Just In
- 1 hr ago
ಜೂ.ಎನ್ಟಿಆರ್ ಪರವಾಗಿ ಸರ್ಕಾರಕ್ಕೆ ದಂಡ ಕಟ್ಟಿದ ಅಭಿಮಾನಿ
- 3 hrs ago
ಫೋಟೋ ಶೇರ್ ಮಾಡಿ ಮಗಳ ಹುಟ್ಟುಹಬ್ಬಕ್ಕೆ ನೆನಪಿರಲಿ ಪ್ರೇಮ್ ಪ್ರೀತಿಯ ವಿಶ್
- 16 hrs ago
'ಓ ಮೈ ಗಾಡ್-2' ಚಿತ್ರಕ್ಕಾಗಿ ಮತ್ತೆ ಒಂದಾದ ಅಕ್ಷಯ್ ಕುಮಾರ್-ಪರೇಶ್ ರಾವಲ್
- 16 hrs ago
ಬೆಂಕಿ ಹಚ್ಚಿ ಆನೆ ಸಾವು: ಈ ಪೈಶಾಚಿಕ ಕೃತ್ಯ ನಡೆಸಿದ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು- ಸುಮಲತಾ
Don't Miss!
- News
ಭಾರತದ 150 ಜನರಲ್ಲಿ ಬ್ರಿಟನ್ ಮೂಲದ ಕೊರೊನಾವೈರಸ್
- Sports
ಐಎಸ್ಎಲ್: ಅಂಕ ಹಂಚಿಕೊಂಡ ಕೇರಳ ಬ್ಲಾಸ್ಟರ್ಸ್ ಮತ್ತು ಗೋವಾ
- Finance
ರೇಷನ್ ಕಾರ್ಡ್ ನಲ್ಲಿ ವಿಳಾಸದ ಮಾಹಿತಿ ಆನ್ ಲೈನ್ ಅಪ್ ಡೇಟ್ ಮಾಡುವುದು ಹೇಗೆ?
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Automobiles
ವಾರದ ಪ್ರಮುಖ ಆಟೋ ಸುದ್ದಿ: ಆಲ್ಟ್ರೊಜ್ ಐಟರ್ಬೋ ಬಿಡುಗಡೆ, ಜಾರಿಗೆ ಬರಲಿದೆ ಹೊಸ ಆಟೋ ಇನ್ಸುರೆನ್ಸ್..
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಕ್ಕಳಿಲ್ಲ ಏಕೆ? ಆಸ್ತಿಯನ್ನೆಲ್ಲಾ ಏನು ಮಾಡುತ್ತೀರಿ? ವಿಜಯಶಾಂತಿ ಕೊಟ್ಟರು ಉತ್ತರ
ಪಂಚಭಾಷಾ ನಟಿ ವಿಜಯಶಾಂತಿ ಗೊತ್ತಿರದ ಸಿನಿಪ್ರೇಮಿಗಳು ಕಡಿಮೆ. ಲೇಡಿ ಅಮಿತಾಬ್ ಎಂತಲೇ ಖ್ಯಾತರಾಗಿದ್ದ ವಿಜಯಶಾಂತಿ, 80-90 ರ ದಶಕದಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದವರು.
80 ರ ದಶಕದಲ್ಲಿ ವರ್ಷವೊಂದಕ್ಕೆ ವಿಜಯಶಾಂತಿ ನಟಿಸಿದ 17-18 ಸಿನಿಮಾಗಳು ಬಡಿಗುಡೆ ಆಗುತ್ತಿದ್ದವು. ಕನ್ನಡ, ತೆಲುಗು, ತಮಿಳು, ಮಲಯಾಲಂ, ಹಿಂದಿ ಭಾಷೆಗಳಲ್ಲಿ ಸಮಾನವಾಗಿ ಬ್ಯುಸಿಯಾಗಿದ್ದರು ನಟಿ ವಿಜಯಶಾಂತಿ.
1998 ರ ಬಳಿಕ ಸಿನಿಮಾಗಳಲ್ಲಿ ಅವಕಾಶ ತುಸು ಕಡಿಮೆಯಾದಾಗ ರಾಜಕೀಯದ ಕಡೆಗೆ ಹೊರಳಿದ ವಿಜಯಶಾಂತಿ, 2004 ರ ವರೆಗೆ ನಟಿಸಿ ನಂತರ ಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡರು. ನಂತರ ಈಗ 2020 ರಲ್ಲಿ ಬಿಡುಗಡೆ ಆದ 'ಸರಿಲೇರು ನೀಕೆವ್ವರು' ಸಿನಿಮಾದ ಮೂಲಕ ಮರಳಿ ಸಿನಿಮಾರಂಗ ಪ್ರವೇಶಿಸಿರುವ ಅವರಿಗೆ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿವೆಯಂತೆ. ಈ ನಡುವೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ನಟಿ ವಿಜಯಶಾಂತಿ.

