ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ: ವಿಜಯ್ ದೇವರಕೊಂಡ ತಂಡದ ಸ್ಪಷ್ಟನೆ ಹೀಗಿದೆ

ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಬಾರಿ ಚರ್ಚೆಗೆ ಮತ್ತು ಟ್ರೋಲ್‌ಗೆ ಒಳಗಾಗುವ ಜೋಡಿಯಲ್ಲಿ ಮುಂಚೂಣಿಯಲ್ಲಿರುವುದು ನಟ ವಿಜಯ್ ದೇವರಕೋಡ ಮತ್ತು ರಶ್ಮಿಕಾ ಮಂದಣ್ಣ. ಇಬ್ಬರು ಡೇಟ್ ಮಾಡುತ್ತಿದ್ದಾರೆ ಎಂಬ ವದಂತಿ ಹಲವು ವರ್ಷಗಳಿಂದಲೇ ಇದೆ. ಆದರೆ, ನಾವು ಜಸ್ಟ್ ಫ್ರೆಂಡ್ಸ್ ಎನ್ನುತ್ತಾ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ ಇಬ್ಬರು.

ಸದ್ಯಕ್ಕೆ ಸಿನಿಮಾ ಇಂಡಸ್ಟ್ರಿಯಲ್ಲಿ ಅವರ ನಿಶ್ಚಿತಾರ್ಥದ ಸುದ್ದಿಯೇ ಸಕತ್ ಹೈಲೆಟ್ ಆಗಿದೆ. ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿ ಕಿಚ್ಚು ಹಬ್ಬಿಸಿತ್ತು. ವರದಿಗಳ ಪ್ರಕಾರ, ಫೆಬ್ರವರಿಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಈಗ ಈ ವದಂತಿಗೆ ನಟ ವಿಜಯ್ ದೇವರಕೊಂಡ ಅವರ ತಂಡ ಪ್ರತಿಕ್ರಿಯೆ ನೀಡಿದೆ.

Vijay’s team reacted to Vijay Deverakoda and Rashmika Mandanna engagement rumours

ನಿಶ್ಚಿತಾರ್ಥ ವದಂತಿ: ವಿಜಯ್ ತಂಡದ ಪ್ರತಿಕ್ರಿಯೆ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಡೇಟಿಂಗ್ ವದಂತಿಗಳಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಾರೆ. ಫೆಬ್ರವರಿಯಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳಬಹುದು ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಇದೀಗ, ಹಬ್ಬಿರುವ ವು ನಿಶ್ಚಿತಾರ್ಥದ ವದಂತಿಗಳಿಗೆ ನಟ ವಿಜಯ್ ತಂಡ ಪ್ರತಿಕ್ರಿಯಿಸಿದೆ. ಈ ವರದಿಗಳನ್ನು 'ಸುಳ್ಳು' ಎಂದು ಕರೆದಿದೆ. ಸುದ್ದಿ ಸಂಸ್ಥೆ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ತಂಡ, "ಈ ಎಲ್ಲಾ ವರದಿ ಸುಳ್ಳು" ಎಂದು ಹೇಳಿದೆ.

ಇದಕ್ಕೂ ಮೊದಲು, ದೀಪಾವಳಿ ಸಂದರ್ಭದಲ್ಲಿ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡು, ಅಭಿಮಾನಿಗಳಿಗೆ ಶುಭ ಹಾರೈಸಿದ್ದರು. ಆದರೆ, ಆಗ ಎಲ್ಲರ ಗಮನವನ್ನು ಸೆಳೆದದ್ದು ಅವರ ಪೋಸ್ಟ್‌ಗಳಲ್ಲಿನ ಹೋಲಿಕೆಗಳು. ಈ ಫೋಟೋಗಳನ್ನು ಒಂದೇ ಮನೆಯಲ್ಲಿ ತೆಗೆಯಲಾಗಿದೆ ಎಂದು ಫ್ಯಾನ್ಸ್ ಊಹಿಸಿದ್ದರು.

Vijay’s team reacted to Vijay Deverakoda and Rashmika Mandanna engagement rumours

ಮದುವೆ ಬಗ್ಗೆ ವಿಜಯ್ ಮಾತು

ಕಳೆದ ವರ್ಷ ಬಿಡುಗಡೆಯಾದ 'ಖುಷಿ' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ವಿಜಯ್ ದೇವರಕೊಂಡ ಅವರು ಮದುವೆಯಲ್ಲಿ ನಂಬಿಕೆ ಇಟ್ಟಿರುವುದಾಗಿಯೂ, ಮುಂದಿನ ದಿನಗಳಲ್ಲಿ ಬೇಗ ಮದುವೆಯಾಗುವುದಾಗಿಯೂ ಹೇಳಿದ್ದರು. ಆಗಿನಿಂದಲೇ ಇಬ್ಬರ ಮದುವೆ ಬಗ್ಗೆ ವದಂತಿಗಳು ಹರಡಿದ್ದವು.

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಖ್ಯಾತಿ ಗಳಿಸಿದ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ವಿಜಯ್ ದೇವರಕೊಂಡ ಜೊತೆಗೆ 'ಗೀತಾ ಗೋವಿಂದಂ' ಸಿನಿಮಾದಲ್ಲಿ ನಟಿಸಿದ್ದರು. ಇಬ್ಬರ ಕೆಮಿಸ್ಟ್ರಿ ಸಕತ್ ಹಿಟ್ ಆಗಿತ್ತು. ಇದಾದ ಬಳಿಕ ಇಬ್ಬರು ಮತ್ತೆ 'ಡಿಯರ್ ಕಾಮ್ರೇಡ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.

More from Filmibeat

English summary
Vijay Deverakoda - Rashmika Mandanna engagement rumours: Vijay’s team reacts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X