Don't Miss!
- News
ಪತ್ರಿಕೆಗಳ ಜಾತಿ ಮೂಲ ಹುಡುಕಿ ಬಿಜೆಪಿ ಸರ್ಕಾರದ ಜಾಹೀರಾತು; ಪ್ರಿಯಾಂಕ್ ಖರ್ಗೆ ಹೀಗೆ ಹೇಳಿದ್ದು ಯಾಕೆ?
- Automobiles
ಹೊಸ ಸಿಯೆರಾ ಕಾರಿನ ವಿನ್ಯಾಸದ ಹಿಂದೆ ಇದೆ ರತನ್ ಟಾಟಾ ಐಡಿಯಾ
- Technology
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- Sports
U-19 Women's T20 World Cup 2023: ನ್ಯೂಜಿಲೆಂಡ್ ಮಣಿಸಿ ಫೈನಲ್ಗೆ ಲಗ್ಗೆ ಇಟ್ಟ ಭಾರತ ವನಿತೆಯರು
- Finance
PM kisan: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತ ಏರಿಸಲಾಗುತ್ತಾ?
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿರಂಜೀವಿ, ಬಾಲಯ್ಯಗಿಂತ ದಿಲ್ ರಾಜು ಸ್ಟ್ರಾಂಗ್? ತೆಲುಗಿಗಿಂತ ತಮಿಳಿಗೇ ಹೆಚ್ಚು ಥಿಯೇಟರ್ಸ್!
ಸಂಕ್ರಾಂತಿ ಬಂತೆಂದರೆ ಸಾಕು ತಮಿಳು ಹಾಗೂ ತೆಲುಗು ರಾಜ್ಯಗಳಲ್ಲಿ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರದಂಗಳಕ್ಕೆ ಬಂದು ಕೋಟಿ ಕೋಟಿ ಲೂಟಿ ಮಾಡಿಬಿಡುತ್ತವೆ. ಈ ಹಬ್ಬದ ಪ್ರಯುಕ್ತ ಸಾಲು ಸಾಲು ರಜೆಗಳು ಇರುವ ಕಾರಣ ಸಿನಿ ರಸಿಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಗಳತ್ತ ಬರುವುದನ್ನು ಅರಿತಿರುವ ನಿರ್ಮಾಪಕರು ಹಾಗೂ ವಿತರಕರು ಹೆಚ್ಚೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡಿ ಈ ರಜಾ ದಿನಗಳಲ್ಲಿ ಸಾಧ್ಯವಾದಷ್ಟು ಹಣ ಬಾಚಿಕೊಳ್ಳುವತ್ತ ಚಿತ್ತ ನೆಟ್ಟಿರುತ್ತಾರೆ.
ಇನ್ನು ಪ್ರತಿ ವರ್ಷದ ಹಾಗೆ ಈ ವರ್ಷದ ಹಾಗೆ ಈ ವರ್ಷವೂ ಸಹ ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಸಂಕ್ರಾಂತಿ ರೇಸ್ ಜೋರಾಗಿದೆ. ತೆಲುಗಿನಲ್ಲಿ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಹಾಗೂ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರಗಳ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ಇನ್ನು ಇಷ್ಟು ವರ್ಷಗಳಲ್ಲಿ ತೆಲುಗು ಚಿತ್ರಗಳ ಪೈಪೋಟಿಯಲ್ಲಿ ಯಾವ ಚಿತ್ರ ಗೆದ್ದು ಸಂಕ್ರಾಂತಿ ವಿನ್ನರ್ ಆಗಲಿದೆ ಹಾಗೂ ತಮಿಳು ಚಿತ್ರಗಳ ನಡುವಿನ ಪೈಪೋಟಿಯಲ್ಲಿ ಯಾವ ಚಿತ್ರ ಗೆದ್ದು ಪೊಂಗಲ್ ವಿನ್ನರ್ ಆಗಲಿದೆ ಎಂಬ ಲೆಕ್ಕಾಚಾರವಿರುತ್ತಿತ್ತು. ಆದರೆ ಈಗ ಪ್ಯಾನ್ ಇಂಡಿಯಾ ಟ್ರೆಂಡ್ ಹೆಚ್ಚಾಗಿದ್ದು, ಡಬಿಂಗ್ ಮೂಲಕ ಚಿತ್ರಗಳು ನೆರೆ ರಾಜ್ಯಗಳಿಗೂ ಕಾಲಿಟ್ಟಿವೆ. ಹೀಗಾಗಿ ತಮಿಳಿನ ಚಿತ್ರಗಳು ತೆಲುಗಿಗೂ ಡಬ್ ಆಗಿ ಬಿಡುಗಡೆಯಾಗುತ್ತಿವೆ. ಅದರಲ್ಲಿಯೂ ವಿಜಯ್ ನಟನೆಯ ವಾರಿಸು ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹೂಡಿರುವುದರಿಂದ ಈ ಚಿತ್ರದ ತೆಲುಗು ಡಬ್ಬಿಂಗ್ ವಾರಸುಡು ತೆಲುಗು ರಾಜ್ಯಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ಬಿಡುಗಡೆಯಾಗುತ್ತಿದೆ. ಇದರಿಂದ ತೆಲುಗು ಚಿತ್ರಗಳ ಬಿಡುಗಡೆಗೆ ಒಂದು ರೀತಿಯ ತೊಂದರೆ ಎದುರಾಗಿದೆ ಎಂದೇ ಹೇಳಬಹುದು.

ವಿಶಾಖಪಟ್ಟಣಂನಲ್ಲಿ ವಾರಸುಡು ಅಬ್ಬರ!
ಸಂಕ್ರಾಂತಿಗೆ ತೆಲುಗಿನ ಸ್ಟಾರ್ ನಟರಾದ ಚಿರಂಜೀವಿ ಹಾಗೂ ಬಾಲಕೃಷ್ಣ ನಟನೆಯ ಚಿತ್ರಗಳು ಬಿಡುಗಡೆಯಾಗುತ್ತಿದ್ದರೂ ಸಹ ವಿಜಯ್ ನಟನೆಯ ತೆಲುಗು ಡಬ್ಬಿಂಗ್ ಚಿತ್ರಕ್ಕೆ ವಿಶಾಖಪಟ್ಟಣಂ ನಗರದಲ್ಲಿ ಹೆಚ್ಚು ಚಿತ್ರಮಂದಿರಗಳು ದೊರಕಿರುವುದು ಸದ್ಯ ಚಿರಂಜೀವಿ ಹಾಗೂ ಬಾಲಯ್ಯಗಿಂತ ದಿಲ್ ರಾಜು ಚಿತ್ರರಂಗದಲ್ಲಿ ಸ್ಟ್ರಾಂಗಾ ಎಂಬ ಪ್ರಶ್ನೆಯನ್ನು ಮೂಡಿಸಿದೆ. ಹೌದು, ತೆಲುಗು ಚಿತ್ರಗಳಿಗೆ ಒಳ್ಳೆಯ ಕಲೆಕ್ಷನ್ ಸಿಗುವ ನಗರಗಳಲ್ಲಿ ಒಂದಾಗಿರುವ ವಿಶಾಖಪಟ್ಟಣದಲ್ಲಿ ತೆಲುಗು ಚಿತ್ರಗಳಿಗಿಂತ ದಿಲ್ ರಾಜು ನಿರ್ಮಾಣದ ತಮಿಳಿನ ವಾರಿಸು ಚಿತ್ರದ ತೆಲುಗು ಡಬ್ಬಿಂಗ್ ವಾರಸುಡುಗೆ ಹೆಚ್ಚು ಚಿತ್ರಮಂದಿರಗಳು ಲಭಿಸಿವೆ.

ವಾರಸುಡುಗೆ ಎರಡರಷ್ಟು ಚಿತ್ರಮಂದಿರಗಳು
ವಾರಸುಡು ಚಿತ್ರ ವಿಶಾಖಪಟ್ಟಣದಲ್ಲಿ ಒಟ್ಟು ಎಂಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದರೆ, ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಹಾಗೂ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರಗಳು ತಲಾ ಐದೈದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಇನ್ನು ದಿಲ್ ರಾಜು ನಿರ್ಮಾಣದ ಜತೆಗೆ ಹಲವು ವರ್ಷಗಳಿಂದಲೂ ಸಹ ವಿತರಕನಾಗಿರುವ ಕಾರಣ ಈ ರೀತಿ ತನ್ನ ಹಿಡಿತದಲ್ಲಿರುವ ಚಿತ್ರಮಂದಿರಗಳನ್ನು ವಾರಸುಡುಗೆ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮೂಲ ತೆಲುಗು ಚಿತ್ರಗಳ ಮುಂದೆಯೇ ತಮಿಳಿನ ಡಬ್ಬಿಂಗ್ ಚಿತ್ರವೊಂದು ಅಬ್ಬರಿಸಿ ಹೆಚ್ಚು ಥಿಯೇಟರ್ ಪಡೆದಿರುವುದು ಈಗ ಚಿರಂಜೀವಿ ಹಾಗೂ ಬಾಲಯ್ಯನ ಸ್ಟಾರ್‌ಡಂಗೆ ಸವಾಲಾಗಿದೆ.

ನಿರ್ಮಾಪಕ ಸಂಘದ ಆದೇಶಕ್ಕೆ ಸೊಪ್ಪು ಹಾಕದ ದಿಲ್ ರಾಜು
ಇನ್ನು ಕೆಲ ದಿನಗಳ ಹಿಂದೆಯೇ ತೆಲುಗು ನಿರ್ಮಾಪಕರ ಸಂಘ ದೊಡ್ಡ ಹಬ್ಬಗಳಂದು ಮೊದಲು ಮೂಲ ತೆಲುಗು ಚಿತ್ರಗಳಿಗೆ ಆದ್ಯತೆ ನೀಡಬೇಕು, ನಂತರ ಡಬ್ಬಿಂಗ್ ಚಿತ್ರಗಳಿಗೆ ಚಿತ್ರಮಂದಿರಗಳನ್ನು ನೀಡಬೇಕು ಎಂದು ನಿರ್ಧಾರವನ್ನು ಕೈಗೊಂಡಿತ್ತು. ಈ ನಿರ್ಧಾರದ ಬಳಿಕ ತೆಲುಗು ಚಿತ್ರಗಳಿಗೆ ದೊಡ್ಡ ಚಿತ್ರಮಂದಿರಗಳು ಲಭಿಸುತ್ತವೆ, ಡಬ್ಬಿಂಗ್ ಚಿತ್ರಗಳ ಹಾವಳಿ ಇರುವುದಿಲ್ಲ ಎಂದೇ ಎಣಿಸಲಾಗಿತ್ತು. ಆದರೆ ಈ ನಿರ್ಧಾರಕ್ಕೆ ಕಿಂಚಿತ್ತೂ ಬೆಲೆ ಕೊಡದ ದಿಲ್ ರಾಜು ತೆಲುಗು ಚಿತ್ರಗಳಿಗಿಂತ ಡಬ್ಬಿಂಗ್ ಚಿತ್ರವನ್ನು ಹೆಚ್ಚು ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸಿದ್ದು, ಈ ನಿರ್ಧಾರ ತೆಲುಗು ಮಂದಿಯ ಕೋಪಕ್ಕೆ ಕಾರಣವಾಗಿದೆ.