twitter
    For Quick Alerts
    ALLOW NOTIFICATIONS  
    For Daily Alerts

    ಮಕ್ಕಳಿಲ್ಲ ಏಕೆ? ಆಸ್ತಿಯನ್ನೆಲ್ಲಾ ಏನು ಮಾಡುತ್ತೀರಿ? ವಿಜಯಶಾಂತಿ ಕೊಟ್ಟರು ಉತ್ತರ

    |

    ಪಂಚಭಾಷಾ ನಟಿ ವಿಜಯಶಾಂತಿ ಗೊತ್ತಿರದ ಸಿನಿಪ್ರೇಮಿಗಳು ಕಡಿಮೆ. ಲೇಡಿ ಅಮಿತಾಬ್ ಎಂತಲೇ ಖ್ಯಾತರಾಗಿದ್ದ ವಿಜಯಶಾಂತಿ, 80-90 ರ ದಶಕದಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದವರು.

    80 ರ ದಶಕದಲ್ಲಿ ವರ್ಷವೊಂದಕ್ಕೆ ವಿಜಯಶಾಂತಿ ನಟಿಸಿದ 17-18 ಸಿನಿಮಾಗಳು ಬಡಿಗುಡೆ ಆಗುತ್ತಿದ್ದವು. ಕನ್ನಡ, ತೆಲುಗು, ತಮಿಳು, ಮಲಯಾಲಂ, ಹಿಂದಿ ಭಾಷೆಗಳಲ್ಲಿ ಸಮಾನವಾಗಿ ಬ್ಯುಸಿಯಾಗಿದ್ದರು ನಟಿ ವಿಜಯಶಾಂತಿ.

    1998 ರ ಬಳಿಕ ಸಿನಿಮಾಗಳಲ್ಲಿ ಅವಕಾಶ ತುಸು ಕಡಿಮೆಯಾದಾಗ ರಾಜಕೀಯದ ಕಡೆಗೆ ಹೊರಳಿದ ವಿಜಯಶಾಂತಿ, 2004 ರ ವರೆಗೆ ನಟಿಸಿ ನಂತರ ಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡರು. ನಂತರ ಈಗ 2020 ರಲ್ಲಿ ಬಿಡುಗಡೆ ಆದ 'ಸರಿಲೇರು ನೀಕೆವ್ವರು' ಸಿನಿಮಾದ ಮೂಲಕ ಮರಳಿ ಸಿನಿಮಾರಂಗ ಪ್ರವೇಶಿಸಿರುವ ಅವರಿಗೆ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿವೆಯಂತೆ. ಈ ನಡುವೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ವಿಷಯಗಳ ಬಗ್ಗೆ ಮಾತನಾಡಿದ್ದಾರೆ ನಟಿ ವಿಜಯಶಾಂತಿ.

    ಎಂ.ವಿ.ಶ್ರೀನಿವಾಸ್ ಪ್ರಸಾದ್ ಜೊತೆ ವಿವಾಹ

    ಎಂ.ವಿ.ಶ್ರೀನಿವಾಸ್ ಪ್ರಸಾದ್ ಜೊತೆ ವಿವಾಹ

    1988 ರಲ್ಲಿ ನಟಿ ವಿಜಯಶಾಂತಿ ಎಂ.ವಿ.ಶ್ರೀನಿವಾಸ್ ಪ್ರಸಾದ್ ಎಂಬುವರನ್ನು ಗುಟ್ಟಾಗಿ ವಿವಾಹವಾದರು. ಯಾವುದೇ ಅಡೆ-ತಡೆ ಇಲ್ಲದೆ ಇಬ್ಬರೂ ಆರಾಮವಾಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಈ ಜೋಡಿಗೆ ಮಕ್ಕಳಿಲ್ಲ. ಈ ಬಗ್ಗೆ ಕೆಲ ತಿಂಗಳ ಹಿಂದೆ ಮಾಧ್ಯಮಗಳ ಬಳಿ ಮಾತನಾಡಿದರು.

