ಫೆಬ್ರವರಿ 26ಕ್ಕೆ ಮದುವೆ ; ರಶ್ಮಿಕಾ ಮಂದಣ್ಣ -ವಿಜಯ್ ದೇವರಕೊಂಡ ವೆಡ್ಡಿಂಗ್ ಕಾರ್ಡ್ ವೈರಲ್ - ಆರತಕ್ಷತೆ ಎಲ್ಲಿ ?

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವೈಭವೋಪೇತ ಮದುವೆಗೆ ಇನ್ನೇನು ಹತ್ತೇ ದಿನ ಬಾಕಿ. ಹೀಗಂತ ನಾವು ಹೇಳ್ತಿಲ್ಲ. ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾದ ಸುದ್ದಿ ಇದು. ಕೇವಲ ಸಾಮಾಜಿಕ ಜಾಲತಾಣ ಮಾತ್ರ ಅಲ್ಲ. ಚಿತ್ರರಂಗದಲ್ಲಿ ಕೂಡ ಇವರ ಮದುವೆಯ ಚರ್ಚೆ ನಡೆಯುತ್ತಿದೆ. ರಾಜಸ್ತಾನದ ಉದಯಪುರದಲ್ಲಿ ಇಬ್ಬರು ಇದೇ ಫೆಬ್ರವರಿ 26ಕ್ಕೆ ಮದುವೆಯಾಗುವುದು ಖಚಿತ ಎಂಬ ಸುದ್ದಿ ಹರಿದಾಡುತ್ತಿದೆ.

ಆದರೆ.. ವಿಜಯ್ ದೇವರಕೊಂಡ ಆಗಲಿ ರಶ್ಮಿಕಾ ಮಂದಣ್ಣ ಆಗಲಿ ಈ ವಿಚಾರದ ಕುರಿತು ಮಾತನಾಡುವ ಗೋಜಿಗೆ ಹೋಗಿಲ್ಲ. ಮಾತನಾಡಬೇಕು ಎನ್ನುವ ಭಾವನೆ ಕೂಡ ಇಬ್ಬರಲ್ಲಿಯೂ ಬಂದಿಲ್ಲ. ಬದಲಿಗೆ ಅಡ್ಡ ಗೋಡೆಯ ಮೇಲೆ ದೀಪವನ್ನು ರಶ್ಮಿಕಾ ಇಡುತ್ತಾ ಬಂದಿದ್ದಾರೆ. ಇವರ ಮದುವೆಯ ಕುರಿತು ಊರೆಲ್ಲ ಚಿಂತೆ ಮಾಡುತ್ತಿದ್ದರೂ ಕೂಡ ಇಬ್ಬರು ಮಾತ್ರ ನೆಮ್ಮದಿಯಿಂದ ಜೊತೆ ಜೊತೆಯಾಗಿ ಓಡಾಡಿಕೊಂಡು ಇದ್ದಾರೆ.

Vijay-Rashmika Wedding Confirmed Viral Reception Invite Reveals Feb 26 Date amp amp Udaipur Venue

ಇಷ್ಟೇ ಅಲ್ಲ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಮದುವೆಯ ಶುಭಾಶಯವನ್ನು ಕೋರಿದರೆ, ನೀವೇನು ಹೇಳ್ತಿದ್ದೀರಾ ಎನ್ನುವುದು ನನಗೆ ಅರ್ಥ ಆಗ್ತಿಲ್ಲ ಎಂದು ರಶ್ಮಿಕಾ ಮಂದಣ್ಣ ಹೇಳುತ್ತಿದ್ದಾರೆ. ಈ ಮೂಲಕ ಮೊದಲೇ ಗೊಂದಲದಲ್ಲಿರುವ ಅಭಿಮಾನಿಗಳನ್ನು ಇನ್ನಷ್ಟು ಗೊಂದಲಕ್ಕೆ ದೂಡುತ್ತಿದ್ದಾರೆ.

ಹೀಗಿರುವಾಗ ಇದೀಗ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ಈ ವೆಡ್ಡಿಂಗ್ ಕಾರ್ಡ್ ನಿಜಕ್ಕೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರೇ ತಮ್ಮ ಮದುವೆಯ ಅತಿಥಿಗಳಿಗೆ ನೀಡಿದ್ದಾ..? ಅಥವಾ ಇದರ ಹಿಂದೆ ಬೇರೆ ಯಾರದದ್ದಾದರೂ ಕೈಚಳಕ ಇದೆಯಾ..? ಗೊತ್ತಿಲ್ಲ.

