For Quick Alerts
  ALLOW NOTIFICATIONS  
  For Daily Alerts

  ಈ ವಿಚಾರದಲ್ಲಿ ಪ್ರಭಾಸ್, ಮಹೇಶ್, ಅಲ್ಲು ಅರ್ಜುನ್ ಹಿಂದಿಕ್ಕಿದ ವಿಜಯ್ ದೇವರಕೊಂಡ

  |

  ದಕ್ಷಿಣ ಭಾರತೀಯ ಚಿತ್ರರಂಗದ ಸೆನ್ಸೇಷನ್ ನಟ ವಿಜಯ್ ದೇವರಕೊಂಡ. ಟಾಲಿವುಡ್ ಮಾತ್ರವಲ್ಲದೆ ಬಾಲಿವುಡ್ ನಲ್ಲಿಯೂ ಖ್ಯಾತಿಗಳಿಸಿರುವ ವಿಜಯ್ ಸಿನಿಮಾ ಮತ್ತು ಲಿಂಕ್ ಅಪ್ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಿದ್ದರು. ಆದರೀಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ.

  ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ , ಆದರೂ ಸಂಕಷ್ಟ ತಪ್ಪಿದ್ದಲ್ಲ | Serial | Television

  ಹೌದು, ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ನಟ ವಿಜಯ್ ದೇವರಕೊಂಡ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಸಂಖ್ಯೆಯ ಫಾಲೋವರ್ಸ್ ಹೊಂದಿದ ನಟನಾಗಿ ಹೊರಹೊಮ್ಮಿದ್ದಾರೆ. ಸೌತ್ ಸಿನಿ ಇಂಡಸ್ಟ್ರಿಯ ಸ್ಟಾರ್ ನಟರನ್ನೆಲ್ಲ ಹಿಂದಿಕ್ಕಿ ವಿಜಯ್ ದೇವರಕೊಂಡ ಮೊದಲ ಸ್ಥಾನದಲ್ಲಿದ್ದಾರೆ. ಮುಂದೆ ಓದಿ...

  ವಿಜಯ್ ದೇವರಕೊಂಡ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬುವಿಜಯ್ ದೇವರಕೊಂಡ ಬೆಂಬಲಕ್ಕೆ ನಿಂತ ಮೆಗಾಸ್ಟಾರ್ ಚಿರಂಜೀವಿ, ಮಹೇಶ್ ಬಾಬು

  7 ಮಿಲಿಯಮ್ ಫಾಲೋವರ್ಸ್

  7 ಮಿಲಿಯಮ್ ಫಾಲೋವರ್ಸ್

  ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಚಿತ್ರಪ್ರಿಯರ ಹಾಟ್ ಫೇವರಿಟ್ ನಟನಾಗಿ ಗುರುಸಿಕೊಂಡಿರುವ ವಿಜಯ್ ದೇವರಕೊಂಡ ಇನ್ಸ್ಟಾಗ್ರಾಮ್ ನಲ್ಲಿಯೂ ಕಿಂಗ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅತೀ ಹೆಚ್ಚು ಫಾಲೋರ್ವ್ಸ್ ಹೊಂದಿರುವ ದಕ್ಷಿಣ ಭಾರತೀಯ ನಟರ ಪೈಕಿ ವಿಜಯ್ ದೇವರಕೊಂಡ ಮೊದಲ ಸ್ಥಾನದಲ್ಲಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಇನ್ಸ್ಟಾದಲ್ಲಿ 7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

  ದೇವರಕೊಂಡರನ್ನು ದೂರ ಇಟ್ಟರೇ ರಶ್ಮಿಕಾ: ವಿಜಯ್ ಬಗ್ಗೆ ಮಾತನಾಡಲು ಹಿಂದೇಟ್ಹಾಕಿದ್ದೇಕೆ ಕಿರಿಕ್ ನಟಿ?ದೇವರಕೊಂಡರನ್ನು ದೂರ ಇಟ್ಟರೇ ರಶ್ಮಿಕಾ: ವಿಜಯ್ ಬಗ್ಗೆ ಮಾತನಾಡಲು ಹಿಂದೇಟ್ಹಾಕಿದ್ದೇಕೆ ಕಿರಿಕ್ ನಟಿ?