ಎಂ.ವಿ.ಶ್ರೀನಿವಾಸ್ ಪ್ರಸಾದ್ ಜೊತೆ ವಿವಾಹ
1988 ರಲ್ಲಿ ನಟಿ ವಿಜಯಶಾಂತಿ ಎಂ.ವಿ.ಶ್ರೀನಿವಾಸ್ ಪ್ರಸಾದ್ ಎಂಬುವರನ್ನು ಗುಟ್ಟಾಗಿ ವಿವಾಹವಾದರು. ಯಾವುದೇ ಅಡೆ-ತಡೆ ಇಲ್ಲದೆ ಇಬ್ಬರೂ ಆರಾಮವಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಈ ಜೋಡಿಗೆ ಮಕ್ಕಳಿಲ್ಲ. ಈ ಬಗ್ಗೆ ಕೆಲ ತಿಂಗಳ ಹಿಂದೆ ಮಾಧ್ಯಮಗಳ ಬಳಿ ಮಾತನಾಡಿದರು.

ಜನಸೇವೆ, ರಾಜಕೀಯದಲ್ಲಿ ತಲ್ಲೀನಳಾಗಿದ್ದೆ: ವಿಜಯಶಾಂತಿ
ನಾನು ರಾಜಕೀಯ ಪ್ರವೇಶ ಮಾಡಿದಾಗ ಪುರ್ಣ ಗಮನವೆಲ್ಲಾ ಅದರ ಬಗ್ಗೆ ಕೊಟ್ಟಿದ್ದೆ. ದಿನಗಳ ಕಳೆದಂತೆ ರಾಜಕೀಯದಲ್ಲಿ ಹೆಚ್ಚು ಸಕ್ರಿಯಳಾದೆ, ಆ ಸಮಯದಲ್ಲಿ ಜನ ಸೇವೆಯೇ ಮೊದಲ ಆದ್ಯತೆಯಾಗಿ ಪರಿಗಣಿಸಿ ಕೊನೆಗೆ ಮಕ್ಕಳು ಬೇಡವೆಂದು ನಿರ್ಣಯಿಸಿದೆವು ಎಂದಿದ್ದಾರೆ ವಿಜಯಶಾಂತಿ.

ಬಡ ಜನರಿಗೆ ನನ್ನ ಆಸ್ತಿ ಹಂಚಿಕೆ ಮಾಡುತ್ತೇನೆ: ವಿಜಯಶಾಂತಿ
'ನಾನು ಜನರಿಂದ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ, ಹಾಗಾಗಿ ನನ್ನ ಸಕಲ ಆಸ್ತಿಯನ್ನು ಅವರಿಗಾಗಿಯೇ ಬಿಟ್ಟು ಹೋಗುತ್ತೇನೆ. ಯಾರು ಬಡವರಿರುತ್ತಾರೊ ಅವರಿಗೆ, ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನನ್ನ ಆಸ್ತಿ ಉಪಯೋಗವಾಗುವಂತೆ ನೋಡಿಕೊಳ್ಳುತ್ತೇನೆ' ಎಂದಿದ್ದಾರೆ ವಿಜಯಶಾಂತಿ.

ಮತ್ತೆ ಬಿಜೆಪಿ ಸೇರ್ಪಡೆಯಾಗಿರುವ ವಿಜಯಶಾಂತಿ
1998 ರಲ್ಲಿ ಬಿಜೆಪಿಯಿಂದ ರಾಜಕೀಯ ಪ್ರಾರಂಭಿಸಿದ್ದ ವಿಜಯಶಾಂತಿ, ತಮ್ಮದೇ ಪಕ್ಷ ಕಟ್ಟಿ ನಂತರ ಎಐಡಿಎಂಕೆ ಪರ ಪ್ರಚಾರ ಮಾಡಿ, ನಂತರ ಕಾಂಗ್ರೆಸ್, ನಂತರ ಟಿಆರ್‌ಎಸ್ ಪಕ್ಷಗಳ ಬಳಿಕ ಈಗ ಮತ್ತೆ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಡಿಸೆಂಬರ್ 6 ನೇ ತಾರೀಖಿನಂದು ಅಮಿತ್ ಶಾ ಎದುರು ಬಿಜೆಪಿಗೆ ಸೇರಿದ್ದಾರೆ ವಿಜಯಶಾಂತಿ.