ಯಾರು ಈ ಮದುವೆಯ ಆಮಂತ್ರಣ ಪತ್ರಿಕೆಯ ಸತ್ಯಾಸತ್ಯತೆಯನ್ನು ಕೂಡ ಪರಿಶೀಲಿಸಿಲ್ಲ. ಆದರೂ ಕೂಡ ಹಲವರು ಇದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ಆಮಂತ್ರಣ ಪತ್ರಿಕೆಯೇ ಎಂದು ನಂಬಿದ್ದಾರೆ. ಆಹ್ವಾನ ನೀಡಿದವರ ಪೈಕಿ ಯಾರೋ ಒಬ್ಬರು ಈ ಮದುವೆ ಆಮಂತ್ರಣ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆ ವೆಡ್ಡಿಂಗ್ ಕಾರ್ಡ್ ವೈರಲ್ ಆಗಿದೆ ಎಂಬ ವಾದವನ್ನು ಕೂಡ ಮಾಡುತ್ತಿದ್ದಾರೆ.

ನಿಜಕ್ಕೂ ಈ ವೆಡ್ಡಿಂಗ್ ಕಾರ್ಡ್ ರಹಸ್ಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಗೊತ್ತಾದರು ವೈರಲ್ ಆದ ಈ ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಫೆಬ್ರವರಿ 26ರಂದು ನಡೆಯಲಿದೆ ಎಂದು ಬರೆಯಲಾಗಿದೆ. ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿನ ತಾಜ್ ಕೃಷ್ಣಾದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಉಲ್ಲೇಖ ಮಾಡಲಾಗಿದೆ.

Vijay-Rashmika Wedding Confirmed Viral Reception Invite Reveals Feb 26 Date amp amp Udaipur Venue

ನಮ್ಮ ಬದುಕಿನ ಬಹುಮುಖ್ಯವಾದ ಕ್ಷಣ ನಿಮ್ಮ ಜೊತೆ ಹಂಚಿಕೊಳ್ಳಲು ನಿಮಗೆ ಇದು ಆಮಂತ್ರಣ ಪತ್ರಿಕೆ, ನಮ್ಮ ಕುಟುಂಬದವರ ಪ್ರೀತಿ ಮತ್ತು ಆಶೀರ್ವಾದದೊಂದಿಗೆ ನಾನು ಮತ್ತು ರಶ್ಮಿಕಾ ಇದೇ ಫೆಬ್ರವರಿ 26ರಂದು ಮದುವೆಯಾಗುತ್ತಿದ್ದೇವೆ, ನಮ್ಮ ಈ ಹೊಸ ಅಧ್ಯಾಯಕ್ಕೆ ನೀವು ಕೂಡ ಸಾಕ್ಷಿಯಾಗಬೇಕು, ನಮ್ಮ ಜೊತೆ ಸಂಭ್ರಮ ಪಡಬೇಕು, ಎನ್ನುವುದು ನಮ್ಮ ಆಶಯ. ನಮಗೆ ನೀವು ತುಂಬಾ ಮುಖ್ಯ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದ ನಮ್ಮ ಈ ಕ್ಷಣವನ್ನು ಇನ್ನೂ ವಿಶೇಷವಾಗಿಸುತ್ತೆ ಎಂದು ಈ ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ರಶ್ಮಿಕಾ ಪರವಾಗಿ ಮತ್ತು ನನ್ನ ಪರವಾಗಿ ಎಂದು ಕೊನೆಯಲ್ಲಿ ಉಲ್ಲೇಖ ಮಾಡಲಾಗಿದೆ. ಸದ್ಯ ಈ ವೆಡ್ಡಿಂಗ್ ಕಾರ್ಡ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಿಜಕ್ಕೂ ಇಬ್ಬರು ಮದುವೆಯಾಗುತ್ತಿದ್ದಾರಾ..? ಸ್ಪಷ್ಟವಾದ ಉತ್ತರ ಫೆಬ್ರವರಿ 26ಕ್ಕೆ ಸಿಗಲಿದೆ.

Vijay-Rashmika Wedding Confirmed Viral Reception Invite Reveals Feb 26 Date amp amp Udaipur Venue

More from Filmibeat

English summary
STOP EVERYTHING: The Vijay Deverakonda and Rashmika Mandanna wedding invite just leaked! Fans are in a frenzy as the viral card confirms a February 26 reception. Is the long-awaited union of the "National Crush" and the "Rowdy Star" officially happening? Find out now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X