    ಜನಸೇವೆ, ರಾಜಕೀಯದಲ್ಲಿ ತಲ್ಲೀನಳಾಗಿದ್ದೆ: ವಿಜಯಶಾಂತಿ

    ಜನಸೇವೆ, ರಾಜಕೀಯದಲ್ಲಿ ತಲ್ಲೀನಳಾಗಿದ್ದೆ: ವಿಜಯಶಾಂತಿ

    ನಾನು ರಾಜಕೀಯ ಪ್ರವೇಶ ಮಾಡಿದಾಗ ಪುರ್ಣ ಗಮನವೆಲ್ಲಾ ಅದರ ಬಗ್ಗೆ ಕೊಟ್ಟಿದ್ದೆ. ದಿನಗಳ ಕಳೆದಂತೆ ರಾಜಕೀಯದಲ್ಲಿ ಹೆಚ್ಚು ಸಕ್ರಿಯಳಾದೆ, ಆ ಸಮಯದಲ್ಲಿ ಜನ ಸೇವೆಯೇ ಮೊದಲ ಆದ್ಯತೆಯಾಗಿ ಪರಿಗಣಿಸಿ ಕೊನೆಗೆ ಮಕ್ಕಳು ಬೇಡವೆಂದು ನಿರ್ಣಯಿಸಿದೆವು ಎಂದಿದ್ದಾರೆ ವಿಜಯಶಾಂತಿ.

    ಬಡ ಜನರಿಗೆ ನನ್ನ ಆಸ್ತಿ ಹಂಚಿಕೆ ಮಾಡುತ್ತೇನೆ: ವಿಜಯಶಾಂತಿ

    ಬಡ ಜನರಿಗೆ ನನ್ನ ಆಸ್ತಿ ಹಂಚಿಕೆ ಮಾಡುತ್ತೇನೆ: ವಿಜಯಶಾಂತಿ

    'ನಾನು ಜನರಿಂದ ಈ ಮಟ್ಟಕ್ಕೆ ಬೆಳೆದು ಬಂದಿದ್ದೇನೆ, ಹಾಗಾಗಿ ನನ್ನ ಸಕಲ ಆಸ್ತಿಯನ್ನು ಅವರಿಗಾಗಿಯೇ ಬಿಟ್ಟು ಹೋಗುತ್ತೇನೆ. ಯಾರು ಬಡವರಿರುತ್ತಾರೊ ಅವರಿಗೆ, ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನನ್ನ ಆಸ್ತಿ ಉಪಯೋಗವಾಗುವಂತೆ ನೋಡಿಕೊಳ್ಳುತ್ತೇನೆ' ಎಂದಿದ್ದಾರೆ ವಿಜಯಶಾಂತಿ.

    Recommended Video

    Act 1978 ಸಿನಿಮಾ ನೋಡಿ ಮಹತ್ವದ ಆದೇಶ ಹೊರಡಿಸಿದ ಸರ್ಕಾರ | Filmibeat Kannada
    ಮತ್ತೆ ಬಿಜೆಪಿ ಸೇರ್ಪಡೆಯಾಗಿರುವ ವಿಜಯಶಾಂತಿ

    ಮತ್ತೆ ಬಿಜೆಪಿ ಸೇರ್ಪಡೆಯಾಗಿರುವ ವಿಜಯಶಾಂತಿ

    1998 ರಲ್ಲಿ ಬಿಜೆಪಿಯಿಂದ ರಾಜಕೀಯ ಪ್ರಾರಂಭಿಸಿದ್ದ ವಿಜಯಶಾಂತಿ, ತಮ್ಮದೇ ಪಕ್ಷ ಕಟ್ಟಿ ನಂತರ ಎಐಡಿಎಂಕೆ ಪರ ಪ್ರಚಾರ ಮಾಡಿ, ನಂತರ ಕಾಂಗ್ರೆಸ್, ನಂತರ ಟಿಆರ್‌ಎಸ್ ಪಕ್ಷಗಳ ಬಳಿಕ ಈಗ ಮತ್ತೆ ಬಿಜೆಪಿ ಸೇರ್ಪಡೆ ಆಗಿದ್ದಾರೆ. ಡಿಸೆಂಬರ್ 6 ನೇ ತಾರೀಖಿನಂದು ಅಮಿತ್‌ ಶಾ ಎದುರು ಬಿಜೆಪಿಗೆ ಸೇರಿದ್ದಾರೆ ವಿಜಯಶಾಂತಿ.

    English summary
    Actor, Politician Vijayashanti talks about why she decided not to have Children. She said she will donate her property to poor people.
    Friday, December 18, 2020, 16:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X