  ಗಮನ ಸೆಳೆಯುತ್ತಿವೆ ವಿಜಯ್ ಇನ್ಸ್ಟಾ ಫೋಟೋಗಳು

  ಗಮನ ಸೆಳೆಯುತ್ತಿವೆ ವಿಜಯ್ ಇನ್ಸ್ಟಾ ಫೋಟೋಗಳು

  ಇನ್ಸ್ಟಾಗ್ರಾಮ್ ವಿಜಯ್ ಅಭಿಮಾನಿಗಳ ಮನ ಸೆಳೆಯುವ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅದ್ಭುತವಾದ ಫೋಟೋಶೂಟ್ ಗಳನ್ನು ವಿಜಯ್ ಇನ್ಸ್ಟಾದಲ್ಲಿ ಶೇರ್ ಮಾಡುತ್ತಿದ್ದಾರೆ. ಹೆಚ್ಚು ಸಂಖ್ಯೆ ಮಹಿಳಾ ಅಭಿಮಾನಿ ಬಳಗ ಹೊಂದಿರುವ ವಿಜಯ್ ಇದುವರೆಗೂ ಇನ್ಸ್ಟಾದಲ್ಲಿ 163 ಪೋಸ್ಟ್ ಗಳನ್ನು ಮಾಡಿದ್ದಾರೆ. ಇದುವರೆಗೂ ವಿಜಯ್ ಯಾರನ್ನು ಫಾಲೋಮಾಡುತ್ತಿಲ್ಲ.

  ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದ 'ಫೈಟರ್' ಸಿನಿಮಾ ದೇವರಕೊಂಡ ಪಾಲಾಗಿದ್ದೇಗೆ?ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದ 'ಫೈಟರ್' ಸಿನಿಮಾ ದೇವರಕೊಂಡ ಪಾಲಾಗಿದ್ದೇಗೆ?

  ಪ್ರಭಾಸ್, ಮಹೇಶ್ ಬಾಬು, ಅಲ್ಲು ಹಿಂದಿಕ್ಕಿದ ದೇವರಕೊಂಡ

  ಪ್ರಭಾಸ್, ಮಹೇಶ್ ಬಾಬು, ಅಲ್ಲು ಹಿಂದಿಕ್ಕಿದ ದೇವರಕೊಂಡ

  ತೆಲುಗು ಸೂಪರ್ ಸ್ಟಾರ್ ಗಳಾದ ಪ್ರಭಾಸ್, ಮಹೇಶ್ ಬಾಬು, ಅಲ್ಲು ಅರ್ಜುನ್ ಮತ್ತು ರಾಮ್ ಚರಣ್ ಅವರನ್ನು ಹಿಂದಿಕ್ಕಿ ವಿಜಯ್ ದೇವರಕೊಂಡ ಮೊದಲ ಸ್ಥಾನದಲ್ಲಿದ್ದಾರೆ. ಹೆಚ್ಚು ಅಭಿಮಾನಿಗಳನ್ನು ಮತ್ತು ಸಾಮಾಜಿಕ ಜಾಲತಣದಲ್ಲಿಯೂ ಹೆಚ್ಚು ಫಾಲೋವರ್ಸ್ ಹೊಂದಿದ ನಟರನ್ನೆಲ್ಲ ವಿಜಯ್ ಹಿಂದಿಕ್ಕಿ ಮುನ್ನುಗ್ಗಿದ್ದಾರೆ.

  ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣದ ನಟರು

  ಹೆಚ್ಚು ಫಾಲೋವರ್ಸ್ ಹೊಂದಿರುವ ದಕ್ಷಿಣದ ನಟರು

  ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ನಟರು ಅಂದರೆ ಅಲ್ಲು ಅರ್ಜುನ್, ಮಲಯಾಳಂ ನಟ ದುಲ್ಕರ್ ಸಲ್ಮಾನ್, ಪ್ರಭಾಸ್, ಮತ್ತು ಮಹೇಶ್ ಬಾಬು. ನಟ ಅಲ್ಲು ಅರ್ಜುನ್ 6.7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ದುಲ್ಕರ್ ಸಲ್ಮಾನ್ 5.3 ಮಿಲಿಯನ್, ಪ್ರಭಾಸ್ 4.5 ಮಿಲಿಯನ್ ಮತ್ತು ಮಹೇಶ್ ಬಾಬು 4.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

  ಫೈಟರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಬ್ಯುಸಿ

  ಫೈಟರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಬ್ಯುಸಿ

  ವಿಜಯ್ ದೇವರಕೊಂಡ ಸದ್ಯ ನಿರ್ದೇಶಕ ಪುರಿ ಜಗನ್ನಾಥ್ ಅವರ ಫೈಟರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ವಿಜಯ್ ಜೊತೆ ಬಾಲಿವುಡ್ ನಟಿ ಅನನ್ಯ ಪಾಂಡೆ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತೀಯ ಭಾಷೆಗಳ ಜೊತೆ ಫೈಟರ್ ಹಿಂದಿಯಲ್ಲಿಯೂ ರಿಲೀಸ್ ಆಗುತ್ತಿದೆ.

  English summary
  Telugu Actor Vijaya Devarakonda is the first south hero to bags 7 million followers on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X