿಕೆ ಇಲ್ಲ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಇನ್ನು ಈ ಹೇಳಿಕೆಯನ್ನು ಇಟ್ಟುಕೊಂಡು ತೆಲುಗು ಸಿನಿ ಪ್ರೇಕ್ಷಕರು ಶಾಮ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

More from Filmibeat

English summary
Vijay is the best dancer and Allu Arjun will agree to it himself says actor Shaam